ಸಾಮಾನ್ಯವಾಗಿ ಒಂದು ಚಿತ್ರ ಬಿಡುಗಡೆ ಆಗುವುದಕ್ಕೂ ಮೊದಲು ಅದರ ಪ್ರೀಮಿಯರ್ ಮತ್ತು ಪೇಯ್ಡ್ ಪ್ರೀಮಿಯರ್ ಪ್ರದರ್ಶನಗಳು ನಡೆಯುವುದುಂಟು. ಈಗ ಧಾರಾವಾಹಿಯೊಂದರ ಪ್ರೀಮಿಯರ್ ಪ್ರದರ್ಶನ ನಡೆದಿರುವುದು ವಿಶೇಷ.
ಸನ್ ಉದಯ ವಾಹಿನಿಯಲ್ಲಿ ಜುಲೈ 6ರಿಂದ ರಾತ್ರಿ 7.30ಕ್ಕೆ ‘ಭಾಗ್ಯವಂತರು’ ಪ್ರಸಾರವಾಗಲಿದೆ. ಅದಕ್ಕೂ ಮೊದಲು ಭಾನುವಾರ, ಬೇಡರಹಳ್ಳಿಯಲ್ಲಿರುವ ಸ್ಪೂರ್ತಿಧಾಮದಲ್ಲಿ ಎರಡು ಕಂತುಗಳ ಪ್ರೀಮಿಯರ್ ಷೋ ಏರ್ಪಾಟು ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ನಾಯಕಿ ತನ್ವಿ ರಾವ್ ಮಾತನಾಡಿ, ‘ಈ ತರಹದ ಪ್ರೀಮಿಯರ್ ಷೋ ಚಿತ್ರರಂಗದಲ್ಲಿ ಜರಗುತ್ತದೆ. ಆದರೆ, ನನಗೆ ಮೊಟ್ಟ ಮೊದಲ ಬಾರಿ ವೀಕ್ಷಕರ ಸಮ್ಮುಖದಲ್ಲಿ ಕುಳಿತುಕೊಂಡು ಧಾರಾವಾಹಿ ನೋಡಿರುವುದು ಖುಷಿ ತಂದಿದೆ’ ಎಂದರು.

ಇದೊಂದು ಸ್ಯಾಂಪಲ್ ಅಷ್ಟೇ ಎಂದ ನಟ ಸುರೇಶ್ ರೈ, ‘ಎಲ್ಲರ ಪರಿಶ್ರಮದಿಂದ ಸಿದ್ದಗೊಮಡಿರುವ ಈ ಧಾರವಾಹಿ ಬಹಳ ವಿಭಿನ್ನವಾಗಿದ್ದು ಎಲ್ಲರ ಮೆಚ್ಚುಗೆ ಪಡೆಯುವುದರಲ್ಲಿ ಸಂಶಯವಿಲ್ಲ’ ಎಂದರು.
ಕಲಾವಿದರುಗಳಾದ ಆರ್.ಕೆ. ಚಂದನ್, ಶಾಲಿನಿ, ಸಮೀಕ್ಷಾ, ಧನ್ಯಾ, ವರ್ಷಾ, ಶ್ರೀವಾಯು, ಮಧು ಸಾಗರ, ಲಕ್ಷೀ ಹೆಗಡೆ, ರಿಷಾ, ವಿಠಲ್ ಕಾಮತ್, ಪ್ರಕೃತಿ ಪಾಟೀಲ್, ಜಯಲಕ್ಷೀ ಪಟೇಲ್ ಮುಂತಾದವರು ಧಾರವಾಹಿಯ ಬಗ್ಗೆ ಅನುಭವ ಹಂಚಿಕೊಂಡರು.
ASM ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ʻಭಾಗ್ಯವಂತರುʼ ಧಾರಾವಾಹಿಗೆ ಸಂಪೃಥ್ವಿ ನಿರ್ದೇಶನ ಮಾಡುತ್ತಿದ್ದಾರೆ. ರಮಣ ಬಂಗಾರು ನಿರ್ಮಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶುಭ್ರ ಪುತ್ರಕಳ ಅವರ ಕಥೆ-ಚಿತ್ರಕಥೆ ಶುಭ್ರ ಪುತ್ರಕಳ, ಸುಮಾ ಶಿಂಗ್ನಳ್ಳಿ ಸಂಭಾಷಣೆ ಈ ಧಾರಾವಾಹಿಗಿದೆ.
ಉತ್ತರ ಧ್ರುವದಿಂದ ದಕ್ಷಿಣ ಧ್ರುವಕೆ ‘ಕಲ್ಯಾಣಿ’; ಗಿರಿರಾಜ್ ಹೊಸ ಪ್ರೇಮಕಥೆ


