ಪ್ರಜ್ವಲ್‍ ಡಬ್ಬಿಂಗೂ ಮಾಡ್ಲಿಲ್ಲ; ಟ್ರೇಲರ್ ಬಿಡುಗಡೆಗೂ ಬರ್ಲಿಲ್ಲ …

ಚಂದನವನ, ಸಿನಿ ಸುದ್ದಿ

ಪ್ರಜ್ವಲ್‍ ದೇವರಾಜ್‍ ಅಭಿನಯದ ‘ಕರಾವಳಿ’ ಚಿತ್ರವು ಜುಲೈ 24ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಮಧ್ಯೆ, ಮಂಗಳವಾರ ಬೆಳಿಗ್ಗೆ ಚಿತ್ರದ ಟ್ರೇಲರ್‍ ಬಿಡುಗಡೆಯಾಗಿದೆ. ಪ್ರಜ್ವಲ್‍ ಚಿತ್ರದಲ್ಲಿನ ತಮ್ಮ ಪಾತ್ರಕ್ಕೆ ಡಬ್ಬಿಂಗೂ ಮಾಡಿಲ್ಲ, ಟ್ರೇಲರ್‍ ಬಿಡುಗಡೆ ಸಮಾರಂಭಕ್ಕೂ ಬರಲಿಲ್ಲ.ಟ್ರೇಲರ್‍ ಪ್ರಿಮಿಯರ್ ಮಾಡುವ ಮೂಲಕ ಅಭಿಮಾನಿಗಳ ಸಮ್ಮುಖದಲ್ಲೇ ಕರಾವಳಿ ಟ್ರೇಲರ್‍ ಬಿಡುಗಡೆ ಮಾಡಲಾಯಿತು.

ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡಿಲ್ಲ ಎನ್ನುವ ಗೊಂದಲ, ಗಲಾಟೆಗಳ ನಡುವೆಯೇ ಟ್ರೇಲರ್‍ ಬಿಡುಗಡೆ ಮಾಡಲಾಯಿತು. ಅಭಿಮಾನಿಗಳು ತಮ್ಮ ಮೆಚ್ಚಿನ ನಟನ ಪಾತ್ರಕ್ಕೆ ಬೇರೆ ಯಾರೋ ಧ್ವನಿ ನೀಡಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಹಾಗೆಯೇ, ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಆಹ್ವಾನಿಸದೇ ಇದ್ದುದಕ್ಕೂ ಬೇಸರ ವ್ಯಕ್ತಪಡಿಸಿದರು.

ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ನಿರ್ದೇಶಕ ಗುರುದತ್ ಗಾಣಿಗ, ರಾಜ್ ಬಿ. ಶೆಟ್ಟಿ, ಸಂಪದ ಹುಲಿವಾನ, ಸುಷ್ಮಿತಾ ಭಟ್‍, ಮಿತ್ರ, ಶ್ರೀಧರ್ ಮುಂತಾದವರು ಹಾಜರಿದ್ದರು.

ಈ ಚಿತ್ರದಲ್ಲಿ ಕರಾವಳಿ ಸಂಸ್ಕೃತಿ ಜೊತೆಗೆ ಕಂಬಳವೇ ಹೈಲೆಟ್. ಕರಾವಳಿಯ ಹೆಮ್ಮೆಯ ಕ್ರೀಡೆಯಾದ ಕಂಬಳವನ್ನು ಈ ಸಿನಿಮಾ ಮೂಲಕ ಕಟ್ಟಿಕೊಡಲಾಗಿದೆ. ಈ ಸಿನಿಮಾದಲ್ಲಿ ಪ್ರಜ್ವಲ್ ಮತ್ತು ರಾಜ್ ಬಿ. ಶೆಟ್ಟಿ ನಡುವಿನ ಸಂಬಂಧವೇನು? ಎಂಬ ಪ್ರಶ್ನೆ ಸಹಜವಾಗಿಯೇ ಎದ್ದಿದೆ.

‘ಕಾಂತಾರ’ ಅದಾಗೇ ಆಗಿದ್ದು, ‘ಚಾಪ್ಟರ್ 1’ ನಾವು ಮಾಡಿದ್ದು …

Discover more from KannadaScreens

Subscribe now to keep reading and get access to the full archive.

Continue reading