ಮುಗ್ಧ ಹುಡುಗ ಮತ್ತು ವಾಚಾಳಿ ಹುಡುಗಿಯ ಪ್ರೇಮಕಥೆ ‘ಕೃಷ್ಣವಂಶಿ’

ಕಿರುತೆರೆ, ಸಿನಿ ಸುದ್ದಿ

ಉದಯ ವಾಹಿನಿ ಇದೀಗ ಹೊಸ ಧಾರಾವಾಹಿ ‘ಕೃಷ್ಣವಂಶಿ’ ಮೂಲಕ ಮತ್ತೊಂದು ಭಾವನಾತ್ಮಕ ಪ್ರಪಂಚಕ್ಕೆ ವೀಕ್ಷಕರನ್ನು ಕರೆದೊಯ್ಯಲು ಸಜ್ಜಾಗಿದೆ. ಮಾರ್ಚ್ 2ರಿಂದ ರಾತ್ರಿ 9:30ಕ್ಕೆ ಪ್ರಸಾರ ಆರಂಭಿಸಲಿರುವ ‘ಕೃಷ್ಣವಂಶಿʼ ಧಾರಾವಾಹಿ ನಾಚಿಕೆ ಸ್ವಭಾವದ ಹುಡುಗ ಕೃಷ್ಣ ಹಾಗೂ ವಾಚಾಳಿ ಹುಡುಗಿ ವಂಶಿಯ ಮಧ್ಯೆ ಅರಳುವ ಪ್ರೇಮಕಥಾಹಂದರ ಹೊಂದಿದೆ.

ವಂಶಿಗೆ ಕೃಷ್ಣನ ನಾಚಿಕೆ ಸ್ವಭಾವವೇ ಇಷ್ಟವಾಗುತ್ತದೆ. ಕೃಷ್ಣನಿಗೂ ನಾಚಿಕೆಯ ನಡುವೆ ಪ್ರೀತಿ ಅರಳುತ್ತದೆ. ಇಬ್ಬರ ಪ್ರೀತಿಗೆ ಅನೇಕ ಸಲ ಅಗ್ನಿಪರೀಕ್ಷೆ ಎದುರಾಗುತ್ತದೆ. ಈ ಪ್ರೇಮಕಥೆಯ ಹಿನ್ನೆಲೆಯಾಗಿ ಬಿಟ್ಟಿರಲಾಗದ ತಂದೆಯ ಮಮತೆಯ ಕತೆ ಇದೆ.

ನಾಯಕ ಕೃಷ್ಣನಾಗಿ ರೋಹನ್ ಹಾಗೂ ನಾಯಕಿ ವಂಶಿಯಾಗಿ ಶಾರದಾ ಪುಂಡಿ ಅಭಿನಯಿಸುತ್ತಿದ್ದು, ಗಿರಿಜಾ ಲೋಕೇಶ್, ಹನುಮಂತೇಗೌಡ, ಹಂಸ, ವಿಜಯ್, ರಜಿನಿ ಟಿ.ಡಿ, ಸಿದ್ದಾರ್ಥ ಮಾಧ್ಯಮಿಕ, ಸಿಂಧೂ ಪಿ, ಸಂದೀಪ್, ಪುಷ್ಪ ಅನಿಲ್‌ ಕುಮಾರ್, ಸುಕೃತಾ ನಾಗ್ ಮತ್ತಿತರರ ತಾರಾಗಣವಿದೆ.

ಪರಿಣಿತ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ತೇಜಸ್ವಿನಿ ಭಾಸ್ಕರ್ ಮಂಗಾಡಹಳ್ಳಿ ನಿರ್ಮಾಣ ಮಾಡುತ್ತಿರುವ ‘ಕೃಷ್ಣವಂಶಿʼ ಧಾರಾವಾಹಿಗೆ ಸುಬ್ರಹ್ಮಣ್ಯ ಪ್ರಸಾದ್ ನಿರ್ದೇಶನವಿದೆ.

‘ಮಾರ್ನಮಿ’ ಚಿತ್ರ ವಿಮರ್ಶೆ: ಹಸು, ಹುಲಿಯಾಗುವ ಕಥೆ

Discover more from KannadaScreens

Subscribe now to keep reading and get access to the full archive.

Continue reading