ಗೌರ್ ನಾಯ್ಡು ಆದ ಶಿವಣ್ಣ; ‘ಪೆದ್ದಿ’ ಚಿತ್ರದ ಗೆಟಪ್ ಅನಾವರಣ

ಚಂದನವನ, ಪ್ಯಾನ್ ಇಂಡಿಯಾ, ಸಿನಿ ಸುದ್ದಿ

ರಾಮ್ ಚರಣ್ ತೇಜ ನಟನೆಯ ‘ಪೆದ್ದಿ’ ಚಿತ್ರವು ಜೂನ್ 4ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ಶಿವರಾಜಕುಮಾರ್‍ ಸಹ ಒಂದು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬುದು ಹಳೆಯ ಸುದ್ದಿ. ಆದರೆ, ಅವರ ಪಾತ್ರವೇನು? ಗೆಟಪ್‍ ಹೇಗಿರುತ್ತಿದೆ? ಎಂಬ ವಿಷಯಗಳನ್ನು ಚಿತ್ರತಂಡ ಬಿಟ್ಟುಕೊಟ್ಟಿರಲಿಲ್ಲ.

ಇದೀಗ ಶಿವರಾಜಕುಮಾರ್‍ ಅವರ ಪಾತ್ರದ ಅನಾವರಣವಾಗಿದೆ. ಗೌರ್‌ ನಾಯ್ಡು ಎಂಬ ಪಾತ್ರದಲ್ಲಿ ಶಿವಣ್ಣ ಅಭಿನಯಿಸಿದ್ದಾರೆ. ಮೇಕಿಂಗ್ ವಿಡಿಯೋದಲ್ಲಿ ಶಿವಣ್ಣ-ರಾಮ್ ಚರಣ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ‘ಉಪ್ಪೆನ’ ಚಿತ್ರವನ್ನು ನಿರ್ದೇಶಿಸಿದ್ದ ಬುಚ್ಚಿ ಬಾಬು ಸನಾ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ರಾಮ್‍ ಚರಣ್‍ಗೆ ಬಾಲಿವುಡ್ ನಟಿ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಶಿವರಾಜ್‌ಕುಮಾರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇನ್ನುಳಿದಂತೆ ಜಗಪತಿ ಬಾಬು, ದಿವೇಂದು ಶರ್ಮಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾಗೆ ಎ.ಆರ್ ರೆಹಮಾನ್ ಸಂಗೀತ, ರತ್ನವೇಲು ಛಾಯಾಗ್ರಹಣವಿದೆ.

ವೃದ್ಧಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ವೆಂಕಟ ಸತೀಶ್ ಕಿಲಾರು ನಿರ್ಮಿಸಿರುವ ಈ ಚಿತ್ರ ಜೂನ್‍ 04ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಕರ್ನಾಟಕದಲ್ಲಿ ಚಿತ್ರವನ್ನು ಕಿಶೋರ್ ಸಿನಿಮಾಸ್‍ ವಿತರಿಸಿದರೆ, ಹೊರದೇಶಗಳಲ್ಲಿ ಚಿತ್ರವನ್ನು ವಿತರಿಸುವ ಮೂಲಕ ಹೊಂಬಾಳೆ ಫಿಲ್ಮ್ಸ್ ಮೊದಲ ಬಾರಿಗೆ ಓವರ್‍ಸೀಸ್‍ ವಿತರಣೆ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ.

ಕರ್ನಾಟಕದಲ್ಲಿ 140 ಪ್ಲಸ್ ಕೋಟಿ ಗಳಿಕೆ ಮಾಡಿದ ‘ದುರಂಧರ್ 2’

Discover more from KannadaScreens

Subscribe now to keep reading and get access to the full archive.

Continue reading