ಕರ್ನಾಟಕದಲ್ಲಿ 140 ಪ್ಲಸ್ ಕೋಟಿ ಗಳಿಕೆ ಮಾಡಿದ ‘ದುರಂಧರ್ 2’

ಚಂದನವನ, ಪ್ಯಾನ್ ಇಂಡಿಯಾ, ಸಿನಿ ಸುದ್ದಿ

ರಣವೀರ್ ಸಿಂಗ್‍ ಅಭಿನಯದ ‘ದುರಂಧರ್ 2’ ಚಿತ್ರವು ಯುಗಾದಿ ಹಬ್ಬದ ಪ್ರಯುಕ್ತ ಮಾರ್ಚ್ 19ರಂದ ಜಗತ್ತಿನಾದ್ಯಂತ ಬಿಡುಗಡೆಯಾಗಿದೆ. ಈ ಚಿತ್ರವು ಈಗಾಗಲೇ ಗಳಿಕೆ ವಿಷಯದಲ್ಲಿ ಹಲವು ದಾಖಲೆಗಳನ್ನು ಮಾಡಿದೆ. ಈಗ ಚಿತ್ರವು ಕರ್ನಾಟಕದಲ್ಲಿ ಇದುವರೆಗೂ ಯಾವ ಚಿತ್ರವೂ ಮಾಡದ ಹೊಸ ದಾಖಲೆಯೊಂದನ್ನು ಮಾಡಿದೆ.

ಚಿತ್ರವು ಕರ್ನಾಟಕ ರಾಜ್ಯವೊಂದರಲ್ಲೇ 140 ಕೋಟಿ ರೂ.ಗಳಿಗೂ ಹೆಚ್ಚು ಗಳಿಕೆ ಮಾಡಿದೆ ಎಂದು ಬಾಕ್ಸ್ಆಫೀಸ್‍ ಟ್ರಾಕರ್‍ ಸಕ್ನಿಲ್ಕ್ ಡಾಟ್‍ಕಾಮ್‍ ಹೇಳಿದೆ. ಇದಕ್ಕೂ ಮೊದಲು ಕರ್ನಾಟಕದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಪರಭಾಷಾ ಚಿತ್ರವೆಂದರೆ ಅದು ‘ಬಾಹುಬಲಿ 2’.

‘ದುರಂಧರ್ 2’ ಚಿತ್ರವು ಕರ್ನಾಟಕದಲ್ಲಿ 129 ಕೋಟಿ ರೂ. ಗಳಿಕೆ ಮಾಡಿತ್ತಂತೆ. ನಂತರದ ಸ್ಥಾನ ‘ಪುಷ್ಪ 2’ ಚಿತ್ರಕ್ಕಿತ್ತು. ಈಗ ಆ ಎರಡೂ ಚಿತ್ರಗಳ ದಾಖಲೆ ಮುರಿದು, ‘ದುರಂಧರ್ 2’ ಚಿತ್ರವು ಕರ್ನಾಟಕದಲ್ಲಿ 140 ಕೋಟಿ ರೂ. ಗಳಿಕೆ ಮಾಡಿದೆ ಎಂದು ಹೇಳಲಾಗುತ್ತದೆ. ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಿಂದ ಚಿತ್ರವು 300 ಕೋಟಿ ರೂ. ಸಂಗ್ರಹಿಸಿದ್ದು, ಈ ಪೈಕಿ ಕರ್ನಾಟಕದಲ್ಲೇ ದೊಡ್ಡ ಮಟ್ಟದ ಗಳಿಕೆ ಆಗಿದೆ ಎಂಬುದು ಗಮನಾರ್ಹ.

‘ದುರಂಧರ್ 2’ ಚಿತ್ರವು ‘ದುರಂಧರ್’ನ ಮುಂದುವರೆದ ಭಾಗವಾಗಿದ್ದು, ಮೊದಲ ಚಿತ್ರವು ಕಳೆದ ವರ್ಷದ ಡಿಸೆಂಬರ್ 05ರಂದು ಬಿಡುಗಡೆಯಾಗಿ, ಜಗತ್ತಿನಾದ್ಯಂತ ಯಶಸ್ವಿ ಪ್ರದರ್ಶನ ಕಾಣುವುದರ ಜೊತೆಗೆ ಸಾವಿರ ಕೋಟಿ ಕ್ಲಬ್‍ ಸೇರಿತ್ತು. ಆದಿತ್ಯ ಧರ್‍ ನಿರ್ದೇಶನದ ಈ ಚಿತ್ರದಲ್ಲಿ ರಣವೀರ್ ಸಿಂಗ್‍, ಅಕ್ಷಯ್‍ ಖನ್ನಾ, ಸಂಜಯ್ ದತ್‍, ರಾಕೇಶ್‍ ಬೇಡಿ, ಅರ್ಜುನ್‍ ರಾಮ್‍ಪಾಲ್‍ ಮುಂತಾದವರು ಅಭಿನಯಿಸಿದ್ದಾರೆ.

ಮಧ್ಯರಾತ್ರಿ ರಸ್ತೇಲಿ ಅಳುತ್ತಾ ನಿಂತುಬಿಟ್ಟಿದ್ದರಂತೆ ಪ್ರೇಮ್‍ …

Discover more from KannadaScreens

Subscribe now to keep reading and get access to the full archive.

Continue reading