ವಿಘ್ನ ನಿವಾರಕನಿಗೇ ವಿಘ್ನ ನಿವಾರಿಸುವ ಪಾತ್ರದಲ್ಲಿ ಕೋಮಲ್‍

ಚಂದನವನ, ಸಿನಿ ಸುದ್ದಿ

ಕೋಮಲ್‍ ಅಭಿನಯದ ಚಿತ್ರವೊಂದು ಬಿಡುಗಡೆಯಾಗಿ ಒಂದು ವರ್ಷ ಆಗುತ್ತಿದೆ. ಕಳೆದ ವರ್ಷದ ಅಕ್ಟೋಬರ್‍ ತಿಂಗಳಲ್ಲಿ ‘ಕೋಣ’ ಬಿಡುಗಡೆಯಾಗಿತ್ತು. ಇದೀಗ ಅವರು ‘ಸಂಗೀತ ಬಾರ್‍ ಆ್ಯಂಡ್‍ ರೆಸ್ಟೋರೆಂಟ್‍’ ಚಿತ್ರದಲ್ಲಿ ನಟಿಸಿದ್ದು, ಸದ್ಯದಲ್ಲೇ ಈ ಚಿತ್ರ ತೆರೆಗೆ ಬರಲಿದೆ.

ಕೋಮಲ್‌ ಕುಮಾರ್‌, ಮೇಘನಾ ರಾಜ್‌, ಅನುಷಾ ರೈ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ʼಸಂಗೀತ ಬಾರ್‌ ಅಂಡ್‌ ರೆಸ್ಟೋರೆಂಟ್‌ʼ ಚಿತ್ರದ ಫಸ್ಟ್ ಲುಕ್ ’30 ML’ ಪ್ರೋಮೋ ಇತ್ತೀಚೆಗೆ ಬಿಡುಗಡೆ ಆಗಿದೆ. ಈ ಚಿತ್ರವನ್ನು ಸಂದೇಶ್‌ ಶೆಟ್ಟಿ ಆಜ್ರಿ ಕಥೆ ಬರೆದು ನಿರ್ದೇಶಿಸಿದ್ದು, ವಿಕಾಸ್‌ ಶೆಟ್ಟಿ ನಿರ್ಮಿಸುತ್ತಿದ್ದಾರೆ. ಈ ಚಿತ್ರದಲ್ಲಿ ಕೋಮಲ್‌ ದ್ವಿಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಚಿತ್ರದ ಕುರಿತು ಮಾತನಾಡುವ ಕೋಮಲ್‍, ‘ಸಂದೇಶ್‍ ಹೇಳುತ್ತಿರುವ ಕಥೆ 200 ವರ್ಷಗಳ ಹಿಂದಿನದ್ದು. ಪಚ್ಚೆ ಗಣಪತಿಯನ್ನಿಟ್ಟುಕೊಂಡು ಒಂದು ಕಥೆ ಮಾಡಿದ್ದಾರೆ. ಅದು ನಿಜವೋ, ಕಾಲ್ಪನಿಕವೋ ಗೊತ್ತಿಲ್ಲ. ಾದರೆ, ವಿಷಯ ಚೆನ್ನಾಗಿದೆ. ಗಣೇಶನಿಗೆ ವಿಘ್ನನಿವಾರಕ ಎನ್ನುತ್ತಾರೆ. ಗಣೇಶಣಿಗೇ ವಿಘ್ನ ಎದುರಾದರೆ ಏನೆಲ್ಲಾ ಆಗುತ್ತದೆ ಎಂಬುದನ್ನು ಈ ಚಿತ್ರದಲ್ಲಿ ಹೇಳುತ್ತಾರೆ. ಸಂದೇಶ್‍ ಶ್ರಮಜೀವಿ. ಅವರಿಂದ ಪ್ರೀ-ಪ್ರೊಡಕ್ಷನ್ ವಿಷಯದಲ್ಲಿ ಸಾಕಷ್ಟು ಕಲಿತಿದ್ದೇನೆ’ ಎಂದರು.

ಸಂಗೀತಾ ಬಾರ್ ಆ್ಯಂಡ್ ರೆಸ್ಟೋರೆಂಟ್ – ಇದು ದೇವರ ತಾಣ’ ಎನ್ನುವುದು ಒಂದೇ ಚಿತ್ರ, ಎರಡು ಶೀರ್ಷಿಕೆಗಳು ಎನ್ನುವ ಸಂದೇಶ್‍, ‘ಸಂಗೀತಾ ಬಾರ್‍ನಿಂದ ಶುರುವಾಗಿ, 19ನೇ ಶತಮಾನಕ್ಕೊಂದು ಕನೆಕ್ಷನ್‍ ಇದೆ. ಇಲ್ಲಿ ಗಣಪತಿಯೇ ಚಿತ್ರದ ನಾಯಕ. ಜೊತೆಗೆ ಕೋಮಲ್‍ ಕುಮಾರ್, ಮೇಘನಾ ರಾಜ್‍, ಅನೂಷಾ ರೈ ಮುಂತಾದವರು ನಟಿಸಿದ್ದಾರೆ. ಗಣಪತಿಯ ಜೊತೆಗೆ ಸಾಗುವ ಕಥೆ ಇದು. ಕೋಮಲ್‍ ಇಲ್ಲಿ ಎರಡು ಶೇಡ್‍ಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರಿಲ್ಲಿ ಗುರು ಎಂಬ ಫ್ಲಾಪ್‍ ನಿರ್ದೇಶಕನಾಗಿ ಕಾಣಿಸಿಕೊಂಡಿದ್ದಾರೆ’ ಎಂದರು.

ಕೆಲವು ವರ್ಷಗಳ ಹಿಂದೆ ಸಂದೇಶ್‍ ಪತ್ರಕರ್ತನಾಗಿದ್ದ ಸಂದರ್ಭದಲ್ಲಿ ಒಂದಿಷ್ಟು ಸಂಶೋಧನೆ ಮಾಡಿ ಬರೆದಂತಹ ಕಥೆ ಅಂತೆ ಇದು. ‘2012ರಲ್ಲಿ ಒಂದಿಷ್ಟು ತಯಾರಿ ಮಾಡಿಕೊಂಡಿದ್ದೆ. ಬಜೆಟ್‍ ಹೆಚ್ಚಾದ ಕಾರಣ ಚಿತ್ರ ಮಾಡುವುದಕ್ಕೆ ಸಾಧ್ಯವಾಗಿರಲಿಲ್ಲ.ನಂತರ ಇದೇ ನಿರ್ಮಾಪಕರಿಗೆ ‘ಗುಂಮ್ಟಿ’ ಎಂಬ ಚಿತ್ರ ಮಾಡಿದ್ದೆ. ಅದರಲ್ಲಿ ನನ್ನ ಕೆಲಸ ನೋಡಿ ಖುಷಿಯಾಗಿ, ಈ ಚಿತ್ರ ಮಾಡುವುದಕ್ಕೆ ಮುಂದೆ ಬಂದರು. ಇದು ಈಗಿನ ಕಾಸರಗೋಡಿನಲ್ಲಿ ನಡೆದ ಒಂದು ಘಟನೆ ಆಧಾರಿಸಿ ಮಾಡಿದ ಚಿತ್ರ. ಅದಕ್ಕೆ ಮಸಾಲೆ ಸೇರಿಸಿ ಚಿತ್ರಕಥೆ ಮಾಡಿರುವುದಾಗಿ’ ಹೇಳಿದರು.

ನನ್ನ ಸಿನಿಮಾ ಪ್ರಯಾಣದಲ್ಲಿ ಎರಡು ಭಾಷೆಗಳು ಪ್ರಮುಖ ಪಾತ್ರ ವಹಿಸಿವೆ ಎಂದ ಮೇಘನಾ, ‘ಒಂದು ಕನ್ನಡ. ಇನ್ನೊಂದು ಮಲಯಾಳಂ. ಎರಡೂ ಭಾಷೆಯ ಚಿತ್ರರಂಗಗಳೂ ನನಗೆ ಹೆಸರು ತಂದುಕೊಟ್ಟಿವೆ. ಈ ಕಥೆ ಕೇಳಿದಾಗ, ನನ್ನ ಜೀವನದ ಒಂದು ಮಿಶ್ರಣ ಈ ಚಿತ್ರದಲ್ಲಿ ಸರಿಯಾಗಿದೆ ಎಂದನಿಸಿತು. ಕಾಯಕೋಡಿನ ರಾಣಿಯಾಗಿ ಅಭಿನಯಿಸಿದ್ದೇನೆ. ಅದಕ್ಕೂ ‘ಸಂಗೀತ ಬಾರ್‍ ಆ್ಯಂಡ್‍ ರೆಸ್ಟೋರೆಂಟ್‍’ಗೂ ಏನು ಸಂಬಂಧ ಎನ್ನುವುದು ಚಿತ್ರದ ಕಥೆ’ ಎಂದರು.

‘ಸಂಗೀತ ಬಾರ್‌ ಅಂಡ್‌ ರೆಸ್ಟೋರೆಂಡ್‌ʼ ಚಿತ್ರದಲ್ಲಿ ಪ್ರಮೋದ್‌ ಶೆಟ್ಟಿ, ಪ್ರಕಾಶ್‌ ತುಮ್ಮಿನಾಡ್‌, ವಜ್ರಧೀರ್‌ ಜೈನ್‌, ರಾಘು ರಾಮನಕೊಪ್ಪ, ಎಂ. ಕೆ. ಮಠ, ಪ್ರಶಾಂತ್ ಸಿದ್ದಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ಸಂದೇಶ್‌ ಶೆಟ್ಟಿ ಆಜ್ರಿ ಕೂಡ ಚಿತ್ರದ ಪಾತ್ರವೊಂದಕ್ಕೆ ತೆರೆಮೇಲೆ ಬಣ್ಣ ಹಚ್ಚಿದ್ದಾರೆ.

ಪುನರ್ಜನ್ಮದ ಕಥೆಯಲ್ಲಿ ಪ್ರಮೋದ್‍ ಶೆಟ್ಟರಿಗೇನು ಕೆಲಸ?

Discover more from KannadaScreens

Subscribe now to keep reading and get access to the full archive.

Continue reading