ಪ್ರಚಾರದಲ್ಲಿ ಭಾಗವಹಿಸುವ ಅವಶ್ಯಕತೆ ಇಲ್ಲ ಎಂದಿದ್ದಾರೆ: ಪ್ರಜ್ವಲ್‍ ದೇವರಾಜ್‍

ಚಂದನವನ, ಸಿನಿ ಸುದ್ದಿ

‘ಕರಾವಳಿ’ ಚಿತ್ರದ ಪ್ರಚಾರದಲ್ಲಿ ಭಾಗವಹಿಸುವ ಅವಶ್ಯಕತೆ ಇಲ್ಲ ಎಂದು ಚಿತ್ರತಂಡದವರು ಹೇಳಿದ್ದಾರೆ ಎಂದು ಪ್ರಜ್ವಲ್‍ ದೇವರಾಜ್‍ ಹೇಳಿದ್ದಾರೆ.

ಈ ಕುರಿತು ಇತ್ತೀಚೆಗೆ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ‘’ಕರಾವಳಿ’ ಚಿತ್ರದ ಟ್ರೇಲರ್‍ ಬಿಡುಗಡೆಯಾದ ಸಂದರ್ಭದಲ್ಲಿ ನನ್ನ ಯಾವುದೇ ಅನುಮತಿ ಅಥವಾ ಒಪ್ಪಿಗೆ ಇಲ್ಲದೆ ನನ್ನ ಪಾತ್ರಕ್ಕೆ ಮತ್ತೊಬ್ಬರಿಂದ ಡಬ್ಬಿಂಗ್‍ ಮಾಡಿಸಿರುವ ವಿಚಾರ ನನಗೆ ತಿಳಿಯಿತು. ಅದೇ ಸಮಯದಲ್ಲಿ ನನಗೆ ಒಪ್ಪಿಗೆಯಾದ ಸಂಭಾವನೆಯೂ ಸಂಪೂರ್ಣವಾಗಿ ಪಾವತಿಯಾಗಿರಲಿಲ್ಲ. ಈ ಎರಡೂ ಕಾರಣಗಳಿಂದಲೇ ನಾನು ಟ್ರೇಲರ್‍ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ’ ಎಂದು ಹೇಳಿದ್ದಾರೆ.

ಇದರ ನಂತರ ಗುರುದತ್‍ ಗಾಣಿಗ ಈ ವಿವಾದಕ್ಕೆ ನಾನು ಸಿಕ್ಸ್ ಪ್ಯಾಕ ಆ್ಯಬ್ ಮಾಡಿಕೊಳ್ಳದೇ ಇರುವುದೇ ಕಾರಣ ಎಂಬ ರೀತಿಯಲ್ಲಿ ಸಾರ್ವಜನಿಕವಾಗಿ ಹೇಳಿಕೆಗಳನ್ನ ನೀಡಿದ್ದಾರೆ ಎಂದಿರುವ ಪ್ರಜ್ವಲ್, ‘ನನ್ನ ದೈಹಿಕ ರೂಪಾಂತರಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ನನ್ನ ಅನುಮತಿ ಇಲ್ಲದೆ ಡಬ್ಬಿಂಗ್‍ ಮಾಡಿಸಿರುವುದು ಮತ್ತು ಸಂಭಾನೆ ಕೊಡದಿರುವುದು ಮೂಲ ಕಾರಣಗಳು. ಸಂಭಾವನೆ ಬಂದಂತೆ ನಾನು ಡಬ್ಬಿಂಗ್‍ ಮಾಡಲು ಮತ್ತು ಪ್ರಚಾರದಲ್ಲಿ ಭಾಗವಹಿಸಲು ಸಿದ್ಧ ಎಂದು ಸಂಬಂಧಪಟ್ಟವರಿಗೆ ಹೇಳಿದ್ದರೂ, ಅದರ ಅಗತ್ಯವಿಲ್ಲ’ ಎಂದು ಹೇಳಿದ್ದಾರೆ.

ಪ್ರಜ್ವಲ್‍ಗೆ ಹಣ ಕೊಟ್ಟಾಗಿದೆ ಎಂದ ಗುರುದತ್‍ ಗಾಣಿಗ

Latest Posts

Discover more from KannadaScreens

Subscribe now to keep reading and get access to the full archive.

Continue reading