ಶಿವರಾಜಕುಮಾರ್ ಅಭಿನಯದಲ್ಲಿ ಹೊಸ ಚಿತ್ರವನ್ನು ನಿರ್ಮಿಸಿ-ನಿರ್ದೇಶಿಸುವುದಾಗಿ ಆರ್. ಚಂದ್ರು, ಕೆಲವು ತಿಂಗಳುಗಳ ಹಿಂಂದೆ ಘೋಷಿಸಿದ್ದರು. ಅದೀಗ ನಿಜವಾಗಿದೆ. ಚಿತ್ರವನ್ನು ಚಂದ್ರು, ಮುಂಬೈನಲ್ಲಿ ಅಧಕೃತವಾಗಿ ಘೋಷಿಸುವುದರ ಜೊತೆಗೆ ಮೋಷನ್ ಪೋಸ್ಟರ್ ಸಹ ಬಿಡುಗಡೆ ಮಾಡಾಗಿದೆ.
ಎರಡೂವರೆ ವರ್ಷಗಳ ಹಿಂದೆ ಆರ್. ಚಂದ್ರು, ‘ಕಬ್ಜ’ ಎಂಬ ಪ್ಯಾನ್ ಇಂಡಿಯಾ ಚಿತ್ರವನ್ನು ನಿರ್ಮಿಸಿ-ನಿರ್ದೇಶಿಸಿದ್ದರು. ಆ ನಂತರ ಅವರು ಯಾವೊಂದು ಚಿತ್ರವನ್ನೂ ನಿರ್ದೇಶಿಸಿರಲಿಲ್ಲ. ಈಗ ಅವರು ಶಿವರಾಜಕುಮಾರ್ ಅಭಿನಯದಲ್ಲಿ ಪ್ಯಾನ್ ಇಂಡಿಯಾದ ಚಿತ್ರವನ್ನು ಕೈಗೆತ್ತಿಕೊಂಡಿದ್ದು, ಚಿತ್ರಕ್ಕೆ ‘ಒರಿಜಿನಲ್ ಮಾನ್ಸ್ಟರ್’ ಎಂಬ ಹೆಸರನ್ನು ಇಡಲಾಗಿದ್ದು, ಈ ಹೆಸರು ಎಲ್ಲಾ ಭಾಷೆಗೂ ಹೊಂದಿಕೆಯಾಗುತ್ತದೆ. ಇದನ್ನು ಕಿರಿದಾಗಿ ‘OM’ ಎಂದು ಸಹ ಕರೆಯಬಹುದು.

ಹಿಂದಿ ಚಿತ್ರರಂಗದಲ್ಲಿ ನಿರ್ಮಾಪಕ-ವಿತರಕರಾಗಿ ಗುರುತಿಸಿಕೊಂಡಿರುವ ಆನಂದ್ ಪಂಡಿತ್ ಅವರೊಡಗೂಡಿ ಚಂದ್ರು ಒಂದು ಹೊಸ ಹಿಂದಿ ಚಿತ್ರವನ್ನು ನಿರ್ಮಿಸಲು ಮುಂದಾಗಿದ್ದಾರೆ. ಈ ಚಿತ್ರವು ಹಿಂದಿ ಮಾತ್ರವಲ್ಲದೆ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. ಕನ್ನಡದಲ್ಲಿ ಶಿವರಾಜಕುಮಾರ್ ಮತ್ತು ತೆಲುಗಿನಲ್ಲಿ ಸುನೀಲ್ ಅವರು ನಾಯಕರಾಗಿ ನಟಿಸುತ್ತಿದ್ದು, ಹಿಂದಿ, ತಮಿಳು ಹಾಗೂ ಮಲಯಾಳಂ ನಲ್ಲೂ ಜನಪ್ರಿಯ ನಟರು ನಾಯಕರಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿಗಳು, ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿವೆ.
ಸದ್ಯ ಆರ್. ಚಂದ್ರು ನಿರ್ಮಾಣದ, ‘ಡಾರ್ಲಿಂಗ್’ ಕೃಷ್ಣ ಹಾಗೂ ಪ್ರಕಾಶ್ ರಾಜ್ ನಟನೆಯ ‘ಫಾದರ್’ ಚಿತ್ರ ಬಿಡುಗಡೆ ಹಂತದಲ್ಲಿದ್ದು, ಇತ್ತೀಚೆಗೆ ಆ ಚಿತ್ರದ ಟೀಸರ್ ಬಿಡುಗಡೆ ಆಗಿದೆ.
🔥THE WAIT IS OVER. THE REVEAL BEGINS. 🔥
The moment we’ve all been waiting for has finally arrived.The Official Title & Motion Poster is OUT NOW!
Get ready to enter a powerful new world. 🎬🔥
🎬 Watch Now on RC Studios YouTube:https://t.co/5jdAWvrR36 pic.twitter.com/mCIkFpLq0p— R.Chandru (@rchandrumoviess) August 28, 2026


