ಈ ಹಾಡಿಗೆ ವಿರೋಧ ಬರುತ್ತದೆ ಎಂದು ನನಗೆ ಮೊದಲೇ ಗೊತ್ತಿತ್ತು: ನೋರಾ

ಚಂದನವನ, ಪ್ಯಾನ್ ಇಂಡಿಯಾ, ಸಿನಿ ಸುದ್ದಿ

‘ಕೆಡಿ – ದಿ ಡೆವಿಲ್‍’ ಚಿತ್ರದ ‘ಸರ್ಕೆ ಚುನರ್‍ ತೇರಿ ಸರ್ಕೆ …’ ಹಾಡಿಗೆ ವಿವಾದ ಹೆಚ್ಚಾಗುತ್ತಿದ್ದಂತೆಯೇ, ಆ ಹಾಡಿಗೆ ನಟಿಸಿರುವ ಬಾಲಿವುಡ್‍ನ ಜನಪ್ರಿಯ ನಟಿ ನೋರಾ ಫತೇಹಿ ಹಾಡಿನಿಂದ ಅಂತರ ಕಾಯ್ದುಕೊಂಡಿದ್ದಾರೆ.

ಈ ಕುರಿತು ಸೋಷಿಯಲ್‍ ಮೀಡಿಯಾದಲ್ಲಿ ಅವರು ಹೊಸದೊಂದು ವೀಡಿಯೋ ಬಿಡುಗಡೆ ಮಾಡಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

‘ನಾನು ಸುಮಾರು ಮೂರು ವರ್ಷಗಳ ಹಿಂದೆ ಈ ಹಾಡಿನ ಚಿತ್ರೀಕರಣದಲ್ಲಿ ಭಾಗವಹಿಸಿದ್ದೆ. ಹಾಡು ಕೇಳಿದಾಗ, ‘ನಾಯಕ್‍ ನಹೀ ಖಳನಾಯಕ್‍ ಹೂಂ ಮೇ …’ ಹಾಡಿನ ರೀಮೇಕ್‍ ಇರಬೇಕು ಅಂದುಕೊಂಡಿದ್ದೆ. ನಾನು ಕೆಲಸ ಮಾಡುವಾಗ ಸಂಪೂರ್ಣವಾಗಿ ನಿರ್ದೇಶಕರನ್ನು ನಂಬುತ್ತೇನೆ. ಈ ಹಾಡಿನ ವಿಷಯದಲ್ಲೂ ನಾನು ಅದನ್ನೇ ಮಾಡಿದೆ. ಅದರ ಹೊರತಾಗಿ ನನಗೆ ಬೇರೇನೂ ಗೊತ್ತಿಲ್ಲ’ ಎಂದಿದ್ದಾರೆ.

ಹಾಡು ಬಿಡುಗಡೆ ಸಂದರ್ಭದಲ್ಲಿ ಈ ಹಾಡು ವಿವಾದಕ್ಕೀಡಾಗುತ್ತದೆ ಎಂದು ತಮಗೆ ಗೊತ್ತಿತ್ತು ಎಂದಿರುವ ಅವರು, ‘ಮೊದಲಿಗೆ ಎಐ ನಿರ್ಮಿತ ದೃಶ್ಯಗಳನ್ನು ನೋಡಿದಾಗ ನನಗೆ ಇಷ್ಟವಾಗಲಿಲ್ಲ. ಆದರೆ, ಅಲ್ಲಿ ಮಾಧ್ಯಮದವರು, ಜನ ಇದ್ದುದರಿಂದ ನಾನು ನನ್ನ ಅಸಹನೆಯನ್ನು ವ್ಯಕ್ತಪಡಿಸಲಿಲ್ಲ. ಸಾಹಿತ್ಯ ಕೇಳಿದಾಗ ಈ ಹಾಡು ವಿವಾದವೆಬ್ಬಿಸುತ್ತದೆ ಎಂದು ಗೊತ್ತಾಯಿತು. ಅದನ್ನು ನಿರ್ದೇಶಕರಿಗೂ ಹೇಳಿದೆ. ತಕ್ಷಣವೇ ನಾನು ಈ ಹಾಡಿನ ಪ್ರಮೋಷನ್‍ನಿಂದ ದೂರ ಸರಿದೆ. ನಾನು ಸೋಷಿಯಲ್‍ ಮೀಡಿಯಾದಲ್ಲಿ ಎಲ್ಲೂ ಈ ಹಾಡಿನ ಪ್ರಚಾರ ಮಾಡಲಿಲ್ಲ’ ಎಂದಿದ್ದಾರೆ.

ಕಲಾವಿದರಿಗೆ ಚಿತ್ರದ ಬಗ್ಗೆ ಹೆಚ್ಚಿನ ಹಿಡಿತ ಇರುವುದಿಲ್ಲ ಎಂದಿರುವ ಅವರು, ‘ಪ್ರಾಮಾಣಿಕವಾಗಿ ಕಲಾವಿದರಿಗೆ ಚಿತ್ರದ ಬಗ್ಗೆ ಹೆಚಚು ಹಿಡಿತ ಇರುವುದಿಲ್ಲ. ಬಾಲಿವುಡ್‍ನಲ್ಲಿ ಕಲಾವಿದರಿಗೆ ಮಾತನಾಡುವದಕ್ಕೆ ಅವಕಾಶ ಸಿಗುತ್ತದೆ. ಬೇರೆ ಕಡೆ ಎಷ್ಟೋ ಬಾರಿ ಅದು ಸಾಧ್ಯವಾಗುವುದಿಲ್ಲ. ಜನ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಹಿಂದಿ ಅವತರಣಿಕೆಯ ಹಾಡನ್ನು ಕಿತ್ತು ಹಾಕಲಾಗಿದೆ. ಮುಂದಿನ ದಿನಗಳಲ್ಲಿ ನಾನು ಒಪ್ಪುವ ಚಿತ್ರಗಳ ಮತ್ತು ಹಾಡುಗಳ ಬಗ್ಗೆ ಇನ್ನಷ್ಟು ಹುಷಾರಾಗಿರುವ’ ಎಂದು ಹೇಳಿಕೊಂಡಿದ್ದಾರೆ.

‘ಸರಸೆ …’ ಹಾಡನ್ನು ಕಿತ್ತು ಹಾಕಲು ಲೇಖಕಿಯರ ಸಂಘ, ಮಹಿಳಾ ಆಯೋಗ ಆಗ್ರಹ

Latest Posts

Discover more from KannadaScreens

Subscribe now to keep reading and get access to the full archive.

Continue reading