ಪ್ರೀತಿಪಾತ್ರಳಿಗೆ ಕಂದಮ್ಮ, ಚಿನ್ನಮ್ಮಎಂದ ವಿನಯ್ ರಾಜಕುಮಾರ್ …

ಚಂದನವನ, ಸಿನಿ ಸುದ್ದಿ

ಪ್ರೀತಿಪಾತ್ರರಿಗೆ ಚಿನ್ನಮ್ಮ, ಕಂದಮ್ಮ, ಬಂಗಾರಿ ಎಂದು ಸಹಜವಾಗಿಯೇ ಕರೆಯಲಾಗುತ್ತದೆ. ಮುಗ್ಧ ಭಾವನೆಯನ್ನು ಆಧಾರವಾಗಿಟ್ಟುಕೊಂಡು ‘ಸಿಟಿ ಲೈಟ್ಸ್’ ಚಿತ್ರಕ್ಕೆ ಹಾಡು ಬರೆಸಿದ್ದಾರೆ ‘ದುನಿಯಾ’ ವಿಜಯ್‍. ಇಲ್ಲಿ ನಾಯಕ ವಿನಯ್ ರಾಜಕುಮಾರ್‍, ತನ್ನ ಗೆಳತಿಯನ್ನು ‘ಕಂದಮ್ಮ ಕಂದಮ್ಮ …’ ಎಂದು ಕರೆಯುವ ಹಾಡನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ.

‘ಕಂದಮ್ಮ ಕಂದಮ್ಮ’ ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಹಾಡಿಗೆ ನಾಗಾರ್ಜುನ ಶರ್ಮ ಸಾಹಿತ್ಯ ರಚಿಸಿದ್ದು, ಚರಣ್ ರಾಜ್‍ ಸಂಗೀತ ಸಂಯೋಜಿಸಿದ್ದಾರೆ. ಸಂಚಿತ್‍ ಹೆಗ್ಡೆ ಈ ಹಾಡಿಗೆ ಧ್ವನಿಯಾಗಿದ್ದಾರೆ. ವಿನಯ್‍ ರಾಜಕುಮಾರ್‍ ಮತ್ತು ಮೋನಿಷಾ ವಿಜಯ್‍ ನಾಯಕ-ನಾಯಕಿಯಾಗಿ ನಟಿಸಿದ್ದಾರೆ.

ಈ ಚಿತ್ರದ ಕುರಿತು ಮಾತನಾಡುವ ‘ದುನಿಯಾ’ ವಿಜಯ್‍, ‘ಚಿತ್ರೀಕರಣ ಮುಗಿದ ಮೇಲೆ ನಿರ್ದೇಶಕರಿಗೆ ಮತ್ತೆ ಜೀವ ತುಂಬುವುದು ಸಂಗೀತ ನಿರ್ದೇಶಕ ಮತ್ತು ಸಾಹಿತಿ. ‘ಸಲಗ’ ಚಿತ್ರದಿಂದಲೂ ಚರಣ್ ರಾಜ್ ಹಾಗೂ ನಾಗಾರ್ಜುನ ಶರ್ಮಾ ನನ್ನ ಚಿತ್ರಗಳಿಗೆ ಒಳ್ಳೆಯ ಸಾಹಿತ್ಯ ಮತ್ತು ಸಂಗೀತ ಕೊಡುತ್ತಿದ್ದಾರೆ. ನಾವು ನಮಗೆ ಇಷ್ಟವಾದವರನ್ನು ಪ್ರೀತಿಯಿಂದ ‘ಚಿನ್ನಮ್ಮ, ಕಂದಮ್ಮ, ಬಂಗಾರಿ’ ಎಂದು ಕರೆಯುವ ಮುಗ್ಧ ಭಾವನೆಯನ್ನು ಆಧಾರವಾಗಿಟ್ಟುಕೊಂಡು ಈ ಹಾಡನ್ನು ರೂಪಿಸಲಾಗಿದೆ. ಜೊತೆಗೆ ಮಕ್ಕಳಿಗೆ ಜಂಕ್ ಫುಡ್ ಹಾಗೂ ಕೃತಕ ಬಣ್ಣಗಳ ಬಳಕೆಯ ಬಗ್ಗೆ ಎಚ್ಚರಿಕೆ ವಹಿಸುವ ಸಣ್ಣ ಸಂದೇಶವನ್ನೂ ಸೇರಿಸಲಾಗಿದೆ’ ಎಂದರು.

ಹಾಡಿನ ಕುರಿತು ಮಾತನಾಡುವ ವಿನಯ್‍ ರಾಜಕುಮಾರ್, ‘ವಿಜಯ್ ಅವರ ನಿರ್ದೇಶನದಲ್ಲಿ ಕೆಲಸ ಮಾಡುವುದು ಆರಾಮದಾಯಕವಾಗಿತ್ತು. ಸಂಚಿತ್ ಹೆಗಡೆ ಅವರ ಗಾಯನ ಹಾಗೂ ಹಾಡಿನ ಭಾವನೆಗಳು ಅದ್ಭುತವಾಗಿ ಮೂಡಿಬಂದಿವೆ’ ಎಂದರು.

ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವ ವಿಜಯ್ ಮಗಳು ಮೋನಿಷಾ ಮಾತನಾಡಿ, ‘ಇಡೀ ಚಿತ್ರದಲ್ಲಿ ನನ್ನ ಮೆಚ್ಚಿನ ಹಾಡು ಇದು. ಸೆಟ್‌ನಲ್ಲಿ ಅಪ್ಪ ಪ್ರೊಫೆಷನಲ್ ಆಗಿ ಕೆಲಸ ತೆಗೆದಿದ್ದಾರೆ’ ಎಂದರು.

‘ಸಿಟಿ ಲೈಟ್ಸ್’ ಚಿತ್ರಕ್ಕೆ ‘ದುನಿಯಾ’ ವಿಜಯ್‍ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದಾರೆ. ನಿರ್ಮಾಣದಲ್ಲಿ ವಿಕ್ರಮ್‍ ಆರ್ಯ ಕೈಜೋಡಿಸಿದ್ದಾರೆ. ಚಿತ್ರಕ್ಕೆ ಹರ್ಷ ಗೌಡ ಛಾಯಾಗ್ರಹಣ, ಚರಣ್‍ರಾಜ್‍ ಸಂಗೀತ ಮತ್ತು ಮಾಸ್ತಿ ಮಂಜು ಅವರ ಸಂಭಾಷಣೆ ಇದೆ.

ಇದು ಪಂಪನ ಜೀವನವನ್ನಲ್ಲ, ಕಾವ್ಯಗಳನ್ನಾಧರಿಸಿದ ಚಿತ್ರ …

Discover more from KannadaScreens

Subscribe now to keep reading and get access to the full archive.

Continue reading