ಪಂಪನ ಜೀವನ ಮತ್ತು ಆಶಯ ಸಾರುವ ‘ಮಹಾಕವಿ’ ಸೆ. 18ರಂದು ತೆರೆಗೆ

ಚಂದನವನ, ಸಿನಿ ಸುದ್ದಿ

ಪ್ರಯೋಗಶೀಲ ಚಿತ್ರಗಳಿಗೆ ಡಾ. ಬರಗೂರು ರಾಮಚಂದ್ರಪ್ಪ ಹೆಸರುವಾಸಿ. ಅವರು ತಮ್ಮ ಪ್ರತಿ ಚಿತ್ರದಲ್ಲೂ ಒಂದಲ್ಲ ಒಂದು ಹೊಸ ಪ್ರಯೋಗವನ್ನು ಮಾಡುತ್ತಿರುತ್ತಾರೆ. ‘ಯಶೋಧರ ಚರಿತೆ’ ಆಧರಿಸಿ ಅವರು ನಿರ್ದೇಶಿಸಿದ್ದ ‘ಅಮೃತಮತಿ’ ಚಿತ್ರವು ಕಳೆದ ವರ್ಷ ಬಿಡುಗಡೆ ಆಗಿತ್ತು. ಈಗ ಅವರು ‘ಆದಿಕವಿ’ ಪಂಪನ ಕುರಿತಾದ ‘ಮಹಾಕವಿ’ ಎಂಬ ಚಿತ್ರವನ್ನು ಅವರು ನಿರ್ದೇಶಿಸಿದ್ದು, ಈ ಚಿತ್ರ ಸೆ. 18ರಂದು ಬಿಡುಗಡೆ ಆಗುತ್ತಿದೆ.

ಬೆಳಗಾವಿಯ ಪ್ರಭು ಯತ್ನಟ್ಟಿಯವರು ತಮ್ಮ ಪಿ.ಆರ್. ಅಸೋಸಿಯೇಟ್ಸ್ ಸಂಸ್ಥೆಯಿಂದ ನಿರ್ಮಾಣ ಮಾಡಿದ್ದು, ಬರಗೂರು ರಾಮಚಂದ್ರಪ್ಪನವರು ಚಿತ್ರಕಥೆ, ಗೀತೆ, ಸಂಭಾಷಣೆಗಳನ್ನು ರಚಿಸಿ ನಿರ್ದೇಶನ ಮಾಡಿದ್ದಾರೆ. ಇದು ಬರಗೂರು ರಾಮಚಂದ್ರಪ್ಪನವರ ನಿರ್ದೇಶನದ 25ನೇ ಸಿನಿಮಾ ಎನ್ನುವುದು ಒಂದು ವಿಶೇಷ.

‘ಮಹಾಕವಿ’ ಸಿನಿಮಾವನ್ನು ಆದಿಕವಿ ಪಂಪನ ಎರಡು ಕಾವ್ಯಗಳನ್ನು ಆಧರಿಸಿ ಚಿತ್ರಿಸಲಾಗಿದೆ. ಪಂಪ ಮಹಾಕವಿಯ ಜೀವನ ಮತ್ತು ಆಶಯಗಳನ್ನು ಅಳವಡಿಸಲಾಗಿದೆ. ಪಂಪ ಮಹಾಕವಿಯು ಕನ್ನಡ ಸಾಹಿತ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಜಾತಿ ಪದ್ಧತಿಯನ್ನು ವಿರೋಧಿಸಿದ್ದು ಒಂದು ಚಾರಿತ್ರಿಕ ದಾಖಲೆ. ಪಂಪನ ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂಬ ಮಾತು ಸಾರ್ವಕಾಲಿಕ ಸಂದೇಶವಾಗಿದೆ. ರಾಜನ ಆಸ್ಥಾನದಲ್ಲಿದ್ದೂ ತನ್ನ ಸೃಜನಶೀಲ ಸ್ವಾತಂತ್ರ್ಯವನ್ನು ಕಾಪಾಡಿಕೊಂಡವರು ಪಂಪ.

‘ಮಹಾಕವಿ’ ಸಿನಿಮಾದಲ್ಲಿ ಪಂಪ ಮಹಾಕವಿಯ ಆಶಯಗಳ ಜೊತೆಗೆ ಆತನ ಕಾವ್ಯಗಳ ಕೆಲವು ಪ್ರಸಂಗಗಳನ್ನು ಚಿತ್ರಿಸಲಾಗಿದೆ. ‘ಆದಿಪುರಾಣ’ದ ಭರತ-ಬಾಹುಬಲಿ ಪ್ರಸಂಗ ಮತ್ತು ‘ವಿಕ್ರಮಾರ್ಜುನ ವಿಜಯಂ’ನ ಕರ್ಣನ ಸನ್ನಿವೇಶಗಳನ್ನು ಪ್ರಮುಖವಾಗಿ ತೋರಿಸಲಾಗಿದೆ. ಪಂಪನ ಕೆಲವು ಪದ್ಯಗಳನ್ನು ಅಳವಡಿಸಲಾಗಿದೆ.

ಈ ಚಿತ್ರದಲ್ಲಿ ಕಿಶೋರ್, ಅನುಷಾ ರೈ, ಸುಂದರರಾಜ್, ಪ್ರಮೀಳಾ ಜೋಷಾಯ್, ಕುಮಾರ್ ಗೋವಿಂದ್, ಶೀಲಾ, ಆಕಾಂಕ್ಷ್ ಬರಗೂರು, ಸುಂದರರಾಜ ಅರಸು, ರಾಜಪ್ಪ ದಳವಾಯಿ, ರಾಘವ್, ವತ್ಸಲಾ ಮೋಹನ್ ಮುಂತಾದವರು ಅಭಿನಯಿಸಿದ್ದಾರೆ. ಚಿತ್ರಕ್ಕೆ ಸುರೇಶ್ ಅರಸ್‍ ಸಂಕಲನ, ನಾಗರಾಜ ಆದವಾನಿ ಛಾಯಗ್ರಹಣ ಮತ್ತು ಶಮಿತಾ ಮಲ್ನಾಡ್ ಸಂಗೀತವಿದೆ.

ತೆರೆಯ ಮೇಲೆ ಬನ್ನಂಜೆ ಗೋವಿಂದಾಚಾರ್ಯರ ಜೀವನಗಾಥೆ …

Discover more from KannadaScreens

Subscribe now to keep reading and get access to the full archive.

Continue reading