ಈ ಚಿತ್ರಕ್ಕೆ ಬೈಕ್‍ ಹೀರೋ; ಯತಿರಾಜ್ ನಿರ್ದೇಶನದ ‘ರಾ ರಾ RX’ಗೆ ಚಾಲನೆ

ಚಂದನವನ, ಸಿನಿ ಸುದ್ದಿ

ಕಳೆದ ವರ್ಷ ‘ಸಂಜು’ ಎಂಬ ಪ್ರೇಮಕಥೆ, ‘ಸತ್ಯಂ ಶಿವಂ’ ಎಂಬ ಭೂಗತಲೋಕದ ಹಿನ್ನೆಲೆಯ ಕಥೆಯ ಚಿತ್ರಗಳನ್ನು ಮಾಡಿದ್ದ ಪತ್ರಕರ್ತ, ನಟ, ನಿರ್ದೇಶಕ ಯತಿರಾಜ್‍, ಈಗ ಸದ್ದಿಲ್ಲದೆ ಹೊಸ ಚಿತ್ರವೊಂದರ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಈ ಚಿತ್ರಕ್ಕೆ ಅವರೇ ಕಥೆ ಬರೆದಿದ್ದು, ಇತ್ತೀಚೆಗೆ ಚಿತ್ರದ ಮುಹೂರ್ತ ನಡೆದಿದೆ.

ಕಾರ್ತಿಕೇಯ ಎಂಟರ್ ಪ್ರೈಸಸ್ ಲಾಂಛನದಲ್ಲಿ ವೃದ್ಧಿ ಸುನೀಲ್, ಚೇತನ್ ಟಿ.ಆರ್ ಹಾಗೂ ಚಂದ್ರಶೇಖರ್ ಎಸ್.ಎಂ ನಿರ್ಮಿಸುತ್ತಿರುವ ‘ರಾ ರಾ RX’ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ನೆರವೇರಿತು. ಹಿರಿಯ ಛಾಯಾಗ್ರಾಹಕ ಕೆ.ಎನ್ ನಾಗೇಶ್ ಕುಮಾರ್ ಹಾಗೂ ಪತ್ರಕರ್ತ ವಿ.ಸಿ.ಎನ್ ಮಂಜು ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು. ನಿರ್ಮಾಪಕ ವೃದ್ಧಿ ಸುನೀಲ್ ಅವರ ಪತ್ನಿ ಪ್ರಿಯ ಕ್ಯಾಮೆರಾ ಚಾಲನೆ ಮಾಡಿದರು. ಸಮಾರಂಭಕ್ಕೆ ಆಗಮಿಸಿದ ಅಮ್ಮಂದರಿಂದ ಚಿತ್ರದ ಟೈಟಲ್ ಟೀಸರ್ ಅನಾವರಣವಾಗಿದ್ದು ವಿಶೇಷವಾಗಿತ್ತು.

ಇದು ಯತಿರಾಜ್‍ ಅವರು ಬರೆದಿರುವ ಕಾದಂಬರಿಯನ್ನು ಆಧರಿಸಿದ ಚಿತ್ರವಾಗಿದೆ. ಈ ಕುರಿತಾಗಿ ಮಾತನಾಡಿದ ಅವರು. ‘ಇದು ನಾನು ಬರೆದಿರುವ ಕಥೆ. ಪುಸ್ತಕ ರೂಪದಲ್ಲಿ ಹೊರತರೋಣ ಅಂದುಕೊಂಡೆ. ಆದರೆ, ಈಗ ಅದು ಚಿತ್ರವಾಗುತ್ತಿದೆ. ಈ ಕಥೆಯನ್ನು ಸಂಗೀತ ನಿರ್ದೇಶಕ ವಿಜಯ್ ಹರಿತ್ಸ ಅವರ ಹತ್ತಿರ ಹೇಳಿದ್ದೆ. ಅವರು ಅವರ ಸ್ನೇಹಿತರಾದ ವೃದ್ಧಿ ಸುನೀಲ್ ಅವರಿಗೆ ಹೇಳಿದ್ದಾರೆ. ಅವರಿಗೆ ಕಥೆ ಇಷ್ಟವಾಗಿ ನನ್ನನ್ನು ಕರೆಸಿದು. ಕಥೆ ಕೇಳಿ,‌ ಕಥೆ ಮೆಚ್ಚಿಕೊಂಡು ನಿರ್ಮಾಣಕ್ಕೆ ಮುಂದಾದರು. ವೃದ್ಧಿ ಸುನೀಲ್ ಅವರ ಜೊತೆಗೆ ಚೇತನ್ ಹಾಗೂ ಚಂದ್ರಶೇಖರ್ ಅವರು ಸಹ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ’ ಎಂದರು.

ಇದೊಂದು ಬೈಕು ಸುತ್ತ ಸುತ್ತವ ಚಿತ್ರ ಎನ್ನುವ ಅವರು, ‘’ರಾ ರಾ RX’ ಎಂದರೆ ರಾಜೀವ ಹಾಗೂ ರಾಕೇಶ‌. ಅವರಿಬ್ಬರೂ ಸ್ನೇಹಿತರು. ಚಿತ್ರದಲ್ಲಿ ಯಮಹಾ RX ಬೈಕ್ ಪ್ರಮುಖ ಪಾತ್ರ ವಹಿಸುತ್ತದೆ. ಇದು ಬರೀ ಸ್ನೇಹಿತರ ಕಥೆಯಷ್ಟೇ ಅಲ್ಲ, ತಾಯಿ – ಮಗನ ಬಾಂಧವ್ಯದ ಕಥೆಯೂ ಹೌದು. ನಿಜ ಹೇಳಬೇಕೆಂದರೆ, ಈ ಚಿತ್ರಕ್ಕೆ ಕಥೆಯೇ ನಾಯಕ. ಅನೇಕ ಹೊಸ ಪ್ರತಿಭೆಗಳನ್ನು ಆಡಿಷನ್ ಮೂಲಕ ಆಯ್ಕೆ ಮಾಡಿಕೊಂಡಿದ್ದೇವೆ. ಈ ಚಿತ್ರದಲ್ಲಿ ನಟಿಸುತ್ತಿರುವ ಬಹುತೇಕರಿಗೆ ಇದು ಮೊದಲ ಸಿನಿಮಾ. ಇದೇ 20ನೇ ತಾರೀಖಿನಿಂದ ಮದ್ದೂರಿನಲ್ಲಿ ಚಿತ್ರೀಕರಣ ಆರಂಭ. ಎಲ್ಲಾ ಅಂದುಕೊಂಡಂತೆ ಆದರೆ 35 ದಿನಗಳಲ್ಲಿ ಚಿತ್ರೀಕರಣ ಮುಕ್ತಾಯ’ ಎಂದು ಯತಿರಾಜ್‍ ಹೇಳಿದರು.

‘ರಾ ರಾ RX’ ಚಿತ್ರದಲ್ಲಿ ಅನೂಪ್ ಬೆಳ್ಳಾವಿ, ಕೀರ್ತನ, ಐಶ್ವರ್ಯ, ಭರತ್, ಸಹನಾ ಶ್ರೀ ಮುಂತಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ವಿಜಯ್‍ ಹರಿತ್ಸ ಸಂಗೀತ ಮತ್ತು ದೀಪಕ್ ‍ಅವರ ಛಾಯಾಗ್ರಹಣವಿದೆ. ವಿಜಯ್ ಹರಿತ್ಸ ಅವರ ಸಂಗೀತ ನಿರ್ದೇಶನ ಹಾಗೂ ದೀಪಕ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

ದರ್ಶನ್‍ ಅಭಿಮಾನಿ ಚೇತನ್‍, ‘ದೇವಿ’ಯಾದ ಕಥೆ …

Discover more from KannadaScreens

Subscribe now to keep reading and get access to the full archive.

Continue reading