ನಿರ್ದೇಶಕ ವಿಮಲ್ ರಾಜ್ ಕೆಲವು ವರ್ಷಗಳ ಹಿಂದೆ, ಅಂದರೆ, ೨೦೨೦ರಲ್ಲಿ ‘ಎ ಡೇಟ್’ ಹೆಸರಿನಲ್ಲಿ ಇಂಗ್ಲೀಷ್ ಭಾಷೆಯಲ್ಲಿ ಒಂದು ಕಿರುಚಿತ್ರವನ್ನು ನಿರ್ದೇಶನ ಮಾಡಿದ್ದರಂತೆ. ನಿರ್ಮಾಪಕರು ಸಿಗದಿದ್ದದ್ದರಿಂದಾಗಿ ಅದನ್ನು ಯೂಟ್ಯೂಬ್ ಮೂಲಕ ಬಿಡುಗಡೆ ಮಾಡಿದ್ದಾರೆ. ಆ ಕಿರುಚಿತ್ರಕ್ಕೆ 72 ಲಕ್ಷ ವೀಕ್ಷಣೆ ಸಿಕ್ಕಿದ್ದರಿಂದ, ಅದೇ ಕಥೆ ಇಟ್ಟುಕೊಂಡು, ಸುಜನೀತ್ ಶೆಟ್ಟಿ ಮತ್ತು ಅಶ್ವಿನಿ ಶೆಣೈ ಅಭಿನಯದಲ್ಲಿ ಈ ಚಿತ್ರವನ್ನು ಅವರು ಮಾಡಿದ್ದಾರೆ.
ವಿಮಲ್ ರಾಜ್ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಎ ಡೇಟ್’ ಇದೇ ಸೆಪ್ಟೆಂಬರ್ 4ರಂದು ತೆರೆಕಾಣಲಿದೆ. ಹೀಗೆ ಬಿಡುಗಡೆಯ ಹೊಸ್ತಿಲಿನಲ್ಲಿರುವಾಗಲೇ ಚಿತ್ರತಂಡ ಟ್ರೇಲರ್ ಬಿಡುಗಡೆಗೊಳಿಸಿದೆ. ಇತ್ತೀಚೆಗಷ್ಟೇ ಚಿತ್ರತಂಡವು ‘ಬ್ಯಾಡ್ ಗೈ ಆಂಥಮ್ …’ ಎಂಬ ಹಾಡನ್ನು ಬಿಡುಗಡೆ ಮಾಡಿತ್ತು. ಈಗ ಚಿತ್ರದ ಟ್ರೇಲರ್ ಅನಾವರಣಗೊಂಡಿದೆ.
‘ಎ ಡೇಟ್’ ಚಿತ್ರದ ಕುರಿತು ಮಾತನಾಡುವ ವಿಮಲ್ ರಾಜ್, ‘ಇದು ಬೆಂಗಳೂರು ಹುಡುಗ ಹಾಗೂ ದೆಹಲಿ ಮೂಲದ ಹುಡುಗಿಯ ಸುತ್ತ ಸುತ್ತುವ ಚಿತ್ರ. ಅವರಿಬ್ಬರ ಸುತ್ತ ಒಂದು ದಿನದಲ್ಲಿ ನಡೆಯುವ ಸಿನಿಮಾ ಇದು.

‘ಹೋಪ್’, ‘ಲಾಫಿಂಗ್ ಬುದ್ಧ’, ‘ಬಾಸ್’ ಮುಂತಾದ ಚಿತ್ರಗಳಲ್ಲಿ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಸುಜನೀತ್ ಶೆಟ್ಟಿ ಅ ಡೇಟ್ ಮೂಲಕ ಪೂರ್ಣ ಪ್ರಮಾಣದ ನಾತಯಕನಾಗಿದ್ದಾರೆ. ಅಶ್ವಿನಿ ಶೆಣೈ ಆಡಿಷನ್ ಮೂಲಕ ಆಯ್ಕೆಯಾಗಿ, ಈ ಚಿತ್ರದ ನಾಯಕಿಯಾಗಿ ಅಭಿನಯಿಸಿದ್ದಾರೆ.
‘ಎ ಡೇಟ್’ ಚಿತ್ರವನ್ನು ಐನಾಕ್ಸ್ ಸಂಸ್ಥೆ ಅರ್ಪಿಸಿ, ವಿತರಣಾ ಜವಾಬ್ದಾರಿಯನ್ನೂ ಹೊತ್ತುಕೊಂಡಿದೆ. ವೀಕೆಂಡ್ ಶಾರ್ಟ್ಸ್ ಸ್ಟುಡಿಯೋ ಬ್ಯಾನರ್ನಡಿ ಸಮಾನ ಮನಸ್ಕರ ತಂಡ ಈ ಚಿತ್ರವನ್ನು ನಿರ್ಮಿಸಿದೆ. ಚಿತ್ರಕ್ಕೆ ಮೋಕ್ಷ ಬೀಟ್ಸ್ ಸಂಗೀತ, ವಡ್ಡೆ ದೇವೇಂದ್ರ ರೆಡ್ಡಿ ಛಾಯಾಗ್ರಹಣ, ವಿಮಲ್ ರಾಜ್ ಎನ್ ಸಂಕಲನವಿದೆ.


