ಈ ವರ್ಷ ಆರು, ಅದರ ಜೊತೆಗೆ ಹೊಸ ಏಳು …

ಪ್ಯಾನ್ ಇಂಡಿಯಾ, ಸಿನಿ ಸುದ್ದಿ

ಮೋಹನ್ ಲಾಲ್‍ ಅಭಿನಯದ ‘ತುಡಕ್ಕಂ’ ಚಿತ್ರವು ಎರಡು ವಾರಗಳ ಹಿಂದೆ ಬಿಡುಗಡೆಯಾಗಿದೆ. ಅತಿಥಿ ಪಾತ್ರದಲ್ಲಿ ನಟಿಸಿರುವ ‘ಖಲೀಫಾ’ ಚಿತ್ರವು ಗುರುವಾರ (ಆಗಸ್ಟ್ 20) ಬಿಡುಗಡೆಯಾಗಿದೆ. ಸದ್ಯದಲ್ಲೇ ಅತಿಥಿ ಪಾತ್ರಗಳಲ್ಲಿ ನಟಿಸಿರುವ ಇನ್ನೆರಡು ಚಿತ್ರಗಳು (‘ಜೈಲರ್‍ 2’ ಮತ್ತು ‘ಹೈವಾನ್‍’) ಬಿಡುಗಡೆಯಾಗಲಿವೆ. ಈ ನಾಲ್ಕರ ಜೊತೆಗೆ ವರ್ಷದ ಆರಂಭದಲ್ಲಿ ಬಿಡುಗಡೆಯಾದ ‘ಪೇಟ್ರಿಯಾಟ್‍’ ಮತ್ತು ‘ದೃಶ್ಯಂ 3’ ಚಿತ್ರಗಳನ್ನು ಸೇರಿಸಿದರೆ, ಈ ವರ್ಷ ಬಿಡುಗಡೆಯಾದ ಅವರ ಚಿತ್ರಗಳ ಸಂಖ್ಯೆ ಆರಾಗುತ್ತದೆ.

ಹೀಗಿರುವಾಗಲೇ, ಅವರು ಎರಡು ದಿನಗಳ ಹಿಂದೆ ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳ ಮೂಲಕ ಏಕಕಾಲಕ್ಕೆ ಏಳು ಹೊಸ ಚಿತ್ರಗಳನ್ನು ಘೋಷಿಸಿದ್ದಾರೆ. ಲಾಲ್, ಅವರ ಜೊತೆಗೆ ಚಿತ್ರ ಮಾಡುತ್ತಿದ್ದಾರೆ, ಇವರ ಜೊತೆಗೆ ಚಿತ್ರ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಲೇ ಇದ್ದವು. ಅದೆಲ್ಲಕ್ಕೂ ಒಂದೇ ಏಟಿಗೆ ಲಾಲ್‍ ಉತ್ತರ ಕೊಟ್ಟಿದ್ದಾರೆ.

ಮುಂದಿನ ದಿನಗಳಲ್ಲಿ ವಿಷ್ಣು ಮೋಹನ್, ಅನೂಪ್‍ ಸತ್ಯನ್‍, ಪ್ರಿಯದರ್ಶನ್, ದಿಲೀಶ್ ಪೋತನ್, ಸತ್ಯನ್‍ ಆಂತಿಕ್ಕಾಡ್, ಜೂಡ್‍ ಆ್ಯಂಟೋನಿ ಜೋಸಫ್ ಮತ್ತು ಜೀತು ಜೋಸೆಫ್‍ ಜೊತೆಗೆ ಮುಂದಿನ ದಿನಗಳಲ್ಲಿ ಚಿತ್ರ ಮಾಡುತ್ತಿರುವುದಾಗಿ ‍ಘೋಷಿಸಿದ್ದಾರೆ. ಯಾರ ಜೊತೆಗೆ ಯಾವ ಚಿತ್ರ, ಯಾವಾಗ ಶುರು, ಯಾರೆಲ್ಲಾ ಇರುತ್ತಾರೆ ಎಂಬುದೆಲ್ಲಾ ಮುಂದಿನ ದಿನಗಳಲ್ಲಿ ಗೊತ್ತಾಗಬೇಕು.

ಅಂದಹಾಗೆ, ಲಾಲ್‍ ಒಟ್ಟಿಗೆ ಏಳು ಚಿತ್ರಗಳನ್ನು ಘೋಷಿಸಿದ ಎರಡೇ ದಿನಕ್ಕೆ ‘ಖಲೀಫಾ’ ಚಿತ್ರದ ಮುಂದುವರೆದ ಭಾಗವಾದ ‘ಖಲೀಫ 2 – ದಿ ಲೆಗೆಸಿ’ ಚಿತ್ರದಲ್ಲೂ ನಟಿಸುತ್ತಿದ್ದಾರೆ ಎಂಬ ಸುದ್ದಿಯೊಂದು ಕೇಳಿ ಬರುತ್ತಿದೆ. ‘ಖಲೀಫಾ’ ಚಿತ್ರದಲ್ಲಿ ಮೋಹನ್‍ ಲಾಲ್‍, ಮಾಂಬರಯಕ್ಕಲ್‍ ಅಹ್ಮದ್ ಅಲಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮುಂದವರೆದ ಭಾಗವು ಆ ಪಾತ್ರದ ಸುತ್ತಲೇ ಸುತ್ತಲಿದೆಯಂತೆ. ಇದೆಲ್ಲಾ ಸೇರಿಸಿದರೆ ಅವರು ನಟನೆಯ ಚಿತ್ರಗಳ ಸಂಖ್ಯೆ 370 ದಾಟುತ್ತದೆ …

43 ವರ್ಷಗಳ ನಂತರವೂ ಢಾಯ್‍ ಕಿಲೋ ಕಾ ಹಾಥ್‍ ಮಜಬೂತಾಗಿದೆ …

Discover more from KannadaScreens

Subscribe now to keep reading and get access to the full archive.

Continue reading