‘ಕೆಂಡ’ ಚಿತ್ರತಂಡದ ಜೊತೆಗೆ ಕೈಜೋಡಿಸಿದ ಕಿಲ್ಜಾಯ್ ಫಿಲಂಸ್

ಚಂದನವನ, ಸಿನಿ ಸುದ್ದಿ

‘ಗಂಟುಮೂಟೆ’ ಚಿತ್ರದ ಮೂಲಕ ಭರವಸೆಯ ನಿರ್ದೇಶಕಿಯಾಗಿ ಗುರುತಿಸಿಕೊಮಡಿರುವ ರೂಪಾ ರಾವ್, ಇದೀಗ ‘ಕೆಂಡ’ ಎಂಬ ಚಿತ್ರದ ಮೂಲಕ ನಿರ್ಮಾಪಕಿಯಾಗಿರುವುದು ಗೊತ್ತೇ ಇದೆ. ‘ಗಂಟುಮೂಟೆ’ ಚಿತ್ರದ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದ ಸಹದೇವ ಕೆಲವಡಿ ಈ ಚಿತ್ರವನ್ನು ನಿರ್ದೇಶಿಸಿದ್ದು, ಈ ಚಿತ್ರಕ್ಕೆ ಇದೀಗ ಅಂತಾರಾಷ್ಟ್ರೀಯ ಚಿತ್ರನಿರ್ಮಾಣ ಸಂಸ್ಥೆಯಾದ ಕಿಲ್ಜಾಯ್‍ ಫಿಲಂಸ್‍ ಕೈಜೋಡಿಸಿದೆ.

ಕಿಲ್ಜಾಯ್ ಫಿಲಂಸ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ, ಘನತೆ ಹೊಂದಿರುವ ನಿರ್ಮಾಣ ಸಂಸ್ಥೆ.  ನ್ಯೂಯಾರ್ಕ್ ಹಾಗೂ ಬರ್ಲಿನ್ ಮೂಲದ ಈ ಸಂಸ್ಥೆ ಆಸ್ಕರ್‍, ಭಾಪ್ಟಾ ಮುಂತಾದ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದುಕೊಂಡ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದೆ. ಇದರ ಕಡೆಯಿಂದ ಹಲವಾರು ಪ್ರತಿಭಾನ್ವಿತ ನಿರ್ದೇಶಕರು ಪ್ರವರ್ಧಮಾನಕ್ಕೆ ಬಂದಿದ್ದಾರೆ. ಈಗ ಈ ಸಂಸ್ಥೆಯು ಚಿತ್ರದ ವಿತರಣಾ ಹಕ್ಕುಗಳನ್ನು ತನ್ನದಾಗಿಸಿಕೊಂಡಿದೆ.

ಈ ಸಂಸ್ಥೆ ವ್ಯಾವಹಾರಿಕವಾಗಿ ಮುಂದುವರೆಯ ಬೇಕೆಂದರೆ ಸಾಕಷ್ಟು ಕಟ್ಟುನಿಟ್ಟಾದ ಮಾನದಂಡಗಳನ್ನು ಕಾಯ್ದುಕೊಂಡಿದೆ. ಅದೆಲ್ಲದರಲ್ಲಿ ನಿರ್ದೇಶಕ ಸಹದೇವ್ ಕೆಲವಡಿ ಪಾಸ್ ಆಗಿದ್ದಾರೆ ಎನ್ನುವುವುದು ವಿಶೇಷ. ಈ ಬೆಳವಣಿಗೆಯಿಂದ ರೂಪಾ ರಾವ್ ಮತ್ತು ಸಹದೇವ್ ಕೆಲವಡಿ ಸಾರಥ್ಯದ ಅಮೇಯುಕ್ತಿ ಸ್ಟುಡಿಯೋಸ್ ಎಂಬ ನಿರ್ಮಾಣ ಸಂಸ್ಥೆಗೆ ಮತ್ತಷ್ಟು ಬಲ ಬಂದಂತಾಗಿದೆ.

ಒಬ್ಬ ಸಾಮಾನ್ಯ ಹುಡುಗ ವ್ಯವಸ್ಥೆಯ ಅಡಕತ್ತರಿಗೆ ಸಿಕ್ಕು ಸಿಡಿದೇಳುವ ಕಥೆ ‘ಕೆಂಡ’ ಚಿತ್ರದ ಜೀವಾಳ. ರಂಗಭೂಮಿ ಪ್ರತಿಭೆಗಳೇ ಹೆಚ್ಚಿರುವ ಈ ಚಿತ್ರದಲ್ಲಿ ಬಿ.ವಿ ಭರತ್, ಪ್ರಣವ್ ಶ್ರೀಧರ್, ವಿನೋದ್ ರವೀಂದ್ರನ್, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ನಟಿಸಿದ್ದಾರೆ. ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ ಅವರ ಪುತ್ರ ರಿತ್ವಿಕ್ ಕಾಯ್ಕಿಣಿ ಈ ಸಿನಿಮಾ ಮೂಲಕ ಸಂಗೀತ ನಿರ್ದೇಶಕರಾಗುತ್ತಿದ್ದಾರೆ.

ಪರಭಾಷ ಚಿತ್ರಗಳ ಭಯ; ಈ ವಾರ ಕನ್ನಡ ಸಿನಿಮಾ ಇಲ್ಲ

Discover more from KannadaScreens

Subscribe now to keep reading and get access to the full archive.

Continue reading