500 ಕೋಟಿ ಕ್ಲಬ್‍ನಲ್ಲಿ ನಾಲ್ಕು ಚಿತ್ರಗಳು; ಹೊಸ ದಾಖಲೆ ಬರೆದ ರಜನಿ

ಪ್ಯಾನ್ ಇಂಡಿಯಾ, ಸಿನಿ ಸುದ್ದಿ

ರಜನಿಕಾಂತ್‍ ಅಭಿನಯದ ‘ಜೈಲರ್ 2’ ಹೊಸ ಹೊಸ ದಾಖಲೆಗಳನ್ನು ಬರೆಯುತ್ತದೆ. ಅಕ್ಟೋಬರ್‍ 15ರಂದು ಬಿಡುಗಡೆಯಾದ ಈ ಚಿತ್ರವು ಮೊದಲ ವಾರ 550 ಕೋಟಿ ರೂ. ಗಳಿಕೆ ಮಾಡಿದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಚಿತ್ರವು ಹೊಸ ದಾಖಲೆ ಬರೆಯುತ್ತಿದೆ.

‘ಜೈಲರ್ 2’ ಚಿತ್ರದ ಒಟ್ಟಾರೆ ಗಳಿಕೆಯಲ್ಲಿ ಭಾರತದ ಗಳಿಕೆ 350 ಕೋಟಿ ರೂ.ನಷ್ಟಿದೆ ಎಂದು ಬಾಕ್ಸ್ ಆಫೀಸ್ ಟ್ರಾಕರ್ ಸಕ್ನಿಲ್ಕ್ ಡಾಟ್‍ಕಾಮ್‍ ವರದಿ ಮಾಡಿದ್ದು, 200ಕ್ಕೂ ಹೆಚ್ಚು ಕೋಟಿ ರೂ. ವಿದೇಶಿ ನೆಲದಿಂದ ಬಂದಿದೆ. ಭಾರತದಲ್ಲಿ ಕಡಿಮೆ ಸಮಯದಲ್ಲಿ 300 ಕೋಟಿ ರೂ. ಗಳಿಕೆ ಮಾಡಿದ ಮೊದಲ ತಮಿಳು ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗುವುದರ ಜೊತೆಗೆ, ಕಡಿಮೆ ಸಮಯದಲ್ಲಿ 500 ಕೋಟಿ ರೂ. ಕ್ಲಬ್‍ಗೆ ಸೇರಿದ ಚಿತ್ರ ಎಂಬ ಹೆಗ್ಗಳಿಕೆಗೆ ಚಿತ್ರ ಪಾತ್ರವಾಗಿದೆ.

ವಿಶೇಷವೆಂದರೆ, 500 ಕೋಟಿ ರೂ. ಕ್ಲಬ್‍ನಲ್ಲಿ ಒಟ್ಟು ಐದು ಚಿತ್ರಗಳಿದ್ದು, ಈ ಪೈಕಿ ನಾಲ್ಕು ರಜನಿಕಾಂತ್‍ ಅವರ ಚಿತ್ರಗಳಿರುವುದು ವಿಶೇಷ. ಕಾಲಿವುಡ್‍ನ ಮೊದಲ 500 ಕೋಟಿ ರೂ. ಚಿತ್ರವೆಂದರೆ ಅದು ರಜನಿಕಾಂತ್‍ ಅಭಿನಯದ ‘2.0’. 2018ರಲ್ಲಿ ಬಿಡುಗಡೆಯಾದ ಈ ಚಿತ್ರವು ಸುಮಾರು 700 ಕೋಟಿ ರೂ. ಗಳಿಕೆ ಮಾಡಿತ್ತು.

ನಂತರದ ದಿನಗಳಲ್ಲಿ ‘ಜೈಲರ್’, ‘ಲಿಯೋ’ ಮತ್ತು ‘ಕೂಲಿ’ ಚಿತ್ರಗಳು ಈ 500 ಕೋಟಿ ರೂ. ಕ್ಲಬ್‍ಗೆ ಸೇರ್ಪಡೆಯಾಗಿವೆ. ಈಗ ‘ಜೈರ್‍ 2’, ‘ಕೂಲಿ’ ಚಿತ್ರದ ಒಟ್ಟಾರೆ ಗಳಿಕೆಯನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನದಲ್ಲಿದೆ. ಸದ್ಯ ‘ಜೈಲರ್‍’ ಚಿತ್ರವು ಎರಡನೇ ಸ್ಥಾನದಲ್ಲಿದ್ದು, ಈ ವಾರಾಂತ್ಯಕ್ಕೆ ಚಿತ್ರವು ಅದನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಬರುವ ಸಾಧ್ಯತೆ ಇದೆ. ಹಾಗೇನಾದರೂ ಆದರೆ, 500 ಕೋಟಿ ರೂ. ಕ್ಲಬ್‍ನ ಮೂರೂ ಚಿತ್ರಗಳು ರಜನಿಕಾಂತ್‍ ಅವರದ್ದಾಗುತ್ತದೆ.

ಇನ್ನು, ‘ಜೈಲರ್ 2’ ಚಿತ್ರವು ಕರ್ನಾಟಕದಲ್ಲಿ ಮೊದಲ ವಾರ 60ಕ್ಕೂ ಹೆಚ್ಚು ಕೋಟಿ ರೂ. ಗಳಿಕೆ ಮಾಡಿದೆ. ಚಿತ್ರ ಬಿಡುಗಡೆಯಾದ ಮೊದಲ ದಿನ 14 ಕೋಟಿ ರೂ. ಗಳಿಕೆಯಾಗಿದೆ ಎಂದು ಹೇಳಲಾಗಿತ್ತು. ಈಗ ಒಂದು ವಾರದಲ್ಲಿ ಚಿತ್ರ ಗಳಿಕೆ 60 ಕೋಟಿ ರೂ. ದಾಟಿದೆ. ‘ಜೈಲರ್‍ 2’ ಚಿತ್ರವನ್ನು ನಿರ್ಮಾಪಕ ಕೆ. ಮಂಜು, ಕರ್ನಾಟಕದಲ್ಲಿ ಕುಮಾರ್ ಫಿಲ್ಮ್ ಫ್ಯಾಕ್ಟರಿ ಮೂಲಕ ಬಿಡುಗಡೆ ಮಾಡಿದ್ದಾರೆ.

‘ಜೈಲರ್ 2’ ಚಿತ್ರದಲ್ಲಿ ರಜನಿಕಾಂತ್‍, ರಮ್ಯಾ ಕೃಷ್ಣನ್‍, ಎಸ್‍.ಜೆ. ಸೂರ್ಯ, ಯೋಗಿ ಬಾಬು ಮುಂತಾದವರು ನಟಿಸುತ್ತಿದ್ದು, ಅತಿಥಿ ಪಾತ್ರಗಳಲ್ಲಿ ಮಿಥುನ್‍ ಚಕ್ರವರ್ತಿ, ಮೋಹನ್‍ ಲಾಲ್‍, ಶಿವರಾಜಕುಮಾರ್‍, ವಿದ್ಯಾ ಬಾಲನನ್‍, ಹೃತಿಕ್‍ ರೋಶನ್ ಮುಂತಾದವರು ನಟಿಸಿದ್ದಾರೆ. ಚಿತ್ರವನ್ನು ನೆಲ್ಸನ್‍ ದಿಲೀಪ್‍ ಕುಮಾರ್ ನಿರ್ದೇಶನ ಮಾಡಿದ್ದು, ಸನ್‍ ಪಿಕ್ಚರ್ಸ್ ಸಂಸ್ಥೆಯ ಕಲಾನಿಧಿ ಮಾರನ್‍ ನಿರ್ಮಿಸುತ್ತಿದ್ದಾರೆ. ಅನಿರುದ್ಧ್ ರವಿಚಂದರ್‍ ಸಂಗೀತ ಚಿತ್ರಕ್ಕಿದೆ.

Discover more from KannadaScreens

Subscribe now to keep reading and get access to the full archive.

Continue reading