ಪರಭಾಷಾ ಚಿತ್ರಗಳ ಭಯ; ಈ ವಾರ ಕನ್ನಡ ಸಿನಿಮಾ ಇಲ್ಲ

ಚಂದನವನ, ಸಿನಿ ಸುದ್ದಿ

ಇದೇ ಜನವರಿ 12ರಂದು ಬಿಡುಗಡೆಯಾಗಬೇಕಿದ್ದ ರಂಗಾಯಣ ರಘು, ರಾಘವೇಂದ್ರ ರಾಜಕುಮಾರ್ ಮುಂತಾದವರು ಅಭಿನಯಿಸಿರುವ ‘ರಂಗ ಸಮುದ್ರ’ ಚಿತ್ರ ಒಂದು ವಾರ ಮುಂದಕ್ಕೆ ಹೋಗಿದೆ. ಚಿತ್ರವು ಇದೀಗ ಜನವರಿ 19ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಅಂದಹಾಗೆ, ಚಿತ್ರ ಮುಂದಕ್ಕೆ ಹೋಗಿರುವ ಕಾರಣ, ಸಂಕ್ರಾಂತಿ ಹಬ್ಬದ ಪ್ರಯುಕ್ತ ಏಳು ದೊಡ್ಡ ತೆಲುಗು ಮತ್ತು ತಮಿಳು ಚಿತ್ರಗಳು ಬಿಡಗುಡೆ ಆಗುತ್ತಿವೆ. ಮಹೇಶ್‍ ಬಾಬು ಅಭಿನಯದ ‘ಗುಂಟೂರು ಖಾರಂ’, ವೆಂಕಟೇಶ್‍ ಅಭಿನಯದ ‘ಸೈಂಧವ’, ನಾಗಾರ್ಜುನ ಅಭಿನಯದ ‘ನಾ ಸಾಮಿ ರಂಗ’, ತೇಜ ಸಜ್ಜಾ ಅಭಿನಯದ ‘ಹನುಮ್ಯಾನ್‍’, ಧನುಷ್‍ ಅಭಿನಯದ ‘ಕ್ಯಾಪ್ಟನ್‍ ಮಿಲ್ಲರ್‍’, ಶಿವಕಾರ್ತಿಕೇಯನ್‍ ಅಭಿನಯದ ‘ಆಯಲಾನ್‍’ ಮತ್ತು ಅರುಣ್‍ ವಿಜಯ್‍ ಅಭಿನಯದ ‘ಮಿಷನ್‍ – ಚಾಪ್ಟರ್ 1’ ಚಿತ್ರಗಳು ಬಿಡುಗಡೆಯಾಗುತ್ತಿವೆ.

ಈ ಎಲ್ಲಾ ಚಿತ್ರಗಳು ಕರ್ನಾಟಕದಲ್ಲೂ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುತ್ತಿದ್ದು, ರಾಜ್ಯದ ಬಹುತೇಕ ಚಿತ್ರಮಂದಿರಗಳನ್ನು ಆಕ್ರಮಿಸಿಕೊಳ್ಳಲಿವೆ. ಸದ್ಯ ದರ್ಶನ್‍ ಅಭಿನಯದ ‘ಕಾಟೇರ’ ಚಿತ್ರವು ಹೌಸ್‍ಫುಲ್‍ ಪ್ರದರ್ಶನಗಳನ್ನು ಕಾಣುತ್ತಿದ್ದು, ಮಿಕ್ಕಂತೆ ಯಾವುದೇ ಕನ್ನಡ ಚಿತ್ರ ನಿಂತಿಲ್ಲ. ಕಳೆದ ವಾರ ‘ಒಂಟಿ ಬಂಟಿ’, ‘ಆದರ್ಶ ರೈತ’ ಮತ್ತು ‘ಆನ್‍ಲೈನ್‍ ಮದುವೆ ಆಫ್‍ಲೈನ್‍ ಶೋಭನ’ ಎಂಬ ಮೂರು ಚಿತ್ರಗಳು ಬಿಡುಗಡೆಯಾಗಿದ್ದು, ಈ ಮೂರೂ ಚಿತ್ರಗಳು ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿವೆ.

ಬಿಡುಗಡೆ ಆಗುತ್ತಿರುವ ಏಳು ಚಿತ್ರಗಳ ಪೈಕಿ ಮೂರು ಚಿತ್ರಗಳು ಪ್ಯಾನ್‍ ಇಂಡಿಯಾ ಚಿತ್ರಗಳಾಗಿದ್ದು, ಕನ್ನಡದಲ್ಲೂ ಬಿಡುಗಡೆಯಾಗುವ ಸಾಧ್ಯತೆ ಇದೆ. ಅದರಲ್ಲೂ ‘ಕ್ಯಾಪ್ಟನ್‍ ಮಿಲ್ಲರ್’ ಚಿತ್ರದಲ್ಲಿ ಶಿವರಾಜಕುಮಾರ್‍ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕಾರಣಗಳಿಗೆ ಸಮಾಧಾನ ಪಟ್ಟುಕೊಳ್ಳಬೇಕೇ ಹೊರತು, ಮಿಕ್ಕಂತೆ ಈ ವಾರ ಕನ್ನಡಕ್ಕಿಂತ ಪರಭಾಷಾ ಚಿತ್ರಗಳೇ ಹೆಚ್ಚು ರಾಜ್ಯದಲ್ಲಿ ರಾರಾಜಿಸಲಿವೆ.

ನೀವೆಲ್ಲರೂ ನಾನು ಆಗಬೇಕು ಅನ್ನೋದೇ ‘ಯುಐ’: ಉಪೇಂದ್ರ

Discover more from KannadaScreens

Subscribe now to keep reading and get access to the full archive.

Continue reading