ಇತ್ತೀಚಿನ ಕೆಲವು ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದ ಸೃಜನ್ ಲೋಕೆಶ್, ಈಗ ಬಹಳ ದಿನಗಳ ನಂತರ ಮತ್ತೊಮ್ಮೆ ನಿರೂಪಣೆಗೆ ವಾಪಸ್ಸಾಗಿದ್ದಾರೆ. ಸೃಜನ್ ಸೂತ್ರಧಾರಿಯಾಗಿ ನಡೆಸಿಕೊಡುತ್ತಿರುವ ‘ಫ್ಯಾಮಿಲಿ ಗ್ಯಾಂಗ್ಸ್ಟಾರ್ಸ್’ ಎಂಬ ಕಾರ್ಯಕ್ರಮ ಕಲರ್ಸ್ ಕನ್ನಡದಲ್ಲಿ ಶನಿವಾರ ಪ್ರಾರಂಭವಾಗಿದೆ.
‘ಫ್ಯಾಮಿಲಿ ಗ್ಯಾಂಗ್ಸ್ಟಾರ್ಸ್’ ಎಂಬ ಹೆಸರೇ ಹೇಳುವಂತೆ, ಕಿರುತೆರೆಯ ಜನಪ್ರಿಯ ಧಾರಾವಾಹಿಯ ಕುಟುಂಬಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿವು. ಇದೊಂದು ಆಟ ಮತ್ತು ಮನರಂಜನೆಯ ಮಿಶ್ರಣವಾದ ಕಾರ್ಯಕ್ರಮವಾಗಿದ್ದು, ಕಲರ್ಸ್ ಕನ್ನಡದ ಕೆಲವು ಜನಪ್ರಿಯ ಧಾರಾವಾಹಿಗಳ ಕಲಾವಿದರು ಈ ಕಾರ್ಯಕ್ರಮದಲ್ಲಿ ಸ್ಪರ್ಧಿಗಳಾಗಿ ಭಾಗವಹಸಿಲಿದ್ದಾರೆ. ಆಟಗಾರರನ್ನು ಹುರಿದುಂಬಿಸಲು ಆಯಾ ಧಾರಾವಾಹಿಗಳ ಅಭಿಮಾನಿಗಳೂ ಅಲ್ಲಿರುತ್ತಾರೆ.
Read More: ಚಂದನವನದ 17 ಸೆಲೆಬ್ರಿಟಿಗಳಿಂದ ಬಿಡುಗಡೆಯಾಯ್ತು ‘ಗಣ’ ಚಿತ್ರದ ಪೋಸ್ಟರ್
ಈ ಕಾರ್ಯಕ್ರಮದಲ್ಲಿ ‘ಭಾಗ್ಯಲಕ್ಷ್ಮೀ’, ‘ತ್ರಿಪುರ ಸುಂದರಿ’, ‘ಕೆಂಡಸಂಪಿಗೆ’, ‘ಅಂತರಪಟ’, ‘ಗೀತಾ’, ‘ರಾಮಾಚಾರಿ’, ‘ರಾಜ ರಾಣಿ’, ‘ನನ್ನಮ್ಮ ಸೂಪರ್ಸ್ ಸ್ಟಾರ್’, ‘ಡ್ಯಾನ್ಸಿಂಗ್ ಚಾಂಪಿಯನ್’, ‘ಗಿಚ್ಚಿ ಗಿಲಿಗಿಲಿ’ ತಂಡಗಳು ಭಾಗವಹಿಸುತ್ತಿವೆ. ಒಟ್ಟಾರೆ ಇದು ಕಲರ್ಸ್ ಕನ್ನಡ ತಂಡದವರೇ ಒಟ್ಟಾಗಿ ಆಡುವ ಹೊಸ ಕಾರ್ಯಕ್ರಮ.
‘ಫ್ಯಾಮಿಲಿ ಗ್ಯಾಂಗ್ಸ್ಟಾರ್ಸ್’ ಕಾರ್ಯಕ್ರಮವು ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.


