ಮತ್ತೊಂದು ಚಿತ್ರದಲ್ಲಿ ನಟಿಸಲು ಸಿದ್ದರಾಮಯ್ಯ ಒಪ್ಪಿಗೆ …

ಚಂದನವನ, ಸಿನಿ ಸುದ್ದಿ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಲವು ವರ್ಷಗಳ ಹಿಂದೆ ಕವಿತಾ ಲಂಕೇಶ್‍ ನಿರ್ಮಾಣದ ‘ಸಮ್ಮರ್‍ ಹಾಲಿಡೇಸ್‍’ ಎಂಬ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿದ್ದರು. ಈಗ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಾಗಿಯೇ ಹೊಸ ಚಿತ್ರವೊಂದರಲ್ಲಿ ನಟಿಸುವುದಕ್ಕೆ ಸಜ್ಜಾಗಿದ್ದಾರೆ.

ಪತ್ರಕರ್ತರಾಗಿ ಗುರುತಿಸಿಕೊಂಡಿದ್ದ ಎ. ರಾಜೇಶ್‌ ಗೌಡ, ಇದೀಗ ಹೊಸ ಪ್ರಯೋಗಕ್ಕೆ ಕೈ ಹಾಕಿದ್ದಾರೆ. 48 ಘಂಟೆಗಳು, ಒಂದು ತಂಡ, ಒಂದು ದಾಖಲೆ, ಒಂದು ಪ್ರಪಂಚ ಎಂಬ ಪರಿಕಲ್ಪನೆಯಲ್ಲಿ ಹೆಸರಿಡದ ಚಿತ್ರವನ್ನು ನಿರ್ಮಿಸುವುದರ ಜೊತೆಗೆ ನಿರ್ದೇಶನ ಮಾಡುತ್ತಿದ್ದಾರೆ.

ಇತ್ತೀಚೆಗೆ ನಡೆದ ಈ ಚಿತ್ರಕ್ಕೆ ಸಂಬಂಧಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಎಚ್.ಎಂ.ರೇವಣ್ಣ, ಸಂಗೀತ ನಿರ್ದೇಶಕ ಶ್ರೀಧರ್ ಸಂಭ್ರಮ್ ಮತ್ತು ರಾಜೇಶ್‍ ಗೌಡ ಹಾಜರಿದ್ದರು.

ರಾಜಕೀಯ ಆಧಾರಿತ ಕಥೆಯಾದ್ದರಿಂದ ಸಿದ್ದರಾಮಯ್ಯ ಸೂಕ್ತ ಎಂದು ಅವರನ್ನು ಕೇಳಲಾಯಿತಂತೆ. ಅವರು ಒಪ್ಪಿದ್ದು, ನವೆಂಬರ್ ತಿಂಗಳಿಂದ ಚಿತ್ರೀಕರಣ ನಡೆಸಲು ಯೋಜನೆ ಹಾಕಲಾಗಿದೆ. ಈ ಚಿತ್ರದಲ್ಲಿ ಉಮಾಶ್ರೀ ಮುಂತಾದವರು ನಟಿಸಲಿದ್ದಾರೆ.

ಚಿತ್ರದ ಕುರಿತು ಮಾತನಾಡುವ ರಾಜೇಶ್ ಗೌಡ, ‘ಚಿತ್ರವು ಅಂದಾಜು 100 ನಿಮಿಷ ಇರಲಿದೆ. ರಾಜಕೀಯ ಆಧಾರಿತ ಕಥೆಯನ್ನು ಒಳಗೊಂಡಿರುವುದರಿಂದ ಈ ಚಿತ್ರಕ್ಕೆ ಸಿದ್ದರಾಮಯ್ಯ ಸೂಕ್ತ ಎಂದು ಅವರನ್ನು ಮನವಿ ಮಾಡಿಕೊಂಡೆವು. ಚಿತ್ರದಲ್ಲಿ ಅಭಿನಯಿಸಲು ಅವರಿಂದ ಹಸಿರು ನಿಶಾನೆ ಸಿಕ್ಕಿದೆ. ಎಚ್‍.ಎಂ. ರೇವಣ್ಣ ಮತ್ತು ಕಾ.ತ. ಚಿಕ್ಕಣ್ಣ ಇವರಿಂದ ಸಿನಿಮಾ ಮಾಡಲು ಸುಲಭವಾಯಿತು. ಅವರುಗಳು ಸಹ ಬಣ್ಣ ಹಚ್ಚಲಿದ್ದಾರೆ. ಹಿರಿಯ ನಟಿ ಉಮಾಶ್ರೀ ಮಿಕ್ಕಂತೆ ಕಲಾವಿದರು ಸೇರ್ಪಡೆಯಾಗಲಿದ್ದಾರೆ. ಸಿ.ಎಂ ಗೃಹ ಕಚೇರಿ ಕಾವೇರಿ ಹಾಗೂ ಇನ್ನೊಂದು ಬಂಗಲೆಯಲ್ಲಿ ನವೆಂಬರ್ ತಿಂಗಳಿಂದ ಚಿತ್ರೀಕರಣ ನಡೆಸಲು ಯೋಜನೆ ಹಾಕಲಾಗಿದೆ. ಈಗಾಗಲೇ ಅನುಮತಿಗಾಗಿ ಪತ್ರ ಬರೆಯಲಾಗಿದೆ. ಚಲನಚಿತ್ರ ಪ್ರಕ್ರಿಯೆಯನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಿ, ಗಿನ್ನಿಸ್ ದಾಖಲೆಗೆ ತಲುಪುವ ಉದ್ದೇಶವಿದೆ’ ಎಂದು ಮಾಹಿತಿ ನೀಡಿದರು.

ಕರ್ನಾಟಕದ ಹುಡುಗ ಲವ್ಸ್ ತಮಿಳುನಾಡಿನ ಹುಡುಗಿ …

Discover more from KannadaScreens

Subscribe now to keep reading and get access to the full archive.

Continue reading