ಮೂರು ದಿನಗಳಲ್ಲಿ 100 ಕೋಟಿ ಕ್ಲಬ್‍ ಸೇರಿದ ‘ದೃಶ್ಯಂ 3”

ಪ್ಯಾನ್ ಇಂಡಿಯಾ, ಸಿನಿ ಸುದ್ದಿ

ಮೋಹನ್‍ ಲಾಲ್‍ ಅಭಿನಯದ ಮತ್ತು ಜೀತು ಜೋಸೆಫ್‍ ನಿರ್ದೇಶನದ ಬಹುನಿರೀಕ್ಷಿತ ಚಿತ್ರವಾದ ‘ದೃಶ್ಯಂ 3’, ಗುರುವಾರ (ಮೇ 21) ಜಗತ್ತಿನಾದ್ಯಂತ ಬಿಡುಗಡೆಯಾಗಿದೆ. ಚಿತ್ರವು ಬಿಡುಗಡೆಯಾದ ಮೂರು ದಿನಗಳಲ್ಲಿ 100 ಕೋಟಿ ರೂ. ಗಳಿಸಿದೆ.

ಬಾಕ್ಸ್ ಆಫೀಸ್‍ ಟ್ರಾಕರ್‍ ಸಕ್ನಿಲ್ಕ್ ಡಾಟ್‍ಕಾಮ್‍ ಪ್ರಕಾರ ‘ದೃಶ್ಯಂ’ ಚಿತ್ರವು ಭಾರತದಲ್ಲಿ ಮೊದಲ ದಿನ 15.85 ಕೋಟಿ ರೂ.ನಷ್ಟು ಗಳಿಕೆ ಮಾಡಿದರೆ, ಹೊರದೇಶಗಳಲ್ಲಿ 27 ಕೋಟಿ ರೂ. ಗಳಿಕೆ ಮಾಡಿದೆ. ಇನ್ನು, ಎರಡನೆಯ ದಿನವಾದ ಶುಕ್ರವಾರ, ಭಾರತದಲ್ಲಿ ಚಿತ್ರವು 11.05 ಕೋಟಿಯಷ್ಟು ಗಳಿಕೆ ಕಂಡರೆ, ವಿದೇಶದಲ್ಲಿ 20 ಕೋಟಿ ರೂ. ಗಳಿಕೆ ಕಂಡಿದೆ ಎಂದು ಹೇಳಲಾಗಿದೆ. ಮೂರನೆಯ ದಿನ 13.70 ಕೋಟಿ ರೂ. ಭಾರತದಲ್ಲಾದರೆ, ವಿದೇಶದಲ್ಲಾದ ಗಳಿಕೆಯಿಂದ ಚಿತ್ರ ಸಲೀಸಾಗಿ 100 ಕೋಟಿ ಕ್ಲಬ್‍ ಸೇರಿದೆ ಎಂದು ಹೇಳಲಾಗಿದೆ.

‘ದೃಶ್ಯಂ 3’ ಚಿತ್ರವು 2013ರಲ್ಲಿ ಬಿಡುಗಡೆಯಾದ ‘ದೃಶ್ಯಂ’ ಮತ್ತು 2021ರಲ್ಲಿ ಬಿಡುಗಡೆಯಾದ ‘ದೃಶ್ಯಂ 2’ ಚಿತ್ರದ ಮುಂದುವರೆದ ಭಾಗವಾಗಿದ್ದು, ಜಾರ್ಜ್ ಕುಟ್ಟಿ ಎಂಬುವವನ ಕುಟುಂಬದ ಸುತ್ತ ಸುತ್ತುತ್ತದೆ. ಜಾರ್ಜ್ ಕುಟ್ಟಿ ಪಾತ್ರವನ್ನು ಮೋಹನ್‍ ಲಾಲ್‍ ನಿರ್ವಹಿಸಿದ್ದಾರೆ. ಜೊತೆಗೆ ಮೀನಾ, ಅನ್ಸಿಬಾ ಹಾಸನ್, ಎಸ್ತರ್‍ ಅನಿಲ್‍, ಸಿದ್ದಿಖ್, ಬಿಜು ಮೆನನ್‍, ಮುರಳಿ ಗೋಪಿ, ಆಶಾ ಶರತ್‍ ಕುಮಾರ್‍ ಮುಂತಾದವರು ಅಭಿನಯಿಸಿದ್ದಾರೆ.

‘ದೃಶ್ಯಂ 3’ ಚಿತ್ರವನ್ನು ಜೀತು ಜೋಸಫ್‍ ಬರೆದು ನಿರ್ದೇಶಿಸಿದರೆ, ಆ್ಯಂಟೋನಿ ಪೆರುಂಬವೂರ್ ನಿರ್ಮಿಸಿದ್ದಾರೆ.

ಚಿತ್ರರಂಗ ಉಳಿಸಲು ವಾಣಿಜ್ಯ ಮಂಡಳಿ ವಿಚಾರ ಗೋಷ್ಠಿ

Discover more from KannadaScreens

Subscribe now to keep reading and get access to the full archive.

Continue reading