ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಆದ ‘ಬಿಗ್ ಬಾಸ್’ ಸೀಸನ್ 10ರ ಪ್ರಾರಂಭಕ್ಕೆ ದಿನಗಣನೆ ಪ್ರಾರಂಭವಾಗಿದೆ. ಈ ಕಾರ್ಯಕ್ರಮವು ಅಕ್ಟೋಬರ್ 6ಕ್ಕೆ ಸಂಜೆ 6ಕ್ಕೆ ಪ್ರಾರಂಭವಾಗಲಿದೆ. ಆ ನಂತರ ಸೋಮವಾರದಿಂದ ಪ್ರತಿ ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ.
‘ಬಿಗ್ ಬಾಸ್’ ಕಾರ್ಯಕ್ರಮ ಹತ್ತಿರ ಬಂತು ಎಂದರೆ, ಈ ಕಾರ್ಯಕ್ರಮದಲ್ಲಿ ಯಾರೆಲ್ಲಾ ಭಾಗವಹಿಸುತ್ತಾರೆ ಎಂಬ ಪ್ರಶ್ನೆ ಕನ್ನಡಿಗರನ್ನು ಕಾಡುತ್ತದೆ. ಅದಕ್ಕೆ ಸರಿಯಾಗಿ ಪ್ರತಿ ಬಾರಿ ಒಂದಿಷ್ಟು ಹೆಸರುಗಳು ಕೇಳಿಬರುತ್ತವೆ. ಅದರಲ್ಲಿ ಕೆಲವು ನಿಜವಾದರೆ, ಇನ್ನೂ ಕೆಲವು ಸುಳ್ಳಾಗುತ್ತದೆ. ಯಾವುದಕ್ಕೂ ಕಾರ್ಯಕ್ರಮ ಪ್ರಾರಂಭದ ದಿನ ಒಂದು ಸ್ಪಷ್ಟ ಚಿತ್ರಣ ಸಿಗುತ್ತದೆ.
ಸದ್ಯಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ, ಕನ್ನಡ ಚಿತ್ರರಂಗ ಮತ್ತು ಕಿರುತೆರೆಯ ಒಂದಿಷ್ಟು ಮಂದಿ ಈ ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಿದ್ದಾರಂತೆ. ಈ ಹಿಂದೆ, ‘ಅನುಬಂಧ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘ಬಿಗ್ ಬಾಸ್’ ಕಾರ್ಯಕ್ರಮದಲ್ಲಿ ‘777 ಚಾರ್ಲಿ’ ಚಿತ್ರದಲ್ಲಿ ನಟಿಸಿರುವ ಶ್ವಾನ ಸಹ ಸ್ಪರ್ಧಿಯಾಗಿ ಭಾಗವಹಿಸಲಿದೆ ಎಂದು ಅಧಿಕೃತ ಘೋಷಣೆಯಾಗಿತ್ತು. ಈಗ ಇನ್ನೊಂದಿಷ್ಟು ಹೆಸರುಗಳು ಅನಧಿಕೃತವಾಗಿ ಕೇಳಿಬಂದಿವೆ.
ಈಗ ಸಕ್ಕಿರುವ ಹೆಸರುಗಳ ಪೈಕಿ ‘Excuse Me’ ಖ್ಯಾತಿಯ ನಟ ಸುನೀಲ್ ರಾವ್, ‘ಬಾಲಾಜಿ ಫೋಟೋ ಸ್ಟುಡಿಯೋ’ ಖ್ಯಾತಿಯ ರಾಜೇಶ್ ಧ್ರುವ, ‘ಕೆಜಿಎಫ್’ನಲ್ಲಿ ಅಭಿನಯಿಸಿದ್ದ ರೂಪಾ ರಾಯಪ್ಪ, ಮಿಮಿಕ್ರಿ ಗೋಪಿ, ಕ್ರಿಕೆಟರ್ ವಿನಯ್ ಕುಮಾರ್, ಪೋಷಕ ನಟಿ ಸ್ವಾತಿ, ಬುಲೆಟ್ ಪ್ರಕಾಶ್ ಮಗ ರಕ್ಷಕ್, Rapper ಇಶಾನಿ ಮುಂತಾದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರಂತೆ. ಇವರ ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯವಾಗಿರುವ ಒಂದಿಷ್ಟು ಮಂದಿ ಸಹ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.
‘ಬಿಗ್ ಬಾಸ್’ ಕಾರ್ಯಕ್ರಮವು ವಿಶೇಷ ಸೆಟ್‍ನಲ್ಲಿ ನಡೆಯಲಿದೆ. ಇಂದು ಕಾರ್ಯಕ್ರಮದ ಮೊದಲ ಪತ್ರಿಕಾಗೋಷ್ಠಿ ನಡೆಯಲಿದ್ದು, ಇದರಲ್ಲಿ ಕಾರ್ಯಕ್ರಮವನ್ನು ನಡೆಸಿಕೊಡುವ ಸುದೀಪ್ ಮತ್ತು ಕಲರ್ಸ್ ಕನ್ನಡದ ಬ್ಯುಸಿನೆಸ್ ಹೆಡ್ ಪ್ರಶಾಂತ್ ನಾಯಕ್ ಭಾಗವಹಿಸಲಿದ್ದಾರೆ.
ದೊಡ್ಮನೆ ಆಟ ನೋಡಲು 6 ದಿನಗಳು ಬಾಕಿ!
ಬಿಗ್ ಬಾಸ್ | GRAND PREMIERE ಅಕ್ಟೋಬರ್ 8 ಸಂಜೆ 6 | ಪ್ರತಿ ರಾತ್ರಿ 9:30#BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ @KicchaSudeep pic.twitter.com/6zHIqVaX17
— Colors Kannada (@ColorsKannada) October 2, 2023
https://indiascreens.in/dhruva-sarja-talks-about-his-bonding-with-his-brother-chiranjeevi-sarja/


