ಜನ ಯಾವುದಕ್ಕೆ ನಗ್ತಾರೆ, ಯಾವುದಕ್ಕೆ ನಗಲ್ಲ ಎಂದು ಗೊತ್ತಿದೆ: ಚಿಕ್ಕಣ್ಣ

ಚಂದನವನ, ಸಂದರ್ಶನ, ಸಿನಿ ಸುದ್ದಿ

ಚಿಕ್ಕಣ್ಣ ಅಭಿನಯದ ‘ಉಪಾಧ್ಯಕ್ಷ’ ಬಿಡುಗಡೆಯಾಗಿ ಎರಡೂವರೆ ವರ್ಷಗಳಾಗಿವೆ. ಈ ಎರಡೂವರೆಗ ವರ್ಷಗಳಲ್ಲಿ ಅವರು ಎರಡು ಚಿತ್ರಗಳನ್ನು ಒಪ್ಪಿ, ಚಿತ್ರೀಕರಣಕ್ಕೆ ಹೋಗಿದ್ದು ಬಿಟ್ಟರೆ, ಮಿಕ್ಕಂತೆ ಯಾವುದೇ ಚಿತ್ರ ಬಿಡುಗಡೆಯಾಗಿಲ್ಲ. ಈಗ ಕೊನೆಗೆ ಅವೆರಡರ ಪೈಕಿ ಮೊದಲು ‘ಲಕ್ಷ್ಮೀಪುತ್ರ’ ಬಿಡುಗಡೆಯಾಗುತ್ತಿದೆ. ವರಮಹಾಲಕ್ಷ್ಮೀ ಹಬ್ಬಕ್ಕೆ ಚಿತ್ರ ಬಿಡುಗಡೆಯಾಗಲಿದ್ದು, ಅದಕ್ಕೂ ಮೊದಲು ಚಿತ್ರದ ಮೊದಲ ಹಾಡು ಬಿಡುಗಡೆ ಆಗಿದೆ.

ಇಷ್ಟಕ್ಕೂ ಚಿಕ್ಕಣ್ಣ ಚಿತ್ರಗಳು ಬಿಡುಗಡೆ ಆಗುವುದು ಯಾಕೆ ತಡವಾಗುತ್ತಿವೆ? ಈ ಕುರಿತು ಮಾತನಾಡುವ ಅವರು, ‘ಮೊದಲ ಚಿತ್ರ ಗೆಲ್ಲುತ್ತದಾ ಎಂದು ಹೇಳುವುದು ಕಷ್ಟ. ಗೆದ್ದ ಮೇಲೆ ಕಥೆ ಮಾಡಿಕೊಂಡು ಬರುತ್ತಾರೆ. ‘ಉಪಾಧ್ಯಕ್ಷ’ ಗೆದ್ದ ನಂತರ, ಇವನಿಗೆ ಎರಡನೇ ಸಿನಿಮಾ ಮಾಡಬಹುದು ಅಂತನಿಸಿ, ಕಥೆ ಹುಡುಕಿ ಸಿನಿಮಾ ಮಾಡೋದಕ್ಕೆ ನಿಧಾನವಾಯಿತು. ಇನ್ನು ಮುಂದೆ ನಿಧಾನವಾಗುವುದಿಲ್ಲ. ಒಂದರಹಿಂದೊಂದು ಚಿತ್ರಗಳು ಬರುತ್ತವೆ’ ಎಂದರು.

ಈ ಎರಡು ವರ್ಷಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಹಲವು ನಗೆನಟರು ಬಂದಿದ್ದಾರೆ. ಅವರ ಮಧ್ಯೆ, ಹೇಗೆ ನಿಂತು ಗೆಲ್ಲುತ್ತೀರಿ ಎಂಬ ಪ್ರಶ್ನೆಗೆ, ‘ನಾವು ಸೋಷಿಯಲ್‍ ಮಿಡಿಯಾ ನೋಡ್ತೀನಿ. ಇದನ್ನು ಮೀರಿ ಏನು ಮಾಡಬಹುದು ಎಂದು ಮೂರ್ನಾಲ್ಕು ತಿಂಗಳು ಕೂತು ಸ್ಕ್ರಿಪ್ಟ್ ಮಾಡಿದ್ದೇವೆ. ಇದಕ್ಕೆ ನಾವು ನಾಲ್ಕೈದು ಜನ ಕೂತು ಚಿತ್ರಕಥೆ ಬರೆದಿದ್ದೇವೆ. ಕಾಮಿಡಿಗೆಂದೇ ಮೂವರು ಬರಹಗಾರರನ್ನು ಕೂರಿಸಿಕೊಂಡಿದ್ದೇವೆ. ಬೇರೆಯವರು ಮೆಚ್ಚುವುದಕ್ಕಿಂತ ಮೊದಲು ನಾವು ಮೆಚ್ಚಿಕೊಳ್ಳಬೇಕು. ನಮಗೆ ಇಷ್ಟ ಆಗಲಿಲ್ಲವೆಂದರೆ, ಜನರಿಗೆ ಇಷ್ಟವಾಗುತ್ತದೆ ಎಂದು ಹೇಳುವುದು ಕಷ್ಟ. ನಮಗೆ ಇಷ್ಟವಾಗುವಂತದ್ದು ಮಾಡಿಟ್ಟುಕೊಂಡಿದ್ದೇವೆ ಮತ್ತು ಜನ ಸಹ ಇಷ್ಟಪಡುತ್ತಾರೆ ಎಂಬ ನಂಬಿಕೆ ನನಗಿದೆ. ಸುಮಾರು 10 ವರ್ಷ ಸ್ಟೇಜ್‍ ಶೋ ಮಾಡಿದ್ದೇನೆ. ಕಾಮಿಡಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದೇನೆ. 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಮಿಡಿ ನಟನಾಗಿ ನಟಿಸಿದ್ದೇನೆ. ಹಾಗಾಗಿ, ಜನ ಯಾವುದಕ್ಕೆ ನಗ್ತಾರೆ, ಯಾವುದಕ್ಕೆ ನಗಲ್ಲ ಎಂದು ಗೊತ್ತಿದೆ. ಇಲ್ಲಿ upgrade ಆಗುತ್ತಲೇ ಇರಬೇಕು, ಆಗುತ್ತಲೇ ಇರುತ್ತೇನೆ’ ಎಂದರು.

ಇನ್ನು, ಈ ಚಿತ್ರ ಹಾಡಿನ ಕುರಿತು ಮಾತನಾಡುವ ಚಿಕ್ಕಣ್ಣ, ‘ಈ ಹಾಡಿನ ಕುರಿತು ಮಾತನಾಡುವ ಚಿಕ್ಕಣ್ಣ, ‘ಕನ್ನಡದ ಜನ ನನ್ನ ಮೊದಲ ಚಿತ್ರಕ್ಕೆ ದೊಡ್ಡ ರೀತಿಯಲ್ಲಿ ಆಶೀರ್ವಾದ ಮಾಡಿದರು. ಆ ಚಿತ್ರದ ‘ನನಗೆ ನೀನು …’ ಹಾಡಿಗೆ ಎ.ಪಿ. ಅರ್ಜುನ್‍ ಸಾಹಿತ್ಯ ಬರೆದರೆ, ಅರ್ಜುನ್‍ ಜನ್ಯ ಸಂಗೀತ ಸಂಯೋಜಿಸಿದ್ದರು. ಈಗ ಅದೇ ಜೋಡಿ ಇಲ್ಲೂ ಕೆಲಸ ಮಾಡಿದೆ. ಜನರ ನಿರೀಕ್ಷೆಗೆ ನಿಲುಕುತ್ತೇವಾ? ಎಂಬ ಭಯವಿತ್ತು. ನಿರೀಕ್ಷೆಗೆ ತಕ್ಕಂತೆ ಹಾಡು ಮೂಡಿ ಬಂದಿದೆ’ ಎಂದರು.

‘ಲಕ್ಷ್ಮೀಪುತ್ರ’ ಚಿತ್ರವನ್ನು ಎ.ಪಿ.ಅರ್ಜುನ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ದೇಶಕ ಎ.ಪಿ.ಅರ್ಜುನ್ ಪತ್ನಿ ಅನ್ನಪೂರ್ಣ ಅರ್ಜುನ್ ನಿರ್ಮಿಸಿದ್ದಾರೆ. ವಿಜಯ್ ಸ್ವಾಮಿ ನಿರ್ದೇಶಿಸಿರುವ ಈ ಚಿತ್ರದಲ್ಲಿ ಚಿಕ್ಕಣ್ಣ ಮತ್ತು ವಂದಿತಾ ಜೊತೆಗೆ ತಾರಾ, ಕುರಿ ಪ್ರತಾಪ್, ಧರ್ಮಣ್ಣ ಮುಂತಾದವರು ನಟಿಸಿದ್ದಾರೆ. ವರಮಹಾಲಕ್ಷ್ಮೀ ಹಬ್ಬದ ಸಂದರ್ಭದಲ್ಲಿ ಚಿತ್ರ ಬಿಡುಗಡೆ ಆಗಲಿದೆ.

ನಾಯಕನಾದ ಮೊದಲ ಚಿತ್ರಕ್ಕೆ ಒಂದು ಕೋಟಿ ಪಡೆದ್ರಾ ಗಿಲ್ಲಿ ನಟ?

Discover more from KannadaScreens

Subscribe now to keep reading and get access to the full archive.

Continue reading