ಬೆಳಿಗ್ಗೆಯಿಂದ ಮುಖ ತೊಳೆಯೋಕೂ ಬಿಡುತ್ತಿಲ್ಲ: ದೊಡ್ಡಣ್ಣ ಬೇಸರ

ಚಂದನವನ, ಸಿನಿ ಸುದ್ದಿ

ಕಲಾವಿದರು ನಿಧನರಾಗಿದ್ದಾರೆ ಎಂದು ಸುದ್ದಿ ಹಬ್ಬಿಸುವುದು, ಎಲ್ಲರೂ ಗಾಬರಿ ಬಿದ್ದು ಕಲಾವಿದರಿಗೆ ಫೋನ್‍ ಮಾಡುವುದು, ಆ ನಂತರ ಅವರು ವೀಡಿಯೋ ಮಾಡಿ ತಾವು ಬದುಕಿರುವುದಾಗಿ ಹೇಳುವುದು, ಯಾರೂ ಸುಳ್ಳು ಸುದ್ದಿಗಳಿಗೆ ಗಮನ ಕೊಡಬಾರದು ಎಂದು ಹೇಳುವುದು … ಇವೆಲ್ಲಾ ಹಲವು ವರ್ಷಗಳಿಂದ ನಡೆದು ಬಂದಿದೆ.

ಈಗ್ಯಾಕೆ ಈ ವಿಷಯ ಎಂದರೆ, ಶುಕ್ರವಾರ ಬೆಳ್ಳಂಬೆಳಿಗ್ಗೆ, ಹಿರಿಯ ನಟ ದೊಡ್ಡಣ್ಣ ಇನ್ನಿಲ್ಲ ಎಂಬ ಸುದ್ದಿ ಸೋಷಿಯಲ್‍ ಮೀಡಿಯಾದಲ್ಲಿ ಕಾಣಿಸಿಕೊಂಡವು. ಅವರ ಫೋಟೋ ಹಾಕಿ ಕೆಲವರು ಶ್ರದ್ಧಾಂಜಲಿಯನ್ನೂ ಸಲ್ಲಿಸಿದ್ದಾಗಿತ್ತು. ಹಾಗಿರುವಾಗಲೇ, ದೊಡ್ಡಣ್ಣ ವೀಡಿಯೋ ಮಾಡಿ, ತಮಗೇನೂ ಆಗಿಲ್ಲ ಮತ್ತು ತಾವು ಆರೋಗ್ಯವಾಗಿರುವುದಾಗಿ ಹೇಳಿಕೊಂಡಿದ್ದಾರೆ.

ಈ ಕುರಿತು ವೀಡಿಯೋ ಮಾಡಿರುವ ಅವರು, ‘ನಾನು ಬೆಳಿಗ್ಗೆ ಏಳುವುದಕ್ಕೆ ಮೊದಲೇ ಯಾರೋ ಅವಿವೇಕಿಗಳು ನಾನು ನಿಧನನಾಗಿದ್ದೀನಿ ಎಂದು ಸುಳ್ಳುಸುದ್ದಿ ಹಬ್ಬಿಸಿದ್ದಾರೆ. ಅದು ಶುದ್ಧ ಸುಳ್ಳು. ನಾನು ಆರೋಗ್ಯವಾಗಿದ್ದೇನೆ. ನೆಮ್ಮದಿಯಾಗಿದ್ದೇನೆ. ಈ ವಿಷಯವನ್ನು ಹೇಳುವುದಕ್ಕೆಂದೇ ಈ ವೀಡಿಯೋ ಮಾಡುತ್ತಿದ್ದೇನೆ. ಬೆಳಿಗ್ಗೆಯಿಂದ ಮುಖ ತೊಳೆಯುವುದಕ್ಕೂ ಬಿಡುತ್ತಿಲ್ಲ. ಎಲ್ಲಾ ನನ್ನ ಪ್ರೀತಿಪಾತ್ರರು, ಬಂಧು-ಬಳಗದವರು ಫೋನ್‍ ಮಾಡಿ ಆರೋಗ್ಯ ವಿಚಾರಿಸುತ್ತಿದ್ದಾರೆ. ನಾನು ಆರೋಗ್ಯವಾಗಿದ್ದೇನೆ. ಆ ಕಿಡಿಗೇಡಿಗಳನ್ನು ಬಿಡುವುದಿಲ್ಲ. ಬೆನ್ನತ್ತಿ ಶಿಕ್ಷೆ ಕೊಡಿಸುತ್ತೇನೆ’ ಎಂದರು.

ದೊಡ್ಡಣ್ಣ ಅವರ ವಿಷಯದಲ್ಲಿ ಹೀಗಾಗುತ್ತಿರುವುದು ಮೊದಲೇನಲ್ಲ. 2021ರಲ್ಲೂ ಒಮ್ಮೆ ದೊಡ್ಡಣ್ಣ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗಿತ್ತು. ಈಗ ಅದು ಪುನರಾವರ್ತನೆಯಾಗಿದೆ.

ಅದೇ ಚರ್ಚೆ, ಅದೇ ಉತ್ತರ; ಕೊನೆಗೂ ಗೆಲ್ಲುವುದು ಪ್ರತಿಭೆ ಮಾತ್ರ …

Discover more from KannadaScreens

Subscribe now to keep reading and get access to the full archive.

Continue reading