ಅಳಿಯ ಆಯ್ತು, ಈಗ ಮಾವನಿಗೆ ನಾಯಕಿಯಾದ ರಚಿತಾ ರಾಮ್‍

ಚಂದನವನ, ಪ್ಯಾನ್ ಇಂಡಿಯಾ, ಸಿನಿ ಸುದ್ದಿ

ಕೆಲವು ವರ್ಷಗಳ ಹಿಂದೆ ಚಿರಂಜೀವಿ ಅಳಿಯ ಕಲ್ಯಾಣ್‍ ದೇವ್‍ ಅಭಿನಯದ ‘ಸೂಪರ್‍ ಮಚ್ಚಿ’ ಎಂಬ ಚಿತ್ರಕ್ಕೆ ರಚಿತಾ ರಾಮ್ ನಾಯಕಿಯಾಗಿದ್ದು ನೆನಪಿರಬಹುದು. ಇದು ರಚಿತಾ ಅಭಿನಯದ ಮೊದಲ ತೆಲುಗು ಚಿತ್ರವಾಗಿತ್ತು. ಆದರೆ, ಬಾಕ್ಸ್ ಆಫೀಸ್‍ನಲ್ಲಿ ದೊಡ್ಡ ಸೋಲು ಕಂಡಿತು. ಇದರ ನಂತರ ರಚಿತಾ ಯಾವುದೇ ತೆಲುಗು ಚಿತ್ರದಲ್ಲಿ ನಟಿಸಿರಲಿಲ್ಲ.

ಇದೀಗ ರಚಿತಾ ರಾಮ್ ಅವರು ತಮ್ಮ ಮುಂದಿನ ತೆಲುಗು ಚಿತ್ರ ಒಪ್ಪಿಕೊಂಡಿರುವ ಸುದ್ದಿಯೊಂದು ಬಂದಿದೆ. ಚಿರಂಜೀವಿ ಅವರ ಮುಂಬರುವ ಚಿತ್ರ ‘ಮೆಗಾ 158’ನಲ್ಲಿ ನಟಿಸಲಿದ್ದಾರೆ. ಬಾಬಿ ಕೊಲ್ಲಿ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಪೊಲ್ಲಾಚಿಯಲ್ಲಿ ನಡೆಯುತ್ತಿದ್ದು, ರಚಿತಾ ಈಗಾಗಲೇ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಚಿರಂಜೀವಿ, ಪ್ರಿಯಾಮಣಿ ಮತ್ತು ಅನಸ್ವರ ರಾಜನ್ ಈ ಭಾಗದ ಚಿತ್ರೀಕರಣ ಭಾಗಿಯಾಗಿದ್ದು, ರಚಿತಾ ಸಹ ಜೊತೆಯಾಗಿದ್ದಾರೆ. ಈ ಮೂಲಕ ಅಳಿಯನ ಜೊತೆಗೆ ನಟಿಸಿದ್ದ ರಚಿತಾ, ಇದೀಗ ಮಾವನ ಜೊತೆಗೂ ನಟಿಸುತ್ತಿದ್ದಾರೆ.

ಇದಕ್ಕೂ ಮೊದಲು ಈ ಪಾತ್ರವನ್ನು ಹನಿ ರೋಸ್ ಮಾಡಬೇಕಿತ್ತಂತೆ. ಆದರೆ, ಅವರು ಹಿಂದೆ ಸರಿದಿದ್ದರಿಂದ, ಅವರ ಬದಲಿಯಾಗಿ ರಚಿತಾ ಅವರನ್ನು ಚಿತ್ರತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.

‘ಮೆಗಾ 158’ ಚಿತ್ರವು ಕೆ.ವಿ.ಎನ್ ಪ್ರೊಡಕ್ಷನ್ಸ್ನ ಮೊದಲ ಸ್ವತಂತ್ರ ತೆಲುಗು ಚಿತ್ರವಾಗಿದ್ದು, ಇದೇ ಮೊದಲ ಬಬಾರಿಗೆ ವೆಂಕಟ್ ಕೆ. ನಾರಾಯಣ ನಿರ್ಮಾಣದ ಚಿತ್ರದಲ್ಲಿ ರಚಿತಾ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಬಾಬಿ ಕೊಲ್ಲಿ ನಿರ್ದೇಶನ ಮಾಡುತ್ತಿದ್ದು, ಇದಕ್ಕೂ ಮೊದಲು ಅವರು ಚಿರಂಜೀವಿ ಅಭಿನಯದಲ್ಲಿ ‘ವಾಲ್ಟೇರ್ ವೀರಯ್ಯ’ ಚಿತ್ರವನ್ನು ನಿರ್ದೇಶಿಸಿದ್ದರು. ಚಿತ್ರಕ್ಕೆ ಎಸ್. ತಮನ್ ಸಂಗೀತ ಮತ್ತು ವಿಜಯ್‍ ಕಾರ್ತಿಕ್‍ ಕಣ್ಣನ್‍ ಅವರ ಛಾಯಾಗ್ರಹಣವಿದೆ.

ಅದೇ ಚರ್ಚೆ, ಅದೇ ಉತ್ತರ; ಕೊನೆಗೂ ಗೆಲ್ಲುವುದು ಪ್ರತಿಭೆ ಮಾತ್ರ …

Discover more from KannadaScreens

Subscribe now to keep reading and get access to the full archive.

Continue reading