ರಜನಿಕಾಂತ್‍ ಬಯೋಪಿಕ್‍ ಹಕ್ಕು ಪಡೆದ ಸಾಜಿದ್‍

by | May 3, 2024 | ಚಂದನವನ, ಪ್ಯಾನ್ ಇಂಡಿಯಾ, ಸಿನಿ ಸುದ್ದಿ | 0 comments

ದಕ್ಷಿಣದ ಸೂಪರ್‍ ಸ್ಟಾರ್‍ ರಜನಿಕಾಂತ್‍ ಅಭಿನಯದಲ್ಲಿ ಹಿಂದಿಯ ಖ್ಯಾತ ನಿರ್ಮಾಪಕ ಸಾಜಿದ್‍ ನಾಡಿಯಾಡ್ವಾಲಾ ಒಂದು ಚಿತ್ರವನ್ನು ನಿರ್ಮಿಸುತ್ತಾರೆ ಎಂಬ ಮಾತು ಬಹಳ ದಿನಗಳಿಂದ ಕೇಳಿ ಬಂದಿತ್ತು. ಈಗ ಅದಕ್ಕೊಂದು ಸ್ಪಷ್ಟತೆ ಸಿಕ್ಕಿದೆ. ಸಾಜಿದ್‍ ನಾಡಿಯಾಡ್ವಾಲಾ ನಿರ್ಮಿಸುತ್ತಿರುವುದು ರಜನಿಕಾಂತ್‍ ಅಭಿನಯದ ಚಿತ್ರವಲ್ಲ, ಬದಲಿಗೆ ಅವರ ಬಯೋಪಿಕ್‍ ಎಂಬ ಮಾತೊಂದು ಕೇಳಿ ಬರುತ್ತಿದೆ.

ಹೌದು, ರಜನಿಕಾಂತ್‍ ಅವರ ಬಯೋಪಿಕ್‍ ನಿರ್ಮಿಸುತ್ತಿದ್ದಾರಂತೆ ಸಾಜಿದ್‍. ಕಳೆದ ಕೆಲವು ತಿಂಗಳುಗಳಿಂದ ರಜನಿಕಾಂತ್‍ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಸಾಜಿದ್, ಅಂತಿಮವಾಗಿ ಇತ್ತೀಚೆಗೆ ಅವರನ್ನು ಭೇಟಿ ಮಾಡಿ, ಬಯೋಪಿಕ್‍ ಹಕ್ಕುಗಳನ್ನು ದೊಡ್ಡ ಮೊತ್ತದಲ್ಲಿ ತಮ್ಮದಾಗಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇತ್ತೀಚೆಗೆ ರಜನಿಕಾಂತ್‍ ಅವರ ಜೊತೆಗಿರುವ ಒಂದು ಫೋಟೋ ಹಂಚಿಕೊಂಡಿರುವ ಸಾಜಿದ್‍, ‘ಭಾರತೀಯ ಚಿತ್ರರಂಗದ ಲೆಜೆಂಡರಿ ನಟ ರಜನಿಕಾಂತ್‍ ಅವರ ಜೊತೆಗೆ ಕೈಜೋಡಿಸಿರುವ ವಿಷಯ ನಮಗೆ ದೊಡ್ಡ ಗೌರವ. ಈ ಪ್ರಯಾಣ ಅವಿಸ್ಮರಣೀಯವಾಗಿರಲಿದೆ ಎಂದು ನಂಬಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.

ಅಂದಹಾಗೆ, ರಜನಿಕಾಂತ್‍ ಅವರ ಬಯೋಪಿಕ್‍ನಲ್ಲಿ ಯಾರು ನಟಿಸುತ್ತಾರೆ ಎಂಬ ಮಾಹಿತಿ ಇನ್ನೂ ಹೊರಬಿದ್ದಿಲ್ಲ. ಈ ಹಿಂದೆ, ನಟ ಮತ್ತು ರಜನಿಕಾಂತ್‍ ಅಳಿಯ ಧನುಶ್‍, ತಮ್ಮ ಮಾವನ ಬಯೋಪಿಕ್‍ನಲ್ಲಿಲ ನಟಿಸುವ ಆಸೆಯನ್ನು ವ್ಯಕ್ತಪಡಿಸಿದ್ದರು. ಅದರಂತೆ ಅವರೇ ನಟಿಸುತ್ತಾರಾ ಅಥವಾ ಬೇರೊಬ್ಬ ನಟ ರಜನಿಕಾಂತ್‍ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರಾ ಎಂಬ ವಿಷಯ ಇನ್ನಷ್ಟೇ ಹೊರಬೀಳಬೇಕಿದೆ.

ಒಬ್ಬ ಸಾಮಾನ್ಯ ಬಸ್‍ ಕಂಡಕ್ಟರ್‍ ಆಗಿದ್ದ ರಜನಿಕಾಂತ್‍, ಈ ದೇಶದ ಬೇಡಿಕೆಯ ನಟರಷ್ಟೇ ಅಲ್ಲ, ಅತ್ಯಂತ ದುಬಾರಿ ನಟರಾಗಿ ಬೆಳೆದಿದ್ದು ಒಂದು ಸ್ಫೂರ್ತಿದಾಯಕ ಕಥೆ. ಈ ಕಥೆಯನ್ನಿಟ್ಟುಕೊಂಡು ಸಾಜಿದ್‍ ಸಿನಿಮಾ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಅಂದಹಾಗೆ, ರಜನಿಕಾಂತ್‍ ಅವರು ಸದ್ಯ ‘ವೆಟ್ಟಾಯನ್‍’ ಚಿತ್ರದಲ್ಲಿ ನಟಿಸುತ್ತಿದ್ದು, ಆ ನಂತರ ಲೋಕೇಶ್‍ ಕನಕರಾಜ್ ನಿರ್ದೇಶನನದ ‘ಕೂಲಿ’ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಕೆಲವು ಪದಗಳಿಗೆ ಅರ್ಥವೇ ಇಲ್ಲ …

Latest Posts

Discover more from KannadaScreens

Subscribe now to keep reading and get access to the full archive.

Continue reading