ಉದಯ ಟಿವಿಯಲ್ಲಿ ರಾಮಾಯಣ ನೋಡಿ, ಬಹುಮಾನ ಗೆಲ್ಲಿ

ಕಿರುತೆರೆ, ಚಂದನವನ, ಸಿನಿ ಸುದ್ದಿ

ಕನ್ನಡ ಕಿರುತೆರೆಯಲ್ಲಿ ಸಾಮಾಜಿಕ ಧಾರಾವಾಹಿಗಳೇ ಹೆಚ್ಚಿರುವ ಸಮಯದಲ್ಲಿ ಪೌರಾಣಿಕ ಧಾರಾವಾಹಿಯನ್ನು ಪ್ರೇಕ್ಷಕರನ್ನು ರಂಜಿಸುವುದಕ್ಕೆ ಸಜ್ಜಾಗಿದೆ. ಅದೇ ‘ಶ್ರೀಮದ್‍ ರಾಮಾಯಣ’. ಸೋನಿ ಟಿವಿಯಲ್ಲಿ ಈ ವರ್ಷದ ಆರಂಭದಲ್ಲಿ ಶುರುವಾದ ಈ ಧಾರಾವಾಹಿಯು ಕ್ರಮೇಣ ಬೇರೆ ಭಾಷೆಗಳಲ್ಲೂ ಪ್ರಸಾರ ಕಾಣುತ್ತಿದೆ. ಅದೇ ರೀತಿ ಕನ್ನಡದಲ್ಲೂ ‘ಶ್ರೀಮದ್‍ ರಾಮಾಯಣ’ ಇದೇ ಮೇ 20ರಿಂದ ಉದಯ ಟಿವಿಯಲ್ಲಿ ಸೋಮವಾರದಿಂದ ಶನಿವಾರದವರೆಗೆ ಸಂಜೆ ಆರಕ್ಕೆ ಪ್ರಸಾರವಾಗಲಿದೆ.

’ಶ್ರೀಮದ್ ರಾಮಾಯಣ’ ಧಾರವಾಹಿಯನ್ನು ಹೊಸ ತಲೆಮಾರಿಗೆ ತಲುಪಿಸುವ ನಿಟ್ಟಿನಲ್ಲಿ ಈ ಧಾರಾವಾಹಿಯನ್ನು ರೂಪಿಸಲಾಗಿದ್ದು, ಈ ಧಾರಾವಾಹಿಯ ಮೂಲಕ ಭಾರತೀಯ ಸಂಸ್ಕ್ರತಿ ಮತ್ತು ಪರಂಪರೆಯನ್ನು ಪ್ರತಿಬಿಂಬಿಸಲಾಗುತ್ತಿದೆ.

ರಾಮನ ಜೀವನ ಬಹುತೇಕ ಭಾರತೀಯರಿಗೆ ಮಾದರಿಯಾಗಿದೆ. ಆತನ ರಾಜ್ಯ ಪರಿಪಾಲನೆಯು ಇಂದಿಗೂ ರಾಮರಾಜ್ಯ ಅನ್ನುವ ಪದ ಈಗಲೂ ಬಳಸಲಾಗುತ್ತಿದೆ. ರಾಮ ಮತ್ತು ಸೀತೆಯ ಪವಿತ್ರ ಪ್ರೇಮ, ಕಥೆಯಲ್ಲಿ ಧರ್ಮದ ಪಾಲನೆಯ ಮಾರ್ಗದಲ್ಲಿ ಎದುರಿಸಿದ ಅನೇಕ ಸವಾಲುಗಳು ಈ ಧಾರಾವಾಹಿಯ ಜೀವಾಳ.

ಬರೀ ಧಾರಾವಾಹಿ ನೋಡುವುದಷ್ಟೇ ಅಲ್ಲ. ಧಾರಾವಾಹಿ ನೋಡಿ, ಕೊನೆಯಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ಉತ್ತರಿಸುವ ವೀಕ್ಷಕರಿಗೆ ವಿಶೇಷ ಬಹುಮಾನವನ್ನು ಸಹ ನೀಡಲಾಗುತ್ತದೆ. ಸರಿ ಉತ್ತರ ನೀಡಿದವರಿಗೆ ತಲಾ ಒಂದು ಸಾವಿರ ಬಹುಮಾನವನ್ನು ಅಂದೇ ಸಂದಾಯವಾಗುವಂತೆ ಯೋಜನೆ ರೂಪಿಸಲಾಗಿದೆ. ಪ್ರತಿ ಸಂಚಿಕೆಯಲ್ಲಿ 250 ವೀಕ್ಷಕರಿಗೆ ಒಟ್ಟು 2.5 ಲಕ್ಷ ರೂಪಾಯಿ ನಗದು ಬಹುಮಾನ ಗೆಲ್ಲುವ ಅವಕಾಶವನ್ನು ಕಲ್ಪಿಸಲಾಗಿದೆ.

ಕಮಲ್‍ ಮೋಂಗಾ, ಲೋಕನಾಥ್‍ ಪಾಂಡೆ, ಸುಮಿತ್ ಥಾಕೂರ್‍ ನಿರ್ದೇಶಿಸಿರುವ ಈ ಧಾರಾವಾಹಿಯಲ್ಲಿ ಸುಜಯ್‍ ರಾವ್‍, ಪ್ರಾಚಿ ಬನ್ಸಲ್‍, ಭಸಂತ್‍ ಭಟ್‍, ನಿರ್ಭಯ್‍ ವಾದ್ವಾ, ನಿಖ್ತಿನ್‍ ಧೀರ್‍ ಮುಂತಾದವರು ನಟಿಸಿದ್ದಾರೆ.

5 ಕೋಟಿಗೆ 4 ಕೋಟಿ ಬಡ್ಡಿ; ಇವ ನಗರದ ‘ಕಿರಾತಕ’

Discover more from KannadaScreens

Subscribe now to keep reading and get access to the full archive.

Continue reading