ಬೆಂಗಳೂರಿಗೆ ಬಂದಿದ್ದೇಕೆ ಜ್ಯೂನಿಯರ್ NTR?

ಚಂದನವನ, ಪ್ಯಾನ್ ಇಂಡಿಯಾ, ವೀಡಿಯೋ, ಸಿನಿ ಸುದ್ದಿ, ಸಿನಿ ಸ್ವಾರಸ್ಯ

ಜ್ಯೂನಿಯರ್‍ ಎನ್‍.ಟಿ. ಆರ್‍ ಅಭಿನಯದ ಚಿತ್ರವೊಂದನ್ನು ಹೊಂಬಾಳೆ ಫಿಲಂಸ್‍ನ ವಿಜಯ್‍ ಕಿರಗಂದೂರು ನಿರ್ದೇಶಿಸುತ್ತಿದ್ದಾರಾ? ಇಂಥದ್ದೊಂದು ಪ್ರಶ್ನೆ ಇದೀಗ ಎಲ್ಲೆಡೆ ಕೇಳಿ ಬರುತ್ತಿದೆ. ಅದಕ್ಕೆ ಕಾರಣ, ಇತ್ತೀಚೆಗೆ ತಾರಕ್‍ ತಮ್ಮ ಪತ್ನಿಯೊಂದಿಗೆ ಬೆಂಗಳೂರಿಗೆ ಬಂದಿದ್ದಾರೆ. ಇಲ್ಲಿ ವಿಜಯ್‍ ಕಿರಗಂದೂರು, ರಿಷಭ್‍ ಶೆಟ್ಟಿ ಮತ್ತು ಪ್ರಶಾಂತ್‍ ನೀಲ್‍ ಅವರನ್ನು ಭೇಟಿ ಮಾಡಿದ್ದಾರೆ.

ಪ್ರಶಾಂತ್‍ ನಿರ್ದೇಶನದಲ್ಲಿ ತಾರಕ್‍ ಅಭಿನಯಿಸುತ್ತಿರುವ ಸುದ್ದಿ ಗೊತ್ತೇ ಇದೆ. ಸದ್ಯ ‘ದೇವರ’ ಎಂಬ ಚಿತ್ರದಲ್ಲಿ ತಾರಕ್‍ ತೊಡಗಿಸಿಕೊಂಡಿದ್ದು, ಆ ಚಿತ್ರವು ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿವೆ. ಆ ಚಿತ್ರದ ಬಿಡುಗಡೆಯ ನಂತರ ಪ್ರಶಾಂತ್‍ ನೀಲ್‍ ಮತ್ತು ತಾರಕ್‍ ಅಭಿನಯದ ಚಿತ್ರ ಸೆಟ್ಟೇರಲಿದೆ. ಪ್ರಶಾಂತ್‍ ನೀಲ್‍ ಅವರನ್ನು ಭೇಟಿ ಮಾಡಿದ್ದೇನೋ ಓಕೆ. ಈ ಭೇಟಿಯಲ್ಲಿ ವಿಜಯ್‍ ಕಿರಗಂದೂರು ಮತ್ತು ರಿಷಭ್‍ ಶೆಟ್ಟಿ ಸಹ ಯಾಕಿದ್ದರು ಎಂಬುದು ಎಲ್ಲರ ತರ್ಕ.

ಬೆಂಗಳೂರಿಗೆ ಸುಮ್ಮನೆ ಬಿಡುವಿನಲ್ಲಿ ಬಂದು ಹೋದರಾ? ರಿಷಭ್‍ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ 2’ ಚಿತ್ರದಲ್ಲೇನಾದರೂ ತಾರಕ್‍ ಅಭಿನಯಿಸುತ್ತಾರಾ? ಅಥವಾ ಹೊಂಬಾಳೆ ಫಿಲಂಸ್‍ ನಿರ್ಮಿಸಲಿರುವ ಇನ್ಯಾವುದಾದರೂ ಹೊಸ ಚಿತ್ರದಲ್ಲಿ ಅವರು ಕಾಣಿಸಿಕೊಳ್ಳಬಹುದಾ? ಎಂಬ ಪ್ರಶ್ನೆಯಂತೂ ಎಲ್ಲರನ್ನೂ ಕಾಡುತ್ತಿದೆ. ಆದರೆ, ಈ ಪ್ರಶ್ನೆಗೆ ತಾರಕ್‍ ಆಗಲೀ, ರಿಷಭ್‍, ವಿಜಯ್‍ ಕಿರಗಂದೂರು ಆಗಲೀ ಉತ್ತರ ನೀಡುವುದಕ್ಕೆ ಹೋಗಿಲ್ಲ. ಎಲ್ಲರೂ ತಮ್ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.

ಆ ಕಡೆ ತಾರಕ್‍, ‘ದೇವರ’ ಚಿತ್ರದ ಕೆಲಸಗಳಲ್ಲಿ ತೊಡಗಿಸಿಕೊಂಡರೆ, ಈ ಕಡೆ ರಿಷಭ್‍ ಶೆಟ್ಟಿ, ‘ಕಾಂತಾರ 2’ ಚಿತ್ರದ ಸಿದ್ಧತೆಯಲ್ಲಿದ್ದಾರೆ. ಇನ್ನು, ವಿಜಯ್‍ ಕಿರಗಂದರೂ, ‘ಯುವ’ ಚಿತ್ರದ ಬಿಡುಗಡೆಯಲ್ಲಿ ಬ್ಯುಸಿಯಾಗಿದ್ದಾರೆ. ಹಾಗಿರುವಾಗ, ಎದ್ದಿರುವ ಹಲವು ಪ್ರಶ್ನೆಗಳಿಗೆ ಯಾರು ತಾನೇ ಉತ್ತರಿಸಬೇಕು ಹೇಳಿ?

ಮತ್ತೆ ಪತಿಯನ್ನು ಫಾಲೋ ಮಾಡಿದ ನಯನತಾರಾ

Discover more from KannadaScreens

Subscribe now to keep reading and get access to the full archive.

Continue reading