50 ಕೋಟಿ ಕ್ಲಬ್‍ಗೆ ‘ಪ್ರೇಮದ ಊರಲಿ’; 17ನೇ ದಿನ 8 ಕೋಟಿ ಗಳಿಕೆ

ಚಂದನವನ, ಸಿನಿ ಸುದ್ದಿ

ಮನೋಜ್‍ ಕುಮಾರ್‍ ನಿರ್ದೇಶನದ ‘ಪ್ರೇಮದ ಊರಲಿ’ ಚಿತ್ರವು ದಿನದಿಂದ ದಿನಕ್ಕೆ ಹೊಸಹೊಸ ದಾಖಲೆಗಳನ್ನು ಮಾಡುತ್ತಿದೆ. ಚಿತ್ರವು 17ನೇ ದಿನವಾದ ಭಾನುವಾರದಂದು ದಾಖಲೆಯ ಎಂಟು ಕೋಟಿ ರೂ.ಗಳನ್ನು ಗಳಿಸುವ ಮೂಲಕ 50 ಕೋಟಿ ಕ್ಲಬ್‍ ಸೇರಿದೆ.

ಸೆಪ್ಟೆಂಬರ್ 25 ರಂದು ರಾಜ್ಯಾದ್ಯಂತ ಬಿಡುಗಡೆಯಾದ ‘ಪ್ರೇಮದ ಊರಲಿ’ ಚಿತ್ರವು ಮೊದಲ ವಾರ ಬರೀ 5.32 ಗಳಿಕೆ ಮಾಡಿತ್ತು. ಇನ್ನು, ಎರಡನೇ ವಾರ 23.65 ಕೋಟಿ ರೂ. ಗಳಿಕೆ ಮಾಡುವ ಮೂಲಕ ಮೊದಲೆರಡು ವಾರಗಳಲ್ಲಿ 30 ಕೋಟಿ ರೂ. ಗಳಿಸಿತ್ತು.

ವಿಶೇಷವೆಂದರೆ, ಅಲ್ಲಿಂದ ಮೂರು ದಿನಗಳಲ್ಲಿ ಚಿತ್ರವು 20 ಕೋಟಿ ರೂ. ಸಂಗ್ರಹಿಸಿದೆ. ಶುಕ್ರವಾರ (5 ಕೋಟಿ ರೂ.), ಶನಿವಾರ (6.75 ಕೋಟಿ ರೂ.) ಹಾಗೂ ಭಾನುವಾರ (ಎಂಟು ಕೋಟಿ ರೂ.) ಗಳಿಕೆ ಮಾಡಿದೆ ಎಂದು ಬಾಕ್ಸ್ ಆಫೀಸ್‍ ಟ್ರಾಕರ್‍ ಸಕ್ನಿಲ್ಕ್ ಡಾಟ್‍ಕಾಮ್‍ ವರದಿ ಮಾಡಿದೆ. ವಿಶೇಷವೆಂದರೆ, ಚಿತ್ರ ಬಿಡುಗಡೆಯಾದ 17ನೇ ದಿನದಂದು ಅತೀ ಹೆಚ್ಚು (ಎಂಟು ಕೋಟಿ ರೂ.) ಗಳಿಕೆಯನ್ನು ‘ಪ್ರೇಮದ ಊರಲಿ’ ಮಾಡಿದೆ. ದಸರಾ ರಜೆಯಾದ್ದರಿಂದ, ಈ ವಾರ ಸಹ ಚಿತ್ರ ಭರ್ಜರಿ ಕಲೆಕ್ಷನ್‍ ಕಾಣುವ ನಿರೀಕ್ಷೆ ಇದೆ.

ಶ್ರೀರಾಮ್ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ನಾಯಕಿಯರಾಗಿ ತಪಸ್ವಿನಿ ಪೂಣಚ್ಚ ಹಾಗೂ ರಮಿಕಾ ಶಿವು ಕಾಣಿಸಿಕೊಂಡಿದ್ದಾರೆ. ರಂಗಾಯಣ ರಘು ಪ್ರಮುಖ ಪಾತ್ರದಲ್ಲಿದ್ದಾರೆ. ‘ಪ್ರೇಮದ ಊರಲಿ’ ಚಿತ್ರವು ಹೆಚ್ಚು ಅಬ್ಬರವಿಲ್ಲದೆ, ಪ್ರಚಾರವಿಲ್ಲದೆ ಬಿಡುಗಡೆ ಆಗಿತ್ತು. ಆದರೆ, ಚಿತ್ರ ನೋಡಿದವರು, ಬಾಯ್ಮಾತಿನ ಪ್ರಚಾರದಿಂದ ಈ ಚಿತ್ರವನ್ನು ಗೆಲ್ಲಿಸುತ್ತಿದ್ದಾರೆ

ವೆನಿಲ್ಲಾ ಎಂಟರ್ಟೇನ್ಮೆಂಟ್ಸ್ ಮತ್ತು ಜಾನಕಮ್ಮ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ‘ಪ್ರೇಮದ ಊರಲಿ’ ಚಿತ್ರ ನಿರ್ಮಾಣಗೊಂಡಿದ್ದು, ಸುನಾದ್ ಗೌತಮ್ ಸಂಗೀತ ಸಂಯೋಜಿಸಿದ್ದಾರೆ. ರಾಜ್‌ಕಾಂತ್ ಎಸ್.ಕೆ ಅವರ ಛಾಯಾಗ್ರಹಣ ಹಾಗೂ ಹರ್ಷಿತ್ ಪ್ರಭು ಅವರ ಸಂಕಲನ ಚಿತ್ರಕ್ಕಿದೆ.

‘ಜೈಲರ್ 2’ ಚಿತ್ರದ ಮೊದಲ ದಿನದ ಟಿಕೆಟ್‍ ಬೆಲೆ ಸಾವಿರ ರೂಪಾಯಿ!

Discover more from KannadaScreens

Subscribe now to keep reading and get access to the full archive.

Continue reading