ಪ್ರಚಾರ ಪ್ರಾರಂಭಿಸಿದ ‘ಎಕ್ಕ’; ಜುಲೈ 18ಕ್ಕೆ ಚಿತ್ರ ಬಿಡುಗಡೆ

ಚಂದನವನ, ಸಿನಿ ಸುದ್ದಿ

ಯುವ ರಾಜಕುಮಾರ್‍ ಅಭಿನಯದ ‘ಎಕ್ಕ’ ಚಿತ್ರವು ಇಷ್ಟರಲ್ಲಿ ಬಿಡುಗಡೆ ಆಗಿರಬೇಕಿತ್ತು. ಜೂನ್‍ 06ರಂದು ಚಿತ್ರ ಬಿಡುಗಡೆ ಆಗಲಿದೆ ಎಂದು ಚಿತ್ರತಂಡವೇ ಹೇಳಿಕೊಂಡಿತ್ತು. ಆದರೆ, ಅಂದುಕೊಂಡ ಸಮಯಕ್ಕೆ ಚಿತ್ರ ಮುಗಿಯದ ಕಾರಣ, ಚಿತ್ರದ ಬಿಡುಗಡೆಯನನ್ನು ಇದೀಗ ಜುಲೈ 18ಕ್ಕೆ ಮುಂದೂಡಲಾಗಿದೆ. ಅದಕ್ಕೂ ಮೊದಲು ಚಿತ್ರದ ಪ್ರಚಾರ ಇತ್ತೀಚೆಗೆ ಪ್ರಾರಂಭವಾಗಿದೆ.

ನಿರ್ದೇಶಕ ರೋಹಿತ್ ಪದಕಿ ಮಾತನಾಡಿ, ‘ಒಂದು ಸಿನಿಮಾ ಮಾಡಬೇಕಿದ್ದರೆ ಒಳ್ಳೆಯ ವೈಬ್‍ ಮುಖ್ಯ. ನಾವು ಬಿಟ್ಟಿರುವ ಪ್ರತಿ ಕಂಟೆಂಟ್ ಬಗ್ಗೆ ಜನ ಮೆಚ್ಚುಗೆ ವ್ಯಕ್ತಪಡಿಸುವುದರ ಜೊತೆಗೆ, ನಾವು ಸಹ ಅಷ್ಟೇ ಖುಷಿಯಿಂದ ಚಿತ್ರ ಮಾಡಿದ್ದೇವೆ. ಚಿತ್ರ ನೋಡುವಾಗ ಪ್ರೇಕ್ಷಕರಿಗೂ ಖುಷಿಯಾಗುತ್ತದೆ. ಈ ಪ್ರಯಾಣದಲ್ಲಿ ಸಾಕಷ್ಟು ಕಲಿತಿದ್ದೇನೆ’ ಎಂದರು.

ನಾಯಕ ಯುವ ಮಾತನಾಡಿ, ‘ಇತ್ತೀಚೆಗೆ ಬಿಡುಗಡೆಯಾದ ’ಬ್ಯಾಂಗಲ್ ಬಂಗಾರಿ’ ಹಾಡಿಗೆ ಎಲ್ಲಾ ವರ್ಗದ ಜನ ಇಷ್ಟಪಟ್ಟು ಡ್ಯಾನ್ಸ್ ಮಾಡಿರುವುದನ್ನು ನೋಡಲು ಖುಷಿಯಾಗುತ್ತದೆ. ಚಿತ್ರಮಂದಿರಗಳಲ್ಲಿ ಈ ಚಿತ್ರವನ್ನು ಎಲ್ಲರೂ ಎಂಜಾಯ್ ಮಾಡುತ್ತಾರೆ ಎಂಬ ನಂಬಿಕೆ ಇದೆ. ಈ ಚಿತ್ರದಲ್ಲಿ ನನ್ನನ್ನು ಹೊಸ ರೀತಿಯಲ್ಲಿ ನೋಡಬಹುದು. ಜುಲೈ 18ಕ್ಕೆ ಸಿನಿಮಾ ರಿಲೀಸ್ ಆಗಲಿದೆ. ನಿಮ್ಮ ಬೆಂಬಲ ಇರಲಿ’ ಎಂದು ಹೇಳಿದರು.

ನಿರ್ಮಾಪಕ ಕಾರ್ತಿಕ್ ಗೌಡ ಮಾತನಾಡಿ, ‘ಜೂನ್ 6ಕ್ಕೆ ಸಿನಿಮಾ ಬಿಡುಗಡೆ ಮಾಡಬೇಕೆಂದು ಪ್ರಯತ್ನಿಸಿದ್ದೆವು. ಆದರೆ, ಸಿನಿಮಾ ಕೆಲಸ ಬಾಕಿ ಇರುವುದರಿಂದ ಒಂದು ತಿಂಗಳು ಅಂದರೆ ಜುಲೈ 18ಕ್ಕೆ ಬಿಡುಗಡೆ ಮಾಡುತ್ತಿದ್ದೇವೆ. ಸಿನಿಮಾ ಚೆನ್ನಾಗಿದ್ದರೆ ಜನ ಚಿತ್ರಮಂದಿರಕ್ಕೆ ಬರುತ್ತಾರೆ. ಜುಲೈನಿಂದ ‘ಕೆಡಿ’, ‘ಡೆವಿಲ್’, ‘45’ ಮುಂತಾದ ದೊಡ್ಡ ಚಿತ್ರಗಳು ಬಿಡುಗಡೆ ಆಗಲಿವೆ’ ಎಂದರು.

‘ಎಕ್ಕ’ ಚಿತ್ರದಲ್ಲಿ ಯುವ ರಾಜಕುಮಾರ್ ಜೊತೆಗೆ ಸಂಪದ ಹುಲಿವಾನ, ಸಂಜನಾ ಆನಂದ್, ಶ್ರುತಿ, ಅತುಲ್ ಕುಲಕರ್ಣಿ, ಆದಿತ್ಯ, ಸಾಧು ಕೋಕಿಲ, ಪುನೀತ್ ರುದ್ರನಾಗ್, ಡಾ. ಸೂರಿ, ಹರಿಣಿ ಮುಂತಾದವರು ನಟಿಸಿದ್ದಾರೆ. ಚರಣ್‍ ರಾಜ್‍ ಸಂಗೀತ, ಸತ್ಯ ಹೆಗಡೆ ಛಾಯಾಗ್ರಹಣ ಈ ಚಿತ್ರಕ್ಕಿದೆ.

ಈ ಚಿತ್ರವನ್ನು ಪಿ.ಆರ್‌.ಕೆ ಪ್ರೊಡಕ್ಷನ್ಸ್, ಜಯಣ್ಣ ಫಿಲ್ಮ್ಸ್ ಹಾಗೂ ಕೆ.ಆರ್‌.ಜಿ ಸ್ಟುಡಿಯೋಸ್ ಸಂಸ್ಥೆಗಳು ಒಟ್ಟಾಗಿ ಚಿತ್ರ ನಿರ್ಮಾಣ ಮಾಡಲಾಗಿದೆ.

ಕಾನೂನು ಹೋರಾಟದಲ್ಲಿ ಗೆದ್ದು ಸೋತ ಕಮಲ್‍ ಹಾಸನ್‍

Discover more from KannadaScreens

Subscribe now to keep reading and get access to the full archive.

Continue reading