ತಮ್ಮ ದಾಖಲೆಯನ್ನು ತಾವೇ ಮುರಿಯುವುದಕ್ಕೆ ಹೊರಟಿದ್ದಾರೆ ರಜನಿ

ಪ್ಯಾನ್ ಇಂಡಿಯಾ, ಸಿನಿ ಸುದ್ದಿ

ರಜನಿಕಾಂತ್ ತಮ್ಮ 76ನೇ ವಯಸ್ಸಿನಲ್ಲೂ ಹೊಸ ದಾಖಲೆಯನ್ನು ಬರೆಯುವುದಕ್ಕೆ ಹೊರಟಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ‘ಜೈಲರ್‍ 2’ ಚಿತ್ರವು ಕೇವಲ ಮೂರು ದಿನಗಳಲ್ಲಿ 400 ಕೋಟಿ ರೂ. ಕ್ಲಬ್‍ ಸೇರಿದ್ದು, ಈ ಚಿತ್ರವು ರಜನಿಕಾಂತ್‍ ಅವರ ಹಳೆಯ ದಾಖಲೆಯನ್ನು ಮುರಿಯುವುದಕ್ಕೆ ಸಜ್ಜಾಗಿದೆ.

ನೆಲ್ಸನ್‍ ದಿಲೀಪ್‍ ಕುಮಾರ್‍ ನಿರ್ದೇಶದ ‘ಜೈಲರ್‍ 2’ ಚಿತ್ರವು ಬಿಡುಗಡೆಯಾದ ಕೇವಲ ಮೂರು ದಿನಗಳಲ್ಲಿ 325 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದು ಬರೀ ಭಾರತದ ಗ್ರಾಸ್‍ ಗಳಿಕೆ ಅಷ್ಟೇ. ವಿದೇಶದಲ್ಲಿ ಚಿತ್ರವು ಮೂರು ದಿನಗಳಲ್ಲಿ ಈಗಾಗಲೇ 100 ಕೋಟಿ ರೂ. ಗಳಿಕೆ ಮಾಡಿದೆ. ಅಲ್ಲಿಗೆ, ಸೋಮವಾರದ ಹೊತ್ತಿಗೆ ಚಿತ್ರವು ಜಗತ್ತಿನಾದ್ಯಂತ ಒಟ್ಟಶರೆ 500 ಕೋಟಿ ರೂಪಾಯಿಗಳ ಗಡಿಯನ್ನು ದಾಟುವತ್ತ ಮುನ್ನುಗ್ಗುತ್ತಿದೆ.

‘ಜೈಲರ್ 2’ ಚಿತ್ರವು ಗುರುವಾರ (ಅಕ್ಟೋಬರ್ 15) ಜಗತ್ತಿನಾದ್ಯಂತ ಬಿಡುಗಡೆ ಆಗಿತ್ತು. ಮೊದಲ ದಿನವೇ 130 ಕೋಟಿ ರೂಪಾಯಿ ಗಳಿಸಿತ್ತು. ಎರಡನೇ ದಿನದ ಗಳಿಕೆ 85 ಕೋಟಿ ರೂಪಾಯಿಗಳಾಗಿತ್ತು. ಮೂರನೇ ದಿನ 100 ಕೋಟಿಗೂ ಹೆಚ್ಚು ಗಳಿಕೆಯಾಗಿದ್ದು, ಇದರಿಂದ ಚಿತ್ರದ ಒಟ್ಟು ಗಳಿಕೆ 325 ಕೋಟಿ ರೂಪಾಯಿಗಳಿಗೆ ತಲುಪಲಿದೆ. ಇನ್ನು, ಭಾನುವಾರದ ಲೆಕ್ಕವನ್ನು ತೆಗೆದುಕೊಂಡರೆ, ಭಾರತವೊಂದರಲ್ಲೇ 400 ಕೋಟಿ ರೂ.ಗಳಿಗೂ ಅಧಿಕ ಗಳಿಕೆ ಆಗಲಿದ್ದು, ಮೊದಲ ವಾರಾಂತ್ಯ ಅತೀ ಹೆಚ್ಚು ಗಳಿಕೆ ಮಾಡಿದ ತಮಿಳು ಚಿತ್ರ ಎಂಬ ಹೆಗ್ಗಳಿಕೆಗೆ ಚಿತ್ರ ಪಾತ್ರವಾಗಲಿದೆ.

ಒಂದು ಕಡೆ, ‘ಜೈಲರ್ 2’ ಚಿತ್ರವು ತಮಿಳು ಚಿತ್ರರಂಗದ ಇತಿಹಾಸದಲ್ಲೇ ಅತಿ ದೊಡ್ಡ ಆರಂಭಿಕ ವಾರಾಂತ್ಯದ ಗಳಿಕೆ ದಾಖಲಿಸಲು ಸಜ್ಜಾವುಗುದರ ಜೊತೆಗೆ, ಎಂಟು ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ‘2.0’ ಚಿತ್ರದ ಒಟ್ಟು ಗಳಿಕೆಯನ್ನು ಹಿಂದಿಕ್ಕುವತ್ತ ಸಾಗುತ್ತಿದೆ. ‘2.0’ ಚಿತ್ರವು 690 ಕೋಟಿ ರೂ. ಗಳಿಸುವ ಮೂಲಕ ಅತೀ ಹೆಚ್ಚು ಗಳಿಕೆ ಮಾಡಿದ ತಮಿಳು ಚಿತ್ರ ಎಂದನಿಸಿಕೊಂಡಿತ್ತು. ವಿಶೇಷವೆಂದರೆ, ಆ ಚಿತ್ರದಲ್ಲೂ ರಜನಿಕಾಂತ್ ಅವರೇ ನಾಯಕನಾಗಿದ್ದರು. ಆ ದಾಖಲೆಯನ್ನು ಮುರಿಯಲು ಮತ್ತೊಂದು ರಜನಿಕಾಂತ್ ಚಿತ್ರಕ್ಕೆ ಎಂಟು ವರ್ಷಗಳೇ ಬೇಕಾಯಿತು.

‘ಜೈಲರ್‍ 2’ ಚಿತ್ರದಲ್ಲಿ ರಜನಿಕಾಂತ್‍, ರಮ್ಯಾ ಕೃಷ್ಣನ್‍, ಎಸ್‍.ಜೆ. ಸೂರ್ಯ, ಯೋಗಿ ಬಾಬು ಮುಂತಾದವರು ನಟಿಸುತ್ತಿದ್ದು, ಅತಿಥಿ ಪಾತ್ರಗಳಲ್ಲಿ ಮಿಥುನ್‍ ಚಕ್ರವರ್ತಿ, ಮೋಹನ್‍ ಲಾಲ್‍, ಶಿವರಾಜಕುಮಾರ್‍, ವಿದ್ಯಾ ಬಾಲನನ್‍, ಹೃತಿಕ್‍ ರೋಶನ್ ಮುಂತಾದವರು ನಟಿಸಿದ್ದಾರೆ. ಚಿತ್ರವನ್ನು ನೆಲ್ಸನ್‍ ದಿಲೀಪ್‍ ಕುಮಾರ್ ನಿರ್ದೇಶನ ಮಾಡಿದ್ದು, ಸನ್‍ ಪಿಕ್ಚರ್ಸ್ ಸಂಸ್ಥೆಯ ಕಲಾನಿಧಿ ಮಾರನ್‍ ನಿರ್ಮಿಸುತ್ತಿದ್ದಾರೆ. ಅನಿರುದ್ಧ್ ರವಿಚಂದರ್‍ ಸಂಗೀತ ಚಿತ್ರಕ್ಕಿದೆ.

‘ಪ್ರೇಮದ ಊರಲಿ’ ಚಿತ್ರತಂಡ ಭೇಟಿ ಮಾಡಿ ಅಭಿನಂದಿಸಿದ ಯಶ್

Discover more from KannadaScreens

Subscribe now to keep reading and get access to the full archive.

Continue reading