‘ಆಪರೇಷನ್ ಕೊಂಬುಡಿಕ್ಕಿ’ಗೆ ಒಂದಾದ ಮಹೇಂದರ್ ಮತ್ತು ಕಿಶೋರ್

ಚಂದನವನ, ಸಿನಿ ಸುದ್ದಿ

ಬಹಳ ವರ್ಷಗಳ ಹಿಂದಿನ ಮಾತು. ‘ಅಕ್ಕ ತಂಗಿ’ ಎಂಬ ಚಿತ್ರದಲ್ಲಿ ಕಿಶೋರ್‍ ಅವರನ್ನು ನಿರ್ದೇಶನ ಮಾಡಿದ್ದರು ಹಿರಿಯ ನಿರ್ದೇಶಕ ಎಸ್‍. ಮಹೇಂದರ್‍. ಈಗ ಕಿಶೋರ್‍ ಅವರನ್ನು ನಾಯಕನನ್ನಾಗಿಸಿಕೊಂಡು ಅವರೊಂದು ಹೊಸ ಚಿತ್ರದ ನಿರ್ದೇಶನಕ್ಕೆ ಕೈ ಹಾಕಿದ್ದಾರೆ.

ಈ ಹಿಂದೆ, ರಮೇಶ್‍ ಅರವಿಂದ್‍ ಅಭಿನಯದ ‘ಶಿವಾಜಿ ಸುರತ್ಕಲ್‍’ ಮತ್ತು ‘ಶಿವಾಜಿ ಸುರತ್ಕಲ್‍ 2’ ಚಿತ್ರಗಳನ್ನು ನಿರ್ಮಿಸಿದ್ದ ಅನೂಪ್‍ ಹನುಮಂತೇಗೌಡ, ತಮ್ಮ ಮೂರನೇ ಚಿತ್ರವಾಗಿದ್ದು, ‘ಆಪರೇಷನ್ ಕೊಂಬುಡಿಕ್ಕಿ’ಯನ್ನು ಕೈಗೆತ್ತಿಕೊಂಡಿದ್ದಾರೆ.

ಕೊಂಬುಡಿಕ್ಕಿ ಎನ್ನುವುದು ಚಾಮರಾಜನಗರ ಜಿಲ್ಲೆಯ, ಕೊಳ್ಳೆಗಾಲ ತಾಲ್ಲೂಕಿನಲ್ಲಿರುವ ಒಂದು ಸಣ್ಣ ಹಳ್ಳಿ. ಗ್ರಾಮೀಣ ಸೊಗಡಿನ ಚಿತ್ರಗಳಿಗೆ ಹೆಸರಾದ ಎಸ್‍. ಮಹೇಂದರ್‍, ಈಗ ಅದೇ ಚಾಮರಾಜನಗರದವರಾದ ಈ ಕೊಂಬುಡಿಕ್ಕಿಯ ಸುತ್ತ ಚಿತ್ರ ಮಾಡುತ್ತಿದ್ದಾರೆ. ನಗರ ಪ್ರದೇಶದಿಂದ ದೂರವಿರುವ ಈ ಹಳ್ಳಿಗೆ ಕೆಲವು ವರ್ಷಗಳ ಹಿಂದಿನವರೆಗೂ ಯಾವುದೇ ಸೌಕರ್ಯ, ಸೌಲಭ್ಯ ಸಿಕ್ಕಿರಲಿಲ್ಲ. ಇಲ್ಲಿ ನಡೆದ ಒಂದು ಘಟನೆಯನ್ನಿಟ್ಟುಕೊಂಡು ಮಹೇಂದರ್‍ ಚಿತ್ರ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಅನೂಪ್‌ ಹನುಮಂತೇಗೌಡ ಈ ಚಿತ್ರಕ್ಕಾಗಿ ಸಿಲ್ವರ್‌ ಸ್ಕ್ರೀನ್‌ ಸ್ಟುಡಿಯೋಸ್ ಎಂಬ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿ ಅದರ ಅಡಿಯಲ್ಲಿ ‘ಆಪರೇಷನ್‌ ಕೊಂಬುಡಿಕ್ಕಿ’ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಚಿತ್ರಕ್ಕೆ ರವಿ ಬಸ್ರೂರು ಸಂಗೀತ ಸಂಯೋಜಿಸುತ್ತಿದ್ದು, ಕರುಣಾಕರ್‍ ಛಾಯಾಗ್ರಹಣ ಮಾಡುತ್ತಿದ್ದಾರೆ. ದೀಪು ಎಸ್‍. ಕುಮಾರ್ ಅವರ ಸಂಕಲನವಿದೆ.

‘ಆಪರೇಷನ್ ಕೊಂಬುಡಿಕ್ಕಿ’ ಚಿತ್ರದಲ್ಲಿ ನಟಿಸುತ್ತಿರುವ ಕಲಾವಿದರ ಆಯ್ಕೆ ಸದ್ಯದಲ್ಲೇ ಸಂಪೂರ್ಣವಾಗಲಿದ್ದು, ಆ ನಂತರ ಚಿತ್ರೀಕರಣ ಪ್ರಾರಂಭವಾಗಲಿದೆ.

ಜನ ಮೊಬೈಲ್‍ ಒಳಗೆ ಕಳೆದು ಹೋಗಿದ್ದಾರೆ ಅಂತಾರೆ ರಿಷಭ್ ಶೆಟ್ಟಿ

Discover more from KannadaScreens

Subscribe now to keep reading and get access to the full archive.

Continue reading