ಆರೋಪ ಸಾಬೀತಾದರೆ ಒಂದು ಕೋಟಿ ಕೊಡ್ತೀನಿ: ಅರ್ಜುನ್‍ ಸವಾಲು

ಚಂದನವನ, ಪ್ಯಾನ್ ಇಂಡಿಯಾ, ವೀಡಿಯೋ, ಸಂದರ್ಶನ, ಸಿನಿ ಸುದ್ದಿ

‘ಮಾರ್ಟಿನ್‍’ ಚಿತ್ರಕ್ಕೆ ಗ್ರಾಫಿಕ್ಸ್ ಮತ್ತು VFX ಕೆಲಸ ಮಾಡುವವರಿಂದ ಕಮಿಷನ್ ಪಡೆದೆ ಎಂಬ ಆರೋಪ ಸಾಬೀತಾದರೆ ಒಂದು ಕೋಟಿ ರೂ. ನೀಡುವೆ ಎಂದು ನಿರ್ದೇಶಕ ಎ.ಪಿ. ಅರ್ಜುನ್ ಸವಾಲು ಹಾಕಿದ್ದಾರೆ.

‘ಮಾರ್ಟಿನ್‍’ ಚಿತ್ರದ ನಿರ್ಮಾಪಕ ಉದಯ್‍ ಮೆಹ್ತಾ ಅವರಿಗೆ ಡಿಜಿಟಲ್ ಟೆರೇನ್ ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ಎನ್ನುವ ಗ್ರಾಫಿಕ್ಸ್ ಮತ್ತು VFXಗೆ ಮೋಸವಾಗಿದೆ. ಈ ಸಂಬಂಧ ಬಸವೇಶ್ವರನಗರ ಪೊಲೀಸ್‍ ಸ್ಟೇಶನ್‍ಗೆ ದೂರು ದಾಖಲಿಸಿದಾಗ, ಆ ಸಂಸ್ಥೆಯ ಸತ್ಯ ರೆಡ್ಡಿ ಎನ್ನುವವರು ನಿರ್ದೇಶಕರು ಮತ್ತು ಒಂದಿಷ್ಟು ತಂತ್ರಜ್ಞರಿಗೆ 73 ಲಕ್ಷದಷ್ಟು ಕಮಿಷ್‍ ಕೊಟ್ಟಿರುವುದಾಗಿ ಹೇಳಿದ್ದು, ಕೆಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಕೆಲವು ದಿನಗಳ ಹಿಂದೆಯೇ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಅರ್ಜುನ್‍, ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅರ್ಜುನ್‍, ‘ಸತ್ಯ ರೆಡ್ಡಿ ಎನ್ನುವವರು ನಮ್ಮ ಛಾಯಾಗ್ರಾಹಕ, ಸಂಕಲನಕಾರರ ಮೇಲೂ ಆರೋಪ ಮಾಡಿದ್ದಾರೆ. ಎಫ್‍.ಐ.ಆರ್ ಕಾಪಿಯಲ್ಲಿ ನನ್ನ ಹೆಸರೇ ಇಲ್ಲ. ಅದರ ಬಗ್ಗೆ ಚಿತ್ರತಂಡದವರ್ಯಾರೂ ದೂರು ಕೊಟ್ಟಿಲ್ಲ, ಈ ಬಗ್ಗೆ ಎಲ್ಲೂ ಯಾರೂ ಮಾತನಾಡಿಲ್ಲ. ಹಾಗಿರುವಾಗ, ನನ್ನ ಹೆಸರು ಎಳೆದು ತರುವುದು ಎಷ್ಟು ಸರಿ? ಅವರು ಪ್ರಶ್ನಿಸಿದ್ದರು.

ಮಂಗಳವಾರ ಚಿತ್ರದ ಅಧಿಕೃತ ಪತ್ರಿಕಾಗೋಷ್ಠಿಯಲ್ಲಿ ಈ ಪ್ರಶ್ನೆಯನ್ನು ಅವರ ಮುಂದಿಟ್ಟಾಗ, ‘ನಾನು ಆ ರೂಟ್‍ನಲ್ಲಿ ಇಲ್ಲ. ನಾನು ಚಿತ್ರರಂಗಕ್ಕೆ ಬಂದಾಗಿನಿಂದ ಹೊಸಬರ ಜೊತೆಗೆ ಹೆಚ್ಚು ಸಿನಿಮಾ ಮಾಡಿದ್ದೀನಿ. ದರ್ಶನ್‍ ಒಬ್ಬರನ್ನು ಬಿಟ್ಟು ಸ್ಟಾರ್‍ಗಳ ಜೊತೆಗೆ ಕೆಲಸ ಮಾಡಿಲ್ಲ. ಈ ಸಿನಿಮಾಗಳಿಂದ ಚಿತ್ರರಂಗಕ್ಕೆ ಬಹಳಷ್ಟು ಹೊಸ ಕಲಾವಿದರು, ತಂತ್ರಜ್ಞರು ಸಿಕ್ಕಿದ್ದಾರೆ. ಕಳೆದ 16 ವರ್ಷಗಳಿಂದ ನಾನು ಚಿತ್ರರಂಗದಲ್ಲಿದ್ದೇನೆ. ಬಹಳ ಕಷ್ಟಪಟ್ಟು ನನ್ನ ವೃತ್ತಿಜೀವನವನ್ನು ರೂಪಿಸಿಕೊಂಡಿದ್ದೇನೆ. ಲಂಚ ಪಡೆಯುವುದು ನನ್ನ ಸಂಸ್ಕೃತಿಯಲ್ಲ’ ಎಂದರು.

‘ನಾನು 20 ಕೋಟಿ ಕೊಟ್ಟು ಒಂದು ಬಿಲ್ಡಿಂಗ್‍ ಖರೀದಿಸಿದೆ ಎಂದು ಸುದ್ದಿ ಮಾಡಿದರು. ಕೆಲವರು ಲಕ್ಷಾಂತರ ಕಮಿಷನ್‍ ಪಡೆದಿದ್ದೇನೆ ಎಂದರು. ನಾನು ಎಲ್ಲಾದರೂ ಐದು ಸಾವಿರ ಕಮಿಷನ್‍ ತಗೊಂಡಿದ್ದೀನಿ ಅಂತ ಯಾರಾದರೂ ಸಾಬೀತು ಮಾಡಿದರೆ ಒಂದು ಕೋಟಿ ರೂ ಕೊಡುತ್ತೇನೆ. ಈ ಪ್ರಕರಣದಲ್ಲಿ ನನ್ನ ಹೆಸರೇ ಇಲ್ಲ. ಯಾರೋ ಉದ್ದೇಶಪೂರ್ವಕವಾಗಿ ಮಾಡಿದ್ದಾರೆ’ ಎಂದರು.

ಆ. 5ರಂದು 13 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ‘ಮಾರ್ಟಿನ್’ ಟ್ರೇಲರ್

Discover more from KannadaScreens

Subscribe now to keep reading and get access to the full archive.

Continue reading