‘ಚಿತ್ರ ಸೋತಾಗ ಆಗೋ ನೋವು ಹೇಳೋದು ಕಷ್ಟ’

ಚಂದನವನ, ಸಂದರ್ಶನ, ಸಿನಿ ಸುದ್ದಿ

ಗೌರಿಶಂಕರ್ ಅಭಿನಯದ ಮತ್ತು ನಿರ್ಮಾಣದ ‘ಕೆರೆಬೇಟೆ’ ಚಿತ್ರವು ಬಿಡಗುಡೆಯಾಗಿ ಎರಡು ತಿಂಗಳಾಗಿದೆ. ಈ ಚಿತ್ರ ನೋಡುಗರಿಂದ ಮೆಚ್ಚುಗೆ ಪಡೆದಿದ್ದರೂ, ಬಾಕ್ಸ್ ಆಫೀಸ್‍ನಲ್ಲಿ ದೊಡ್ಡ ಸದ್ದು ಮಾಡಲಿಲ್ಲ. ಜನ ಚಿತ್ರಮಂದಿರಗಳಿಗೆ ಬಾರದಿರುವುದಕ್ಕೆ ಬೇಸರಗೊಂಡು, ಗೌರಿಶಂಕರ್‍ ಒಂದು ವೀಡಿಯೋ ಮಾಡಿದ್ದರು. ಚಿತ್ರಮಂದಿರಗಳಿಗೆ ಬಂದು ಚಿತ್ರ ನೋಡಿ ಎಂದು ಮನವಿ ಮಾಡಿದ್ದರು. ಆದರೆ, ಅದರಿಂದ ಹೆಚ್ಚೇನೂ ಪ್ರಯೋಜನವಾಗಲಿಲ್ಲ.

ಈಗ ಗೌರಿಶಂಕರ್ ಬೇಸರದಿಂದ ಒಂದು ಪತ್ರ ಬರೆದಿದ್ದಾರೆ. ‘ಒಂದು ಒಳ್ಳೆಯ ಚಿತ್ರ ಅಂತ ಅನ್ನಿಸಿಕೊಂಡು ಸೋತು ಹೋದಾಗ, ಆಗ ಆಗುವ ನೋವು ಪದಗಳಲ್ಲಿ ಹೇಳಕ್ಕಾಗಲ್ಲ’ ಎಂದು ಬರೆದುಕೊಂಡಿದ್ದಾರೆ.

‘ಮತ್ತೆ ನಮ್ಮ ಬದುಕನ್ನ ನಾವು ಸೊನ್ನೆಯಿಂದ ಅಲ್ಲ, ಮೈನಸ್ ನಿಂದ ಸ್ಟಾರ್ಟ್ ಮಾಡುವಂತಹ ಪರಿಸ್ಥಿತಿ ಬಂದಿದೆ. ಈ ಹಿಂದೆ ನಾನು ಅಭಿನಯಿಸಿ, ನಿರ್ಮಾಣ ಮಾಡಿದಂತಹ ‘ರಾಜಹಂಸ’ ಚಿತ್ರಕ್ಕೂ ಇದೇ ರೀತಿಯ ಸೋಲು. ನಾನು ಕೋಟಿ ಇಟ್ಕೊಂಡು ಸಿನಿಮಾ ಮಾಡುವಂತ ಹಿನ್ನೆಲೆಯವನಲ್ಲ. ಎಷ್ಟೇ ಕಷ್ಟ ಆದ್ರೂ ಒಂದು ಚಿತ್ರಕ್ಕೆ ಏನು ಬೇಕು ಅದೆಲ್ಲವನ್ನು ಶಕ್ತಿ ಮೀರಿ ಪ್ರಯತ್ನಿಸಿ ಮಾಡುವಂತ ಕನಸಿರುವವನು ಅಷ್ಟೇ. ಇವೆಲ್ಲವನ್ನು ಮೀರಿ ದುಃಖದ ಸಂಗತಿ ಅಂದರೆ , ನಮ್ಮ ಚಿತ್ರರಂಗ ಕೂಡ ಒಳ್ಳೆಯ ಪ್ರಯತ್ನಕ್ಕೆ, ಒಳ್ಳೆಯ ಅಭಿನಯಕ್ಕೆ, ಒಳ್ಳೆಯ ಕಥೆಗಾರರಿಗೆ, ಒಳ್ಳೆಯ ನಿರ್ದೇಶಕರಿಗೆ, ಯಾವುದೇ ರೀತಿಯ ಅವಕಾಶಗಳನ್ನು ಗೆಲುವಿಲ್ಲದೆ ಕೊಡುವುದಿಲ್ಲ. ನನಗೆ ಮತ್ತೆ ನಾನೇ ನಿರ್ಮಾಣ ಮಾಡಿ ಸಿನಿಮಾ ಮಾಡುವಂತ ಶಕ್ತಿ ಸದ್ಯಕ್ಕಿಲ್ಲ. ಆದರೆ ಒಳ್ಳೆಯ ನಿರ್ದೇಶಕರಿಂದ, ನಿರ್ಮಾಪಕರಿಂದ ಅವಕಾಶಗಳು ಸಿಕ್ಕರೆ ಖಂಡಿತವಾಗಿಯೂ ಅವರಿಗೆ ಬೆನ್ನೆಲುಬಾಗಿ ನಿಂತು ಅಭಿನಯ ಮಾಡುವಂತ ಆಸೆ ಇದೆ’ ಎಂದು ಗೌರಿಶಂಕರ್‍ ಹೇಳಿಕೊಂಡಿದ್ದಾರೆ.

ಜನಮನ ಸಿನಿಮಾ ಸಂಸ್ಥೆಯಲ್ಲಿ ಮೂಡಿ ಬಂದಿರುವ ‘ಕೆರೆಬೇಟೆ’ ಚಿತ್ರದಲ್ಲಿ ಗೌರಿಶಂಕರ್‍, ಬಿಂದು ಶಿವರಾಮ್‍, ಗೋಪಾಲಕೃಷ್ಣ ದೇಶಪಾಂಡೆ, ಸಂಪತ್ ಮೈತ್ರೇಯಾ ಮುಂತಾದವರು ನಟಿಸಿದ್ದಾರೆ ಚಿತ್ರಕ್ಕೆ ಗಗನ್ ಬದೇರಿಯಾ ಸಂಗೀತ  ಸಂಯೋಜನೆ ಮಾಡಿದ್ದಾರೆ.  ರಾಜ್‍ಗುರು ಈ ಚಿತ್ರ ನಿರ್ದೇಶಿಸಿದ್ದಾರೆ.

ಅದೇ ಆಕ್ರೋಶ; ಅದೇ ಶೈಲಿ, ಆದರೆ ಹೊಸ ಜಡ್ಜ್​ಮೆಂಟ್!

Discover more from KannadaScreens

Subscribe now to keep reading and get access to the full archive.

Continue reading