‘ಸಾವಿರ ಗುಂಗಲಿ’ ಕಳೆದು ಹೋದ ಬೃಂದಾ ಆಚಾರ್ಯ …

ಚಂದನವನ, ಸಿನಿ ಸುದ್ದಿ

‘ಒಂದ್ಸಲ ಮೀಟ್‍ ಮಾಡೋಣ’, ‘ರೀತೂ’, ‘ಬ್ಯಾಂಕ್‍ ಆಫ್‍ ಭಾಗ್ಯಲಕ್ಷ್ಮೀ’, ‘X&Y’ ಮುಂತಾದ ಚಿತ್ರಗಳಲ್ಲಿ ನಟಿಸುತ್ತಿರುವ ಬೃಂದಾ ಆಚಾರ್ಯ, ಸೈಕಲ್‍ ಗ್ಯಾಪ್‍ನಲ್ಲೇ ಒಂದು ಆಲ್ಬಂ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

ಹೌದು, ಇತ್ತೀಚಿನ ದಿನಗಳಲ್ಲಿ ಆಲ್ಬಂ ಹಾಡುಗಳು ರೂಪುಗೊಳ್ಳುತ್ತಿರುವುದು ಕಡಿಮೆಯಾಗುತ್ತಿದೆ. ಇದರ ಮಧ್ಯೆಯೇ, ‘ಸಾವಿರ ಗುಂಗಲಿ’ ಎಂಬ ಆಲ್ಬಂ ಸಾಂಗ್‍ ಬಿಡುಗಡೆಯಾಗಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಕೃಷ್ಣ ನಂಜುಂಡಯ್ಯ ಅವರ ಪರಿಕಲ್ಪನೆಯಲ್ಲಿ ಮೂಡಿಬಂದಿರುವ ಈ ಹಾಡು ಜಿಸ್ಪಾ ಫಿಲಂಸ್‍ ಯೂಟ್ಯೂಬ್‍ ಚಾನಲ್‍ನಲ್ಲಿ ಬಿಡುಗಡೆಯಾಗಿದ್ದು, ಈ ಹಾಡಿನಲ್ಲಿ ಬೃಂದಾ ಆಚಾರ್ಯ, ಭರತ್ ಬೋಪಣ್ಣ, ಮಯೂರ್ ಸಾಗರ್, ಕೃತಿಕಾ ಗೌಡ, ಮಾನಿನಿ ಪಿ ರಾವ್ ಮುಂತಾದವರು ಇದರ ಭಾಗವಾಗಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡುತ್ತಿರುವ ಪ್ರಮೋದ್ ಮರವಂತೆ ಈ ಹಾಡಿಗೆ ಸಾಹಿತ್ಯ ಬರೆದಿದ್ದು, ಪೃಥ್ವಿ ಭಟ್ ಧ್ವನಿಯಲ್ಲಿ ಹಾಡು ಮೂಡಿ ಬಂದಿದೆ. ಜೋಯ್ ಕಾಸ್ಟಾ ಸಂಗೀತ ನಿರ್ದೇಶನ, ಎನ್.ಕೆ. ರಾಜ್ ಛಾಯಾಗ್ರಹಣಈ ಹಾಡಿಗಿದೆ.

ಈ ಹಾಡಿನಲ್ಲಿ ಒಂದು ಪ್ರೀತಿಯ ಕಥೆ ಇದೆ. ಇಲ್ಲಿ ಪ್ರೀತಿಸುವವರು ಅಗಲಿದಾಗ ಆಗುವ ನೋವಿದೆ. ಅಗಲಿದವರು ಇನ್ನೊಂದು ರೂಪದಲ್ಲಿ ಕಾಣಿಸಿಕೊಂಡಾಗ ಆಗುವ ಸಾರ್ಥಕತೆ ಇದೆ. ಇವೆಲ್ಲವನ್ನೂ ಈ ಹಾಡಿನಲ್ಲಿ ನವಿರಾಗಿ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ.

ಇದು ‘ಸೈಡ್‍ ಎ’ ಮಾತ್ರ; ‘ಸೈಡ್‍ ಬಿ’ ಇನ್ನೂ ಬರೋದಿದೆ!

Discover more from KannadaScreens

Subscribe now to keep reading and get access to the full archive.

Continue reading