ತೆಲುಗಿಗೆ ಡಬ್‍ ಆಯ್ತು ಮಾಲಾಶ್ರೀ ನಟನೆಯ ‘ಮಾರಕಾಸ್ತ್ರ’

by | Apr 24, 2024 | ಚಂದನವನ, ಸಿನಿ ಸುದ್ದಿ | 0 comments

ಮಾಲಾಶ್ರೀ ಅಭಿನಯದ ‘ಮಾರಕಾಸ್ತ್ರ’ ಚಿತ್ರವು ಕಳೆದ ವರ್ಷ ಬಿಡುಗಡೆಯಾಗಿದ್ದು ನೆನಪಿರಬಹುದು. ನಟರಾಜ್‍ ನಿರ್ಮಾಣದಲ್ಲಿ, ಗುರುಮೂರ್ತಿ ಸುನಾಮಿ ನಿರ್ದೇಶನದಲ್ಲಿ ಮೂಡಿಬಂದಿದ್ದ ಚಿತ್ರ, ಬಾಕ್ಸ್ ಆಫೀಸ್‍ನಲ್ಲಿ ಅಷ್ಟೇನೂ ಸದ್ದು ಮಾಡಿರಲಿಲ್ಲ. ಈಗ ಚಿತ್ರವನ್ನು ತೆಲುಗಿನಲ್ಲಿ ‘ಮಾರಣಾಯುಧಂ’ ಎಂಬ ಹೆಸರಿನಲ್ಲಿ ಡಬ್‍ ಮಾಡಿ, ಕಳೆದ ಶುಕ್ರವಾರ (ಏಪ್ರಿಲ್‍ 19) ಬಿಡುಗಡೆ ಮಾಡಲಾಗಿದೆ. ಚಿತ್ರವನ್ನು 26 ನಿಮಿಷಗಳಷ್ಟು ಎಡಿಟ್‍ ಮಾಡಿ, ‘ಮಾರಣಾಯುಧಂ’ ಎಂಬ ಹೆಸರಿನಲ್ಲಿ ಆಂಧ್ರ ಮತ್ತು ತೆಲಂಗಾಣದಲ್ಲಿ ರಿಲೀಸ್‍ ಮಾಡಲಾಗಿದೆ.

ಈಗ ಕನ್ನಡ ಅವತರಣಿಕೆಯನ್ನೂ ಎಡಿಟ್‍ ಮಾಡಲಾಗಿದ್ದು, ಒಟ್ಟಿಗೆ ತೆಲುಗು ಮತ್ತು ಕನ್ನಡದಲ್ಲಿ ಇದೇ ಶುಕ್ರವಾರ (ಏಪ್ರಿಲ್‍ 26) ರಾಜ್ಯಾದ್ಯಂತ ಬಿಡುಗಡೆ ಮಾಡಲಾಗುತ್ತಿದೆ. ಈ ಚಿತ್ರದಲ್ಲಿ ಮಾಲಾಶ್ರೀ, ಆನಂದ್‍ ಆರ್ಯ, ಹರ್ಷಿಕಾ ಪೂಣಾಚ್ಛ, ‘ಉಗ್ರಂ’ ಮಂಜು, ನಟರಾಜ್‍, ಅಯ್ಯಪ್ಪ ಪಿ. ಶರ್ಮ ಮುಂತಾದವರು ನಟಿಸಿದ್ದಾರೆ.

ಈ ಚಿತ್ರದ ಕುರಿತು ಮತನಾಡುವ ನಿರ್ಮಾಪಕ-ನಟ ನಟರಾಜ್‍, ‘ನಮ್ಮ ‘ಮಾರಕಾಸ್ತ್ರ’ ಚಿತ್ರವನ್ನು ಕಳೆದವರ್ಷ ಬಿಡುಗಡೆ ಮಾಡಿದ್ದೆವು.  ಆ ಸಮಯದಲ್ಲಿ ಭಾರತ – ಪಾಕ್ ಕ್ರಿಕೆಟ್‍ ಮ್ಯಾಚ್ ಇತ್ತು. ಅದು ಹಬ್ಬಗಳ ಸೀಸನ್‍. ಹಾಗಾಗಿ, ಅಷ್ಟು ಜನ ನಮ್ಮ ಸಿನಿಮಾ‌ ನೋಡಲು ಆಗಲಿಲ್ಲ. ಆದರೆ, ಚಿತ್ರ ನೋಡಿದ ತೆಲುಗು ವಿತರಕರಾದ ವೆಂಕಟೇಶ್ ರಾವ್ ಅವರು ಈ ಚಿತ್ರವನ್ನು ತೆಲುಗಿನಲ್ಲಿ ನಿರ್ಮಾಣ ಮಾಡಿ ಎಂದರು. ‘ಮಾರಕಾಸ್ತ್ರ’ ಈಗ “ಮಾರಣಾಯುಧಂ” ಎಂಬ ಹೆಸರಿನಿಂದ ಇದೇ ಏಪ್ರಿಲ್ 26 ರಂದು ಕರ್ನಾಟಕದಲ್ಲಿ ಬಿಡುಗಡೆಯಾಗಲಿದೆ. ಶನಿವಾರ (27) ದಂದು ಪೌರ ಕಾರ್ಮಿಕರು ಸೇರಿದಂತೆ ಅನೇಕ ಶ್ರಮಿಕ ವರ್ಗದವರಿಗೆ ಒಂದು ಉಚಿತ ಪ್ರದರ್ಶನದ ವ್ಯವಸ್ಥೆ ಮಾಡುತ್ತಿದ್ದೇವೆ’ ಎಂದರು.

‘ಮಾರಕಾಸ್ತ್ರ’ ಚಿತ್ರವನ್ನು ಬಿಡುಗಡೆ ಮಾಡಿದಾಗ ಚಿತ್ರದ ಅವಧಿ ಸ್ವಲ್ಪ ಹೆಚ್ಚಿದೆ ಅಭಿಪ್ರಾಯ ಕೇಳಿಬಂದಂತೆ. ‘ಈಗ 26 ನಿಮಿಷ ಕಡಿಮೆ ಮಾಡಿದ್ದೇವೆ. ಮಾಲಾಶ್ರೀ, ಆನಂದ್ ಆರ್ಯ, ಹರ್ಷಿಕಾ ಪೂಣಚ್ಛ ಮುಂತಾದವರು ನಮ್ಮ ಚಿತ್ರದಲ್ಲಿ ನಟಿಸಿದ್ದಾರೆ’ ಎಂದು ನಿರ್ದೇಶಕ ಗುರುಮೂರ್ತಿ ಸುನಾಮಿ ತಿಳಿಸಿದರು.

ಮಾಲಾಶ್ರೀ ಅವರು ಮೊದಲು ಚಿತ್ರದಲ್ಲಿ ನಟಿಸಲು ಒಪ್ಪಿರಲಿಲ್ಲವಂತೆ. ‘ನಾನು ಮೊದಲು ‘ಮಾರಕಾಸ್ತ್ರ’ ಚಿತ್ರದಲ್ಲಿ ನಟಿಸಲು ಒಪ್ಪಿರಲಿಲ್ಲ. ಆನಂತರ ನಿರ್ದೇಶಕರು ಕಥೆ ಹೇಳಿದ ರೀತಿ ಇಷ್ಟವಾಯಿತು. ಅದರಲ್ಲೂ ನಿರ್ದೇಶಕರಿಗೆ ಕಾಲಿನ ಸಮಸ್ಯೆಯಿದೆ. ಅಂತಹುದರಲ್ಲೂ ಅವರಿಗಿರುವ ಸಿನಿಮಾ ಪ್ರೀತಿ ಕಂಡು ಖುಷಿಯಾಯಿತು. ತೆಲುಗಿನ ಜನರು ನನ್ನ ಪಾತ್ರವನ್ನು ಒಪ್ಪಿಕೊಂಡಿದ್ದಾರೆ. ಇದೇ ಶುಕ್ರವಾರ ಕರ್ನಾಟಕದಲ್ಲೂ ಬಿಡುಗಡೆಯಾಗಲಿದೆ. ಎಲ್ಲರೂ ಚಿತ್ರ ನೋಡಿ’ ಎಂದರು ಮಾಲಾಶ್ರೀ.

ಈ ಸಂದರ್ಭದಲ್ಲಿ ಚಿತ್ರದ ಚಿತ್ರದ ವಿತರಕ ಯಾದವ್, ಆನಂದ್ ಆರ್ಯ, ರವಿಚೇತನ್ , ಶಶಿಧರ್, ಮಂಜುನಾಥ್, ಮಂಜುಳಾ ರೆಡ್ಡಿ ಮುಂತಾದವರು ಹಾಜರಿದ್ದರು.

ಶೆಟ್ರೆ ಓಲ್ಲರ್? … ‘R’ ಶೆಟ್ರೆನಕ್ಲೆನಾ ಸುದ್ದಿಯೇ ಇಜ್ಜಿ!

Discover more from KannadaScreens

Subscribe now to keep reading and get access to the full archive.

Continue reading