ಉಪೇಂದ್ರ ಹುಟ್ಟುಹಬ್ಬಕ್ಕಲ್ಲ, ಅಕ್ಟೋಬರ್ ತಿಂಗಳಲ್ಲಿ ‘ಯು/ಐ’ ಬಿಡುಗಡೆ

ಚಂದನವನ, ಪ್ಯಾನ್ ಇಂಡಿಯಾ, ಸಿನಿ ಸುದ್ದಿ

ಉಪೇಂದ್ರ ಅಭಿನಯದ ಮತ್ತು ನಿರ್ದೇಶನದ ‘ಯು/ಐ’ ಚಿತ್ರವು ಉಪೇಂದ್ರ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ ಎಂಬ ಸುದ್ದಿ ಇತ್ತು. ಆದರೆ, ಇದೀಗ ಬಂದ ಸುದ್ದಿಯ ಪ್ರಕಾರ ಚಿತ್ರವು ಅಕ್ಟೋಬರ್‍ನಲ್ಲಿ ಬಿಡುಗಡೆ ಆಗುತ್ತಿದೆ.

‘ಯು/ಐ’ ಚಿತ್ರದ ಬಿಡುಗಡೆ ಯಾವಾಗ ಎಂಬ ಪ್ರಶ್ನೆ ಎಲ್ಲರಲ್ಲೂ ಇದ್ದೇ ಇತ್ತು. ಅದಕ್ಕೆ ಸರಿಯಾಗಿ, ಶುಕ್ರವಾರ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಚಿತ್ರದ ಪೋಸ್ಟರ್ ಬಿಡುಗಡೆ ಆಗಿದ್ದು, ಈ ಪೋಸ್ಟರ್‍ನಲ್ಲಿ ಚಿತ್ರ ಅಕ್ಟೋಬರ್‍ನಲ್ಲಿ ಬಿಡುಗಡೆ ಆಗಲಿದೆ ಎಂದು ತಿಳಿಸಲಾಗಿದೆ. ಸರಿ ಅಕ್ಟೋಬರ್‍ನಲ್ಲಿ ಯಾವಾಗ?

ಉಪೇಂದ್ರ ಸದ್ಯದಲ್ಲೇ ಒಂದು ಡೈಲಾಗ್‍ ಟೀಸರ್‍ ಬಿಡುಗಡೆ ಮಾಡುವುದಕ್ಕೆ ಸಜ್ಜಾಗಿದ್ದು, ಆ ಟೀಸರ್‍ನಲ್ಲಿ ಚಿತ್ರದ ಬಿಡುಗಡೆ ಯಾವಾಗ ಎಂದು ಅಧಿಕೃತವಾಗಿ ತಿಳಿಸಲಾಗುತ್ತದಂತೆ.

ಉಪೇಂದ್ರ ಅಭಿನಯದ ‘ಯು/ಐ’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿದ್ದು, ಮುಕ್ತಾಯದ ಹಂತಕ್ಕೆ ಬಂದಿದೆಯಂತೆ. ಸದ್ಯದಲ್ಲೇ ಮೊದಲ ಕಾಪಿ ಸಹ ಬರಲಿದ್ದು, ನಂತರ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಿಸುತ್ತಿದ್ದಂತೆ.

‘ಯು/ಐ’ ಚಿತ್ರವನ್ನು ಲಹರಿ ಫಿಲಂಸ್ ಮತ್ತು ವೀನಸ್‍ ಎಂಟರ್‍ಟೈನರ್ಸ್‍ ಸಂಸ್ಥೆಗಳಡಿ ಜಿ. ಮನೋಹರನ್‍ ಮತ್ತು ಶ್ರೀಕಾಂತ್‍ ಕೆ.ಪಿ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಇದೊಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಕನ್ನಡವಲ್ಲದೆ ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.

‘ಯುಐ’ ಚಿತ್ರಕ್ಕೆ ಉಪೇಂದ್ರ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನ ಮಾಡಿ, ನಾಯಕರಾಗಿಯೂ ಕಾಣಿಸಿಕೊಂಡಿದ್ದಾರೆ. ಅವರಿಗೆ ನಾಯಕಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದು, ಮಿಕ್ಕಂತೆ ರವಿಶಂಕರ್‍, ಅಚ್ಯುತ್‍ ಕುಮಾರ್‍, ಸಾಧು ಕೋಕಿಲ ಮುಂತಾದವರು ನಟಿಸಿದ್ದಾರೆ.

ನಾಯಕ ಪಿಟೀಲು, ನಾಯಕಿ ಕೊಳಲು; ಮಂಸೋರೆ ಶೈಲಿ ಬದಲು

Discover more from KannadaScreens

Subscribe now to keep reading and get access to the full archive.

Continue reading