ವರಮಹಾಲಕ್ಷ್ಮೀ ಹಬ್ಬಕ್ಕೆ ಶಿವಣ್ಣ 131 ಚಿತ್ರದ ಮುಹೂರ್ತ

ಚಂದನವನ, ಸಿನಿ ಸುದ್ದಿ

ಶಿವರಾಜಕುಮಾರ್‍ ಹುಟ್ಟುಹಬ್ಬದ ಸಂದರ್ಭದಲ್ಲಿ ಕೆಲವು ಹೊಸ ಚಿತ್ರಗಳ ಘೋಷಣೆಯಾಗಿವೆ. ಈ ಪೈಕಿ ಯಾವ ಚಿತ್ರ ಮೊದಲು ಶುರುವಾಗುತ್ತದೆ ಎಂಬ ಕುತೂಹಲ ಸಹಜವಾಗಿಯೇ ಇತ್ತು. ‘ಭೈರವನ ಕೊನೆಯ ಪಾಠ’ ಮತ್ತು ‘ಶಿವಣ್ಣ 131’ ಚಿತ್ರಗಳ ಪೈಕಿ ಒಂದು ಶುರುವಾಗುತ್ತದೆ ಎಂದು ಹೇಳಲಾಗಿತ್ತು. ಈ ಪೈಕಿ ಶಿವಣ್ಣ 131 ಮೊದಲು ಪ್ರಾರಂಭವಾಗಿದೆ.

ಭಾನುವಾರ, ಚಿತ್ರತಂಡದವರು ಶಿವರಾಜಕುಮಾರ್ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ನಿರ್ದೇಶಕ ಕಾರ್ತಿಕ್ ಅದ್ವೈತ್, ನಿರ್ಮಾಪಕರಾದ ಎನ್.ಎಸ್. ರೆಡ್ಡಿ ಹಾಗೂ ಸುಧೀರ್, ಛಾಯಾಗ್ರಹಕ ಎ.ಜೆ ಶೆಟ್ಟಿ, ಸಂಕಲನಕಾರ ದೀಪು ಎಸ್. ಕುಮಾರ್ ಮುಂತಾದವರು ಹಾಜರಿದ್ದರು.

ನಿರ್ಮಾಪಕ ಸುಧೀರ್ ಹೇಳುವಂತೆ ಆಗಸ್ಟ್ನಲ್ಲಿ ವರಮಹಾಲಕ್ಷ್ಮೀ ಹಬ್ಬದ ಸಂದರ್ಭದಲ್ಲಿ ಚಿತ್ರದ ಮುಹೂರ್ತ ನಡೆಯಲಿದೆಯಂತೆ. ಆ ನಂತರ ಚಿತ್ರೀಕರಣ ನಡೆಯಲಿದೆ. ಚಿತ್ರಕ್ಕಾಗಿಯೇ ಎಚ್‍.ಎಂ.ಟಿ ಫ್ಯಾಕ್ಟರಿಯಲ್ಲಿ ಸೆಟ್‍ ನಿರ್ಮಿಸಲಾಗುತ್ತಿದೆ. ಆ ಸೆಟ್‍ನಲ್ಲಿ ಚಿತ್ರದ ಮೊದಲ ಹಂತದ ಚಿತ್ರೀಕರಣ ನಡೆಯಲಿದೆಯಂತೆ.

ಮೊದಲ ಹಂತದ ಚಿತ್ರೀಕರಣದ ನಂತರ ಶಿವರಾಜಕುಮಾರ್ ಅವರು, ‘45’ ಮತ್ತು ‘ಉತ್ತರಕಾಂಡ’ ಚಿತ್ರದಲ್ಲಿನ ತಮ್ಮ ಬಾಕಿ ಇರುವ ಭಾಗದ ಚಿತ್ರೀಕರಣ ಮುಗಿಸಿ, ಈ ಚಿತ್ರದ ಚಿತ್ರೀಕರಣಕ್ಕೆ ವಾಪಸ್ಸಾಗಲಿದ್ದಾರೆ. ಈ ಚಿತ್ರವು ಭುವನೇಶ್ವರಿ ಪ್ರೊಡಕ್ಷನ್ ಬ್ಯಾನರ್‍ ಅಡಿ ಈ ಚಿತ್ರ ನಿರ್ಮಾಣವಾಗುತ್ತಿದೆ.

ಶಿವರಾಜಕುಮಾರ್ ಅವರನ್ನು ನಿರ್ದೇಶಿಸುವ ಮೂಲಕ ಕಾರ್ತಿಕ್ ಅದ್ವೈತ್, ಇದೇ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಅಂದಹಾಗೆ, ಇದು ಇವರಿಗೆ ಇದು ನಿರ್ದೇಶಕನಾಗಿ ಎರಡನೇ ಸಿನಿಮಾ. ಇದಕ್ಕೂ ಮೊದಲು ಅವರು ತಮಿಳಿನಲ್ಲಿ ‘ಪಾಯುಂ ಒಲಿ ನೀ ಎನಕ್ಕು’ ಎಂಬ ಚಿತ್ರ ನಿರ್ದೇಶಿಸಿದ್ದರು. ಈಗ ಅವರು ಕನ್ನಡದಲ್ಲಿ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ.

ಸದ್ಯ ಹೆಸರಿಡದ ಈ ಚಿತ್ರವು ಒಂದು ಆ್ಯಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಶಿವಣ್ಣ ವಿಭಿನ್ನ ಪಾತ್ರದಲ್ಲಿ ಕಾಣಸಿಕೊಳ್ಳಲಿದ್ದಾರಂತೆ. ಅವರ ಲುಕ್‍ ಸಹ ಈ ಚಿತ್ರದಲ್ಲಿ ಬದಲಾಗಲಿದೆ ಎಂದು ಹೇಳಲಾಗುತ್ತಿದೆ. ‘ಘೋಸ್ಟ್’ ಖ್ಯಾತಿಯ ವಿ.ಎಂ. ಪ್ರಸನ್ನ ಹಾಗೂ ‘ಸೀತಾರಾಮಂ’ ಖ್ಯಾತಿಯ ಜಯಕೃಷ್ಣ ಬರಹಗಾರರಾಗಿ ಈ ಚಿತ್ರದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.

ಇನ್ನು, ‘ವಿಕ್ರಂ ವೇದ’, ‘ಆರ್ ಡಿ ಎಕ್ಸ್’, ‘ಖೈದಿ’ ಸಿನಿಮಾ ಖ್ಯಾತಿಯ ಸ್ಯಾಮ್ ಸಿ.ಎಸ್ ಸಂಗೀತ ಒದಗಿಸಲಿದ್ದಾರೆ. ಎ.ಜೆ ಶೆಟ್ಟಿ ಛಾಯಾಗ್ರಹಣ, ದೀಪು ಎಸ್. ಕುಮಾರ್ ಸಂಕಲನ ಈ ಚಿತ್ರಕ್ಕಿದೆ.

ಸಹಜ ಕೃಷಿಯ ಜೊತೆಗೊಂದು ಪ್ರೇಮಕಥೆ; ಇವ ‘ಗೋಪಿಲೋಲ’

Discover more from KannadaScreens

Subscribe now to keep reading and get access to the full archive.

Continue reading