‘ಯುವ’, ತಂದೆ-ಮಗನ ಸಂಘರ್ಷದ ಕಥೆ: ಸಂತೋಷ್‍

ಚಂದನವನ, ಸಂದರ್ಶನ, ಸಿನಿ ಸುದ್ದಿ

ಸಂತೋಷ್‍ ಆನಂದರಾಮ್‍ ನಿರ್ದೇಶನದ ‘ಯುವ’ ಚಿತ್ರವು ಮಾರ್ಚ್‍ 29ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಬಗ್ಗೆ ಡಾ. ರಾಜ್‍ ಕುಟುಂಬದ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟಿದ್ದಾರೆ. ಅದಕ್ಕೆ ಕಾರಣ, ಈ ಚಿತ್ರದ ಮೂಲಕ ರಾಘವೇಂದ್ರ ರಾಜಕುಮಾರ್‍ ಅವರ ಎರಡನೆಯ ಮಗ ಗುರು ಅಲಿಯಾಸ್‍ ಯುವ ರಾಜಕುಮಾರ್ ಚಿತ್ರರಂಗಕ್ಕೆ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದಾರೆ.

ಏನು ಈ ಚಿತ್ರದ ವಿಶೇಷತೆ? ಈ ಕುರಿತು ಮಾತನಾಡುವ ಸಂತೋಷ್‍, ‘ಇದೊಂದು ಅಪ್ಪ-ಮಗನ ಸಂಘರ್ಷದ ಕಥೆ. ಪ್ರತಿ ಮನೆಯಲ್ಲೂ ಒಂದಲ್ಲ ಒಂದು ಕಾರಣಕ್ಕೆ ಅಪ್ಪ-ಮಗನ ನಡುವೆ ಒಂದು ಸಂಘರ್ಷ ಇರುತ್ತದೆ. ಅದು ಓದಿನ ವಿಷಯದಲ್ಲಾಗಿರಬಹುದು ಅಥವಾ ಮದುವೆ, ವೃತ್ತಿ ಹೀಗೆ ಯಾವುದೇ ವಿಷಯದಲ್ಲಾದರೂ ಇರಬಹುದು. ತಂದೆಯನ್ನು ಅರ್ಥ ಮಾಡಿಕೊಳ್ಳದ ಮಗ ಮತ್ತು ಮಗನನ್ನು ಅರ್ಥ ಮಾಡಿಕೊಳ್ಳದ ತಂದೆ. ಇವರಿಬ್ಬರೂ ಒಂದು ಹಂತದಲ್ಲಿ ಒಂದು ಜ್ಞಾನೋದಯವಾಗುತ್ತದೆ. ಅದೇ ಈ ಚಿತ್ರದ ಕಥೆ’ ಎನ್ನುತ್ತಾರೆ ಸಂತೋಷ್‍.

ತಂದೆ-ಮಗನ ಸಂಘರ್ಷದ ಕಥೆಯ ಜೊತೆಗೆ ಬದುಕಿನ ಸಂಘರ್ಷವೂ ಇಲ್ಲಿದೆಯಂತೆ. ‘ಇದೊಂದು ಹೋರಾಟದ ಕಥೆ. ಈ ಚಿತ್ರದಲ್ಲಿ ಗುರು ಡೆಲಿವರಿ ಬಾಯ್ ಆಗಿ ಕಾಣಿಸಿಕೊಂಡಿದ್ದಾರೆ. ಆರಂಭದಲ್ಲಿ ಕಾಲೇಜಿನಲ್ಲಿ ತನ್ನದೇ ಹೋರಾಟ ಮಾಡುವ ಯುವಕನೊಬ್ಬ ಕಾಲೇಜ್ ಪಾಸಾದ ನಂತರ ಬದುಕನ್ನು ಹೇಗೆ ಸ್ವೀಕರಿಸುತ್ತಾನೆ, ತನ್ನ ಮನೆಯನ್ನು ಹೇಗೆ ನಡೆಸುತ್ತಾನೆ ಎನ್ನುವುದು ಚಿತ್ರದ ಕಥೆ. ಚಿತ್ರದ ಮೊದಲಾರ್ಧ ಕಾಲೇಜ್‍ ಆದರೆ, ದ್ವಿತೀಯಾರ್ಧ ಅಪ್ಪ-ಮಗನ ನಡುವಿನ ಸಂಘರ್ಷವಿದೆ. ಅದ ಹೇಗೆ ಅಂತ್ಯವಾಗುತ್ತದೆ ಎನ್ನುವುದು ಚಿತ್ರದ ಕಥೆ. ಸರಿಯಾಗಿ ಹೇಳಬೇಕೆಂದರೆ, ಬದುಕಿನ ದಡದಲ್ಲಿರುವ ವಿದ್ಯಾರ್ಥಿಗಳ ಕಥೆ ಇದು’ ಎನ್ನುತ್ತಾರೆ ಸಂತೋಷ್‍.

ಈ ಚಿತ್ರದ ಎಳೆ ಕೆಲವು ವರ್ಷಗಳಿಂದಲೇ ಸಂತೋಷ್‍ ತಲೆಯಲ್ಲಿತ್ತಂತೆ. ‘ಗುರು ರಾಜಕುಮಾರ್‍ ಅವರನ್ನು ಲಾಂಚ್‍ ಮಾಡಬೇಕು, ಅದಕ್ಕೊಂದು ಒಳ್ಳೆಯ ಕಥೆ ಬೇಕು ಎಂದು ನಿರ್ಮಾಪಕ ವಿಜಯ್‍ ಕಿರಗಂದೂರು ಹೇಳಿದರು. ತಲೆಯಲ್ಲಿ ಒಂದಿಷ್ಟು ವಿಷಯಗಳಿದ್ದವು. ಅದಕ್ಕೆ ಒಂದು ಕಥೆಯ ರೂಪ ಕೊಟ್ಟೆ. ಇಲ್ಲಿ ಹೊಸದೇನೋ ಪ್ರಯೋಗ ಮಾಡುವುದಕ್ಕೆ ಸಾಧ್ಯವಿಲ್ಲ. ಇಲ್ಲಿ ಇದ್ದ ದೊಡ್ಡ ಸವಾಲೆಂದರೆ ಕಥೆಯನ್ನು ನೀಟ್‍ ಆಗಿ ಪ್ರೆಸೆಂಟ್‍ ಮಾಡಬೇಕು. ನನ್ನ ಸಿನಿಮಾಗಳು ಯಾವತ್ತೂ ಒಂದು ಚೌಕಟ್ಟು ಬಿಟ್ಟು ಹೋಗುವುದಿಲ್ಲ. ಆ ಚೌಕಟ್ಟು ಮತ್ತು ಯುವ ಅವರ ಕುಟುಂಬ ಅವರ ಪರಂಪರೆ ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಕಥೆ ಮಾಡಿದ್ದೇನೆ. ಇಲ್ಲಿ ಯಾವುದೇ ಹಿಂಸೆ ಇರುವುದಿಲ್ಲ. ಕಮರ್ಷಿಯಲ್ ಅಂಶಗಳಿದ್ದರೂ ಹಿಡಿತದಲ್ಲಿರುತ್ತದೆ. ಯಾವುದೇ ಮುಜುಗರವಿಲ್ಲದೆ ಎಲ್ಲಾ ವರ್ಗದ ಜನರು ಆರಾಮವಾಗಿ ಕೂತು ಈ ಚಿತ್ರವನ್ನು ನೋಡಬಹುದು’ ಎನ್ನುತ್ತಾರೆ ಸಂತೋಷ್‍.

ಯುವ ಈ ಚಿತ್ರದಲ್ಲಿ ಬಹಳ ಮೆಚ್ಯೂರ್ಡ್‍ ಆಗಿ ಕಾಣುತ್ತಾರೆ ಎನ್ನುವ ಸಂತೋಷ್‍, ‘ಸಾಮಾನ್ಯವಾಗಿ ಒಂದು ಚಿತ್ರಕಥೆಯಲ್ಲಿ ಮೆಚ್ಯುರಿಟಿ ಇದ್ದು, ಅದು ನಟನಲ್ಲಿ ಇಲ್ಲ ಎಂದರೆ ಕಷ್ಟವಾಗುತ್ತದೆ. ಆದರೆ, ಇಲ್ಲಿ ಚಿತ್ರಕಥೆಯ ಜೊತೆಗೆ ನಾಯಕನಲ್ಲೂ ಅದೇ ಮೆಚ್ಯುರಿಟಿ ಇದೆ. ಅದರ ಜೊತೆಗೆ ಗುರು ಫೈಟ್‍ ಮತ್ತು ಹಾಡುಗಳಲ್ಲಿ ಚೆನ್ನಾಗಿ ಸ್ಕೋರ್‍ ಮಾಡುತ್ತಾರೆ. ಅವರು ಇಲ್ಲಿ ಯಾರನ್ನೂ ಅನುಕರಿಸುವುದಿಲ್ಲ. ಕೆಲವು ಕಡೆ ಅವರ ಕುಟುಂಬದ ಕೆಲವರ ಶೇಡ್‍ ಅವರಲ್ಲಿ ಕಾಣಿಸಿಬಹುದಾದರೂ, ಗುರು ಪ್ರಯತ್ನಪೂರ್ವಕವಾಗಿ ಯಾರನ್ನೂ ಇಮಿಟೇಟ್‍ ಮಾಡಿಲ್ಲ. ಅವರು ಎಲ್ಲೂ ತಮ್ಮ ಸ್ವಂತಿಕೆಯನ್ನು ಬಿಟ್ಟು ಕೊಟ್ಟಿಲ್ಲ’ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ಸಂತೋಷ್‍.

ಅಪ್ಪ-ಮಗನ ಸಂಬಂಧ ಬಣ್ಣಿಸುವ ‘ಅಪ್ಪುಗೆ’ ಬಿಡುಗಡೆ …

Discover more from KannadaScreens

Subscribe now to keep reading and get access to the full archive.

Continue reading