ಎರಡ್ಮೂರು ವಾರ ಅಂತ ಹೋದ ಮೈಕಲ್‍ ವಾಪಸ್‍ …

ಕಿರುತೆರೆ, ಚಂದನವನ, ಸಿನಿ ಸುದ್ದಿ

‘ಬಿಗ್‍ ಬಾಸ್‍’ನ 10ನೇ ಸೀಸನ್‍ ಈಗ ಮುಕ್ತಾಯದ ಹಂತದಲ್ಲಿದೆ. 13ನೇ ವಾರಕ್ಕೆ ಕಾಲಿಟ್ಟಿರುವ ಈ ರಿಯಾಲಿಟಿ ಶೋನಿಂದ ಭಾನುವಾರ ರಾತ್ರಿ ಮೈಕಲ್‍ ಔಟ್‍ ಆಗಿದ್ದಾರೆ. ಮೈಕಲ್‍ ಇಷ್ಟು ದಿನ ಇರಬಹುದು ಎಂದು ಯಾರೂ ಅಂದುಕೊಂಡಿರಲಿಲ್ಲ. ಅಷ್ಟು ದಿನ ಇರಬಹುದು ಎಂದು ಅವರೇ ಅಂದುಕೊಂಡಿರಲಿಲ್ಲವಂತೆ. ಈಗ ಎಲಿಮಿನೇಟ್‍ ಆಗಿರುವ ಮನೆಯಿಂದ ಹೊರಬಂದು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ‘’ಬಿಗ್‍ ಬಾಸ್‍’ ಮನೆಯನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಹೊರಗಿನ ಜೀವನವನ್ನು ಅನುಭವಿಸಲು ಎಕ್ಸೈಟ್‍ ಆಗಿದ್ದೇನೆ. ನಾನು ‘ಬಿಗ್‍ ಬಾಸ್‍’ ಮನೆಗೆ ಹೋದಾಗ, ಅಲ್ಲಿನ ವಾತಾವರಣ ನೋಡಿ ಎರಡು ಮೂರು ವಾರ ಇರಬಹುದಷ್ಟೇ ಎಂದುಕೊಂಡಿದ್ದೆ. ಆದರೆ, ಹದಿಮೂರು ವಾರ ಉಳಿದೆ. ಈ ವಾರ ಹೊರಬರಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಎಲ್ಲೋ ಒಂದು ಕಡೆ, ಇನ್ನೊಂದೆರಡು ವಾರ ಕಳೆದು ಫೈನಲ್‌ಗೂ ಹೋಗಬಹುದು ಎಂಬ ವಿಶ್ವಾಸವೂ ಇತ್ತು. ಆದರೆ ಬ್ಯಾಡ್‌ಲಕ್’ ಎಂದು ಹೇಳಿಕೊಂಡಿದ್ದಾರೆ.

ಮೈಕಲ್‍ ಇಷ್ಟು ವರ್ಷ ಕನ್ನಡ ಮಾತಾಡಿದ್ದು ಬಹಳ ಕಡಿಮೆಯಂತೆ. ‘ಮನೆಗೆ ಹೋದ ಮೇಲೆ ಕನ್ನಡ ಎಂಥ ಸುಂದರವಾದ ಭಾಷೆ, ಅದರ ಲಿಪಿ ಎಷ್ಟು ಸರಳ ಅಂತ ಗೊತ್ತಾಯ್ತು. ನಾನು ಐದಾರು ದಿನಗಳಲ್ಲಿಯೇ ಕನ್ನಡ ಲಿಪಿಗಳನ್ನೆಲ್ಲ ಕಲಿತುಕೊಂಡುಬಿಟ್ಟೆ. ಎಲ್ಲರ ಮೈಕ್‌ನ ನೇಮ್‌ಟ್ಯಾಗ್ ನೋಡಿ ನೋಡಿ ಅಕ್ಷರಗಳನ್ನು ಕಲಿಯುತ್ತಿದ್ದೆ. ಕರ್ನಾಟಕಕ್ಕೆ ಬೇರೆ ಕಡೆಯಿಂದ ಬರುವವರೆಲ್ಲ ಪ್ರಯತ್ನ ಮಾಡಿದರೆ ಸುಲಭವಾಗಿ ಕನ್ನಡ ಕಲಿಯಬಹುದು’ ಎಂದಿದ್ದಾರೆ.

ಆರಂಭದಿಂದಲೇ ಎಲ್ಲರ ಜೊತೆಗೆ ಬೆರೆಯಬೇಕಿತ್ತು ಎಂದಿರುವ ಅವರು, ‘ಆರಂಭದಲ್ಲಿ ತುಂಬ ಸ್ಲೋ ಆಗಿದ್ದೆ. ಅದೇ ನನ್ನನ್ನು ಕೊಂಚ ಹಿಂದಕ್ಕೆ ತಳ್ಳಿತು ಅನಿಸುತ್ತದೆ. ಆರಂಭದಿಂದಲೇ ಇನ್ನಷ್ಟು ಸ್ಟ್ರಾಂಗ್ ಆಗಿ ನಿಂತುಕೊಂಡಿದ್ದರೆ ಇನ್ನೂ ತುಸು ಮುಂದಕ್ಕೆ ಹೋಗಬಹುದಿತ್ತ. ಈಗೇನಾದ್ರೂ ಮತ್ತೆ ಪುನಃ ಮನೆಯೊಳಗೆ ಹೋಗಲು ಅವಕಾಶ ಸಿಕ್ಕರೆ, ಮೊದಲ ದಿನದಿಂದಲೇ ಎಲ್ಲರ ಜೊತೆಯಲ್ಲಿ ಬೆರೆಯಲು ಶುರುಮಾಡುತ್ತಿದ್ದೆ’ ಎಂದು ಹೇಳಿಕೊಂಡಿದ್ದಾರೆ.

ಸಂಗೀತ ಮತ್ತು ಪ್ರತಾಪ್‍ ಫೇಕ್‍ ಎಂದಿರುವ ಮೈಕಲ್‍, ‘ಪ್ರತಾಪ್‌ ಹೇಗೆ ಅಂತ ಅರ್ಥನೇ ಆಗಲಿಲ್ಲ. ಅವನು ಸಂಪೂರ್ಣವಾಗಿ ಸಿಂಪತಿ ಕಾರ್ಡ್‌ ಪ್ಲೇ ಮಾಡಿ ಮುಂದೆ ಬಂದಿದಾನೆ. ಸಂಗೀತಾ ಕೂಡ ಬೇಡದಿರುವ ಕಡೆ ತನ್ನ ಅಭಿಪ್ರಾಯಗಳನ್ನು ಇಂಜೆಕ್ಟ್ ಮಾಡಿ ಮುಂದೆ ಹೋಗಿದ್ದಾಲೆ ಅಂತನಿಸುತ್ತದೆ. ನನ್ನ ಪ್ರಕಾರ ವಿನಯ್, ಸಂಗೀತಾ, ಕಾರ್ತಿಕ್ ಸಂಗೀತಾ, ತುಕಾಲಿ ಮತ್ತು ಪ್ರತಾಪ್ ಇವರು ಕೊನೆಯ ಹಂತದಲ್ಲಿರುತ್ತಾರೆ. ಸಂಗೀತಾ ಗೆಲ್ಲಬಹುದು. ಮುಂದಿನ ವಾರ ತನಿಷಾ ಎಲಿಮಿನೇಟ್ ಆಗಬಹುದು’ ಅಂತಲೂ ಮೈಕಲ್‍ ಹೇಳಿಕೊಂಡಿದ್ದಾರೆ.

ಭೂಮಿ, ಭಾನು ಬಿಂಬಿಸುವ ‘ಭುವನಂ ಗಗನಂ’ ಮುಕ್ತಾಯ

Discover more from KannadaScreens

Subscribe now to keep reading and get access to the full archive.

Continue reading