ತಂದೆ, ಮಗಳು ಮತ್ತು ಜೀಪ್‍; ‘ಶಬರಿ’ ಟ್ರೇಲರ್ ಬಿಡುಗಡೆ

ಚಂದನವನ, ಸಿನಿ ಸುದ್ದಿ

ಕಳೆದ ವರ್ಷ ಬಿಡುಗಡೆಯಾದ ‘ಕೋರ’ ಚಿತ್ರದ ನಂತರ ನಿರ್ದೇಶಕ ಶ್ರೀ ಸದ್ದಿಲ್ಲದೆ ಇನ್ನೊಂದು ಚಿತ್ರದೊಂದಿಗೆ ಈ ಬಂದಿದ್ದಾರೆ. ಈ ಬಾರಿ ಅವರು ತಂದೆ, ಮಗಳು ಮತ್ತು ಜೀಪ್‍ … ಹೀಗೆ ಮೂರು ಪಾತ್ರಗಳನ್ನಿಟ್ಟುಕೊಂಡು ‘ಶಬರಿ’ ಎಂಬ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಈ ಚಿತ್ರದ ಟ್ರೇಲರ್‍ ಇತ್ತೀಚೆಗೆ ಬಿಡುಗಡೆ ಆಗಿದೆ.

‘ಶಬರಿ’ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಿರ್ದೇಶಕ ರವಿ ಶ್ರೀವತ್ಸ, ನಟ ‘ಒರಟ’ ಪ್ರಶಾಂತ್ , ಉದ್ಯಮಿ ಪ್ರಶಾಂತ್ ಚಕ್ರವರ್ತಿ, ನಟರಾದ ಪ್ರವೀಣ್ , ಕೋಟೆ ಪ್ರಭಾಕರ್ ಹಾಗೂ ನಟಿ ಭೂಮಿಕಾ ಹಾಜರಿದ್ದು, ಟ್ರೇಲರ್ ಬಿಡುಗಡೆ ಮಾಡುವುದರ ಜೊತೆಗೆ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಭಾರವಿ ಫಿಲಂಸ್ ಬ್ಯಾನರಿನಡಿಯಲ್ಲಿ ರಮೇಶ್, ಬದ್ರಿ ಮತ್ತು ವಿಷ್ಣುಕಾಂತ್ ಸೇರಿಕೊಂಡು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸಮರ್ಥ್‍ ಮತ್ತು ಕೃತ್ತಿಕಾ ಗೌಡ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ‘ರಾಣಿ’ ಧಾರಾವಾಹಿ ಖ್ಯಾತಿಯ ಧನ್ವಿ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾಳೆ.

ಇದೊಂದು ಕುಟುಂಬ ಸಮೇತ ಕುಳಿತು ನೋಡಬಹುದಾದಂತಹ ಸಂಸಾರಿಕ ಚಿತ್ರ ಎನ್ನುವ ನಿರ್ದೇಶಕ ಶ್ರೀ, ‘ನಮ್ಮ ಚಿತ್ರದಲ್ಲಿ ತಂದೆ-ಮಗಳ ಬಾಂಧವ್ಯ ಜೊತೆಗೆ ಜೀಪ್ ಕೂಡ ಒಂದು ಪ್ರಮುಖ ಪಾತ್ರವಾಗಿ ಕಾಣಿಸುತ್ತದೆ. ಅಂದುಕೊಂಡಂತಹ ಸಮಯದಲ್ಲೇ ಬಜೆಟ್ ಪ್ಲಾನ್ ಮಾಡಿಕೊಂಡು ಚಿತ್ರವನ್ನು ಮುಗಿಸಿದ್ದೇನೆ. ಸಸ್ಪೆನ್ಸ್ ಥ್ರಿಲ್ಲರ್ ಅಂಶಗಳಿರುವ ಈ ಚಿತ್ರವು ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ. ‘ಶಬರಿ’ ಇದೇ ಅಕ್ಟೋಬರ್ 23 ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ’ ಎಂದರು.

ನಾಯಕ ನಟ ಸಮರ್ಥ್ ಮಾತನಾಡುತ್ತಾ, ‘ನನ್ನ ಮೊದಲ ಚಿತ್ರದಲ್ಲಿ ಒಂದು ಒಳ್ಳೆಯ ಪಾತ್ರ ಸಿಕ್ಕಿದೆ. ಇದು ನನಗೆ ಸದಾ ನೆನಪಿನಲ್ಲಿ ಉಳಿಯುವಂತಹ ಚಿತ್ರವಾಗಲಿದೆ. ನಿರ್ದೇಶಕರು ಹೇಳಿಕೊಟ್ಟಂತೆ ನಾನು ಅಭಿನಯಿಸಿದ್ದೇನೆ. ನಮ್ಮ ತಂದೆ ಕೂಡ ಈ ಚಿತ್ರದ ನಿರ್ಮಾಪಕರಲ್ಲಿ ಒಬ್ಬರು. ಒಂದೊಳ್ಳೆಯ ಚಿತ್ರ ಪ್ರೇಕ್ಷಕರಿಗೆ ನೀಡಲು ಮುಂದಾಗಿದ್ದೇವೆ’ ಎಂದರು.

ಇನ್ನು, ನಾಯಕಿ ಕೃತಿಕಾ ಗೌಡ ಮಾತನಾಡುತ್ತಾ, ‘’ಕಿರಾತಕ’ ಎಂಬ ಕಿರುಚಿತ್ರದಲ್ಲಿ ನಟಿಸಿದ್ದೆ. ಅದನ್ನು ನೋಡಿ ಶ್ರೀ ಅವರು ‘ಶಬರಿ’ ಚಿತ್ರಕ್ಕೆ ನನ್ನನ್ನು ಆಯ್ಕೆ ಮಾಡಿಕೊಂಡರಂತೆ. ನನ್ನ ಪಾತ್ರ ಕೂಡ ಅಷ್ಟೇ ವಿಭಿನ್ನವಾಗಿದೆ’ ಎಂದರು.

‘ಶಬರಿ’ ಚಿತ್ರದಲ್ಲಿ ಎಂ.ಕೆ. ಮಠ, ನೀನಾಸಂ ಅಶ್ವತ್, ಸೀತಾ ಹರ್ಷವರ್ಧನ್, ಯೋಗೇಶ್ ವೀರ್, ಮಂಡ್ಯ ಸಿದ್ದು ಮುಂತಾದವರು ನಟಿಸಿದ್ದಾರೆ. ಬಿ.ಆರ್ ಹೇಮಂತ್ ಕುಮಾರ್ ಸಂಗೀತ, ಸಾಮ್ರಾಟ್ ನಾಗರಾಜ್ ಛಾಯಾಗ್ರಹಣ ಈ ಚಿತ್ರಕ್ಕಿದೆ.

ಎರಡನೇ ವಾರದಲ್ಲಿ 23.65 ಕೋಟಿ ರೂ. ಗಳಿಸಿದ ‘ಪ್ರೇಮದ ಊರಲಿ’

Discover more from KannadaScreens

Subscribe now to keep reading and get access to the full archive.

Continue reading