ಎರಡು ತಲೆಮಾರಿನ ಇಬ್ಬರು ಜನಪ್ರಿಯ ನಟಿಯರು ಒಂದೇ ಚಿತ್ರದಲ್ಲಿ …

ಚಂದನವನ, ಸಿನಿ ಸುದ್ದಿ

‘ಬೇಲ್‍’ ಮತ್ತು ‘ಬೀರಬಲ್‍ – ಕೇಸ್‍ ನಂಬರ್‍ 2’ ಚಿತ್ರಗಳ ನಂತರ ಕೆ.ವಿ.ಎನ್‍ ಪ್ರೊಡಕ್ಷನ್ಸ್ ಸಂಸ್ಥೆಯು ಸದ್ದಿಲ್ಲದೆ ಇನ್ನೊಂದು ಚಿತ್ರದ ನಿರ್ಮಾಣಕ್ಕೆ ಕೈ ಹಾಕಿದೆ. ಈ ಬಾರಿ ಕೆವಿಎನ್‍ ಒಂದೇ ಈ ಚಿತ್ರವನ್ನು ನಿರ್ಮಿಸುತ್ತಿಲ್ಲ. ನಿರ್ಮಾಣದಲ್ಲಿ ಹೇಮಂತ್‍ ಎಂ. ರಾವ್ ಅವರ ದಾಕ್ಷಾಯಿಣಿ ಟಾಕೀಸ್‍ ಸಹ ಕೈಜೋಡಿಸಿದೆ.

ಕನ್ನಡ ಚಿತ್ರರಂಗದ ಎರಡು ತಲೆಮಾರಿನ ಇಬ್ಬರು ಜನಪ್ರಿಯ ನಟಿಯರಾದ ಮಾಲಾಶ್ರೀ ಹಾಗೂ ರುಕ್ಮಿಣಿ ವಸಂತ್ ಒಟ್ಟಿಗೆ ತೆರೆ ಹಂಚಿಕೊಳ್ಳಲು ಸಜ್ಜಾಗಿದ್ದಾರೆ. ಈ ಇಬ್ಬರನ್ನು ಒಂದೇ ಫ್ರೇಮ್‌ನಲ್ಲಿ ಒಗ್ಗೂಡಿಸಿರುವ ‘ಮಂಗಳ ಗೌರಿ’ ಎಂಬ ಚಿತ್ರ ಅಧಿಕೃತವಾಗಿ ಘೋಷಣೆಯಾಗಿದೆ.

ಎರಡು ಬಲಿಷ್ಠ ಮಹಿಳಾ ಪಾತ್ರಗಳ ನಡುವಿನ ರೋಚಕ ಪಯಣವನ್ನು ಒಳಗೊಂಡ ಈ ಚಿತ್ರಕ್ಕೆ ಸದ್ಯ ಭರದಿಂದ ಚಿತ್ರೀಕರಣ ಸಾಗುತ್ತಿದೆ. ರಾಹುಲ್ ಪಿಕೆ ನಿರ್ದೇಶನ ಮಾಡುತ್ತಿರುವ ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಹೇಮಂತ್ ಎಂ. ರಾವ್ ಅವರ ದಾಕ್ಷಾಯಣಿ ಟಾಕೀಸ್ ಜಂಟಿಯಾಗಿ ನಿರ್ಮಿಸುತ್ತಿವೆ.

ಈ ಚಿತ್ರದಲ್ಲಿ ನಟಿ ಮಾಲಾಶ್ರೀ ಅವರು ಇದುವರೆಗೂ ಕಂಡಿರದ ಹೊಚ್ಚ ಹೊಸ ಅವತಾರದಲ್ಲಿ ಪ್ರೇಕ್ಷಕರ ಎದುರು ಬರಲಿದ್ದಾರೆ. ತಮ್ಮ ಸಹಜ ಅಭಿನಯದ ಮೂಲಕ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿರುವ ರುಕ್ಮಿಣಿ ವಸಂತ್, ಮಾಲಾಶ್ರೀ ಜೊತೆ ಸಮಬಲದ ಪಾತ್ರದಲ್ಲಿ ಮಿಂಚಲಿದ್ದಾರೆ. ‘ಸಪ್ತ ಸಾಗರದಾಚೆ ಎಲ್ಲೋ’ ನಂತರ ಹೇಮಂತ್ ಎಂ. ರಾವ್ ಅವರೊಂದಿಗೆ ಹಾಗೂ ‘ಟಾಕ್ಸಿಕ್’ ಚಿತ್ರದ ನಂತರ ಕೆವಿಎನ್ ಪ್ರೊಡಕ್ಷನ್ಸ್ ಜೊತೆಗೆ ರುಕ್ಮಿಣಿ ವಸಂತ್ ಅವರ ಎರಡನೇ ಸಿನಿಮಾವಾಗಿದೆ.

‘ಮಂಗಳಗೌರಿ’ ಚಿತ್ರಕ್ಕೆ ಮಿಧುನ್ ಮುಕುಂದನ್ ಸಂಗೀತ, ಶ್ರೀವತ್ಸನ್ ಸೆಲ್ವರಾಜನ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಸದ್ಯ ಬಿರುಸಿನಿಂದ ಚಿತ್ರೀಕರಣ ಸಾಗುತ್ತಿದ್ದು, ಶೂಟಿಂಗ್ ಮುಕ್ತಾಯದ ಹಂತಕ್ಕೆ ತಲುಪಿದೆ. ಚಿತ್ರತಂಡ ಶೀಘ್ರದಲ್ಲೇ ತೆರೆಗೆ ತರಲು ಸಿದ್ಧತೆ ನಡೆಸುತ್ತಿದೆ.

ವೇಶ್ಯಾವಟಿಕೆಯ ಕುರಿತು ಲೈಟ್ ಹಿಡಿದ ‘ದುನಿಯಾ’ ವಿಜಯ್

Discover more from KannadaScreens

Subscribe now to keep reading and get access to the full archive.

Continue reading