ವಿಶ್ವದ ಸಮಸ್ಯೆಯನ್ನು ಹೊತ್ತು ಬರುತ್ತಿದೆ ‘ಕ್ಯಾಲೆಂಡರ್’; ಟ್ರೇಲರ್ ಬಿಡುಗಡೆ

ಚಂದನವನ, ಸಿನಿ ಸುದ್ದಿ

ಆದರ್ಶ್ ಗುಂಡುರಾಜ್‍ ಈ ಹಿಂದೆ ‘ಸ್ವಾರ್ಥ ರತ್ನ’ ಮತ್ತು ‘ಸೆಕೆಂಡ್‍ ಲೈಫ್‍’ ಎನ್ನುವ ಚಿತ್ರಗಳಲ್ಲಿ ಹೀರೋ ಆಗಿ ನಟಿಸಿದ್ದರು. ಮೂಲತಃ ಚಾರ್ಟರ್ಡ್ ಅಕೌಂಟೆಂಟ್‍ ಆಗಿರುವ ಆದರ್ಶ್‍, ಇದೀಗ ಹೊಸ ಚಿತ್ರದಲ್ಲಿ ನಾಯಕನಾಗಿರುವುದಷ್ಟೇ ಅಲ್ಲ, ಆ ಚಿತ್ರವನ್ನು ನಿರ್ಮಿಸಿದ್ದಾರೆ. ಹೆಸರು ಕ್ಯಾಲೆಂಡರ್‍. ಈ ಚಿತ್ರವು ಇದೀಗ ಏಪ್ರಿಲ್‍ 10ರಂದು ರಾಜ್ಯಾದ್ಯಂತ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ.

ರನ್ನಿಂಗ್‍ ಹಾರ್ಸ್ ಕ್ರಿಯೇಷನ್ಸ್ ಬ್ಯಾನರ್‍ ಅಡಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ನವೀನ್‍ ಶಕ್ತಿ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ರಮೇಶ್‍ ಕೊಯಿರಾ ಅವರ ಛಾಯಾಗ್ರಹಣ ಮತ್ತು ಸುನಾದ್‍ ಗೌತಮ್‍ ಸಂಗೀತವಿರುವ ಈ ಚಿತ್ರದಲ್ಲಿ ನಿವಿಷ್ಕ ಪಾಟೀಲ್ ಹಾಗೂ ಸುಶ್ಮಿತ ನಾಯಕಿಯರಾಗಿ ನಟಿಸಿದ್ದಾರೆ. ಮಾಲಾಶ್ರೀ ಅವರು ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ರಮೇಶ್ ಇಂದಿರಾ, ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮ್ಮಿನಾಡು, ಸುಚೇಂದ್ರ ಪ್ರಸಾದ್, ಚಂದ್ರಪ್ರಭ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್‍ ಬಿಡುಗಡೆಯಾಗಿದೆ.

ಇದೊಂದು ಮಹಿಳಾ ಪ್ರಧಾನ ಚಿತ್ರ ಎನ್ನುವ ಆದರ್ಶ್‍, ‘ಕನ್ನಡ ಮತ್ತು ಹಿಂದಿಯಲ್ಲೂ ಬಿಡುಗಡೆ ಮಾಡುತ್ತಿದ್ದೇವೆ. ಹಿಂದಿಗೆ ಡಬ್‍ ಮಾಡಿ, ಆ ವರ್ಷನ್‍ ಸಹ ಬಿಡುಗಡೆಗೆ ಸಿದ್ಧವಿದೆ. ವಿಜಯ್‍ ಕಿರಗಂದೂರು ಅವರ ವಿಕೆ ಫಿಲಂಸ್‍ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿದೆ. ಇಡೀ ಕುಟುಂಬ ಕೂತು ನೋಡುವ ಚಿತ್ರ. ಎಲ್ಲರೂ ನೋಡಿದರೆ ದೊಡ್ಡ ಬದಲಾವಣೆ ಆಗುತ್ತದೆ. ಇದೊಂದು ಯೂನಿವರ್ಸಲ್‍ ವಿಷಯ. ಇದುವರೆಗೂ ಯಾರೂ ಸಿನಿಮಾ ಮಾಡಿರಲಿಲ್ಲ’ ಎಂದರು.

ಪ್ರತಿ ಮಹಿಳೆಗೂ ಕನೆಕ್ಟ್ ಆಗುವ ಕಥೆ ಇದು ಎನ್ನುವ ಆದರ್ಶ್, ‘ಮಹಿಳೆಯರ ಸುತ್ತುವ ಕಥೆ ಇದು. ಅದರಿಂದ ನಾವು ತಿಳಿದುಕೊಳ್ಳುವ ವಿಷಯವೂ ಇದೆ. ಪ್ರಪಂಚದಲ್ಲಿ ಎಲ್ಲಾ ಮಹಿಳೆಯರಿಗೂ ತಲುಪುವಂತಹ ಚಿತ್ರ. ನಾನಿಲ್ಲಿ ವೈದ್ಯನ ಪಾತ್ರ ಮಾಡಿದ್ದೇನೆ. ನಾನು ಕಥೆ ಬರೆಯಬೇಕು ಎಂದು ಬರೆಯಲಿಲ್ಲ. ನನ್ನ ಸುತ್ತಮುತ್ತ ನೋಡಿದ ಘಟನೆಗಳನ್ನು ಬೇಸ್‍ ಮಾಡಿ, ಈ ಕಥೆ ಬರೆದೆ. ಅದಕ್ಕೆ ನವೀನ್‍ ಶಕ್ತಿ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ’ ಎಂದು ಮಾಹಿತಿ ಕೊಟ್ಟರು.

ಲತಃ ರಂಗಭೂಮಿಯವರಾದ ನವೀನ್‍ ಶಕ್ತಿ, ಇದಕ್ಕೂ ಮೊದಲು ಐದು ಸಾವಿರಕ್ಕೂ ಅಧಿಕ ಬೀದಿ ನಾಟಕಗಳನ್ನು ಮಾಡಿದ್ದಾರಂತೆ.  ‘ನಿರ್ದೇಶಕನಾಗಿ ಇದು ಮೊದಲ ಚಿತ್ರ. “ಕ್ಯಾಲೆಂಡರ್” ನಲ್ಲಿ ಎಲ್ಲರ ಮನಸ್ಸಿಗೂ ಹತ್ತಿರವಾಗುವ ಚಿತ್ರವಾಗಲಿದೆ.‌ ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ’ ಎಂದರು ನಿರ್ದೇಶಕ ನವೀನ್ ಶಕ್ತಿ.

ಈ ಚಿತ್ರದ ಹಾಡುಗಳು ಮತ್ತು ಟ್ರೇಲರ್‍ ಆನಂದ್‍ ಆಡಿಯೋ ಯೂಟ್ಯೂಬ್‍ ಚಾನಲ್‍ನಲ್ಲಿ ಬಿಡುಗಡೆಯಾಗಿದೆ.

 

ಇಡೀ ಚಿತ್ರದಲ್ಲಿ ಕಂಡಿದ್ದು ರಣವೀರ್ ಕೂದಲು ಮಾತ್ರ; ‘ದುರಂಧರ್ 2’ ಬಗ್ಗೆ ರಮ್ಯಾ ವಿಮರ್ಶೆ

Latest Posts

Discover more from KannadaScreens

Subscribe now to keep reading and get access to the full archive.

Continue reading