ರಣವೀರ್ ಸಿಂಗ್ ಅಭಿನಯದ ‘ದುರಂಧರ್ 2’ ಚಿತ್ರ ಹೊಸ ದಾಖಲೆ ಬರೆದಿದೆ. ಗುರುವಾರ (ಮಾರ್ಚ್ 19) ಚಿತ್ರ ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದ್ದು. ಬುಧವಾರ ಸಂಜೆ 5 ಗಂಟೆಯಿಂದಲೇ ದೇಶದ ಹಲವೆಡೆ ಪೇಯ್ಡ್ ಪ್ರೀಮಿಯರ್‍ಗಳು ನಡೆಯಲಿವೆ. ಈಗಾಗಲೇ ಪೇಯ್ಡ್ ಪ್ರೀಮಿಯರ್ ಮತ್ತು ಮೊದಲ ದಿನದ ಅಡ್ವಾನ್ಸ್ ಬುಕ್ಕಿಂಗ್‍ನಿಂದಾಗಿ 12.5 ಲಕ್ಷ ಟಿಕೆಟ್‍ಗಳು ಮಾರಾಟವಾಗಿರುವ ಸುದ್ದಿ ಇದೆ.
ಹೌದು, ‘ದುರಂಧರ್ 2’ ಚಿತ್ರದ 12.5 ಲಕ್ಷ ಟಿಕೆಟ್‍ಗಳು ಇದುವರೆಗೂ ಮಾರಾಟವಾಗಿವೆಯಂತೆ. ಪೇಯ್ಡ್ ಪ್ರೀವ್ಯೂಗಳು ಮತ್ತು ಮೊದಲ ದಿನದ ಮುಂಗಡ ಮಾರಾಟವನ್ನು ಒಟ್ಟುಗೂಡಿಸಿದರೆ, ‘ದುರಂಧರ್ 2’ ಈಗಾಗಲೇ ಭಾರತದಲ್ಲಿ ಸುಮಾರು 70 ಕೋಟಿ ರೂಪಾಯಿಗಳ ಗಳಿಕೆ ಮಾಡಿದೆ. ಮೊದಲೆರೆಡು ದಿನಗಳ ಕಾಲ ದೇಶಾದ್ಯಂತ 15,000ಕ್ಕೂ ಹೆಚ್ಚು ಪ್ರದರ್ಶನಗಳು ನಡೆಯಲಿದ್ದು, ಇನ್ನಷ್ಟು ಪರದೆಗಳನ್ನು ಸೇರಿಸಲಾಗುತ್ತಿದೆ. ಮುಂಬೈ, ಪುಣೆ ಮತ್ತು ಅಹಮದಾಬಾದ್ ಮುಂತಾದ ಪ್ರಮುಖ ನಗರಗಳ ಮಲ್ಟಿಪ್ಲೆಕ್ಸ್ ಚೇನ್‌ಗಳು ಈಗ ಮಧ್ಯರಾತ್ರಿ ನಂತರದ ಶೋಗಳನ್ನು ಸೇರಿಸಲು ಪ್ರಾರಂಭಿಸಿವೆ. ಹಾಗಾಗಿ, ಗುರುವಾರ ಬೆಳಿಗ್ಗೆ 2 ಗಂಟೆಯಿಂದಲೇ ಪ್ರದರ್ಶನ ಪ್ರಾರಂಭವಾಗಲಿವೆ.
ಗುರುವಾರ ಬೆಳಿಗ್ಗೆ 2:15 ರಿಂದ 5:30 ರವರೆಗಿನ ಸಮಯದಲ್ಲಿ ಹಲವು ಪ್ರದರ್ಶನಗಳು ನಡೆಯಲಿವೆ. ‘ದುರಂಧರ್ 2’ ಚಿತ್ರದ ಅವಧಿ 3 ಗಂಟೆ 55 ನಿಮಿಷಗಳ ಅವಧಿ ಇದ್ದು, ಅದೇ ಕಾರಣಕ್ಕೆ ಮೊದಲ ದಿನ ಮುಂಜಾನೆಯಿಂದಲೇ ಹೆಚ್ಚುವರಿ ಪ್ರದರ್ಶನ ಪ್ರಾರಂಭಿಸಲಾಗುತ್ತಿದೆ. ಶುಕ್ರವಾರದಿಂದ ಎಂದಿನಂತೆ ದಿನಕ್ಕೆ ನಾಲ್ಕು ಪ್ರದರ್ಶನಗಳು ನಡೆಯಲಿವೆ. ಮೊದಲ ದಿನದ ಮುಂಗಡ ಮಾರಾಟ ಮತ್ತು ಪೇಯ್ಡ್ ಪ್ರೀಮಿಯರ್‍ಗಳ ಟಿಕೆಟ್ ಮಾರಾಟವನ್ನು ಒಟ್ಟುಗೂಡಿಸಿದರೆ, ಚಿತ್ರ ಜಗತ್ತಿನಾದ್ಯಂತ 100 ಕೋಟಿ ರೂ. ಕ್ಲಬ್ ಸಲೀಸಾಗಿ ಸೇರಲಿದೆ.
‘ದುರಂಧರ್ 2’ ಚಿತ್ರವು ‘ದುರಂಧರ್’ನ ಮುಂದುವರೆದ ಭಾಗವಾಗಿದ್ದು, ಮೊದಲ ಚಿತ್ರವು ಕಳೆದ ವರ್ಷದ ಡಿಸೆಂಬರ್ 05ರಂದು ಬಿಡುಗಡೆಯಾಗಿ, ಜಗತ್ತಿನಾದ್ಯಂತ ಯಶಸ್ವಿ ಪ್ರದರ್ಶನ ಕಾಣುವುದರ ಜೊತೆಗೆ ಸಾವಿರ ಕೋಟಿ ಕ್ಲಬ್ ಸೇರಿತ್ತು. ಆದಿತ್ಯ ಧರ್ ನಿರ್ದೇಶನದ ಈ ಚಿತ್ರದಲ್ಲಿ ರಣವೀರ್ ಸಿಂಗ್, ಅಕ್ಷಯ್ ಖನ್ನಾ, ಸಂಜಯ್ ದತ್, ರಾಕೇಶ್ ಬೇಡಿ, ಅರ್ಜುನ್ ರಾಮ್‍ಪಾಲ್ ಮುಂತಾದವರು ಅಭಿನಯಿಸಿದ್ದಾರೆ.
ಏನಾಗಿದೆ ಪ್ರೇಮ್‍ಗೆ? ಈ ವರ್ಷದ ಅಶ್ಲೀಲ ಗೀತರಚನೆ ಪ್ರಶಸ್ತಿ ಈ ಹಾಡಿಗೆ ಕೊಡಬಹುದೇನೋ?


