‘ಓ ಮುದ್ದು ಮಗಳೇ …’ ಎಂದು ಹಾಡಿದ ಕೃಷ್ಣ; ‘ಲವ್ ಮಾಕ್ಟೇಲ್ 3’ ಚಿತ್ರದ ಹಾಡು ಬಿಡುಗಡೆ

ಚಂದನವನ, ಸಿನಿ ಸುದ್ದಿ

ಪ್ರೇಮಗೀತೆಗಳು, ಐಟಂ ಸಾಂಗ್‍ಗಳನ್ನು ನೋಡಿ, ಕೇಳಿ ಸುಸ್ತಾಗಿದ್ದ ಕನ್ನಡಿಗರಿಗೆ, ಇದೀಗ ಮಗಳ ಬಂಧದ ಕುರಿತಾದ ಚೆಂದದ ಹಾಡೊಂದನ್ನು ‘ಡಾರ್ಲಿಂಗ್‍’ ಕೃಷ್ಣ ತಂದಿದ್ದಾರೆ. ತಮ್ಮ ಹೊಸ ಚಿತ್ರವಾದ ‘ಲವ್‍ ಮಾಕ್ಟೇಲ್‍ 3’ನಲ್ಲಿನ ಮಗಳ ಕುರಿತಾದ ಒಂದು ಹಾಡನ್ನು ಅವರು ಬಿಡುಗಡೆ ಮಾಡಿದ್ದಾರೆ.

‘ನಕ್ಕರೂ ಚೆಂದ, ಅತ್ತರೂ ಚೆಂದ, ಮುದ್ದಾದ ಬಂಧ, ಈ ನನ್ನ ಕಂದ ಹೂದೋಟದಿಂದ ಹೂವಂತೆ ಬಂದ ಬದುಕಿನ ಸಿಹಿ, ಈ ನನ್ನ ಕಂದ ಮುದ್ದಾಡುವಾಸೆ ಮುದ್ದಾದ ಕೂಸೇ ಹೆಗಲಲ್ಲಿ ಹೊತ್ತು ಸುತ್ತಾಡುವಾಸೆ, ನನ್ನೆಲ್ಲಾ ನೋವನು ನೀಗಿಸೋ ಹೂ ಮನಸೇ ಓ ಮುದ್ದು ಮಗಳೇ ಮುದ್ದಾದ ಮಗಳೇ ನೀ ನನ್ನ ಬಾಳಿಗೆ ಅದೃಷ್ಟ ಮಗಳೇ ಓ ಮುದ್ದು ಮಗಳೇ ಮುತ್ತಂತ ಮಗಳೇ ಓ ಮುದ್ದು ಮಗಳೇ …’ ಎಂಬ ಹಾಡು ಇದೀಗ ಆನಂದ್‍ ಆಡಿಯೋದಲ್ಲಿ ಬಿಡುಗಡೆಯಾಗಿದೆ.

ಅಪ್ಪ-ಮಗಳ ಬಂಧವನ್ನು ಸಮರ್ಥವಾಗಿ ಹಿಡಿದಿಟ್ಟುಕೊಂಡಿರುವ ಸಾಹಿತ್ಯ, ಅದಕ್ಕೊಪ್ಪುವ ಸಂಗೀತದ ಮೂಲಕ ಈ ಹಾಡು ಕೇಳುಗರನ್ನು ಸೆಳೆಯವಂತಿದೆ. ಅರುಣ್ ನಾಯಕ್ ಬರೆದಿರುವ ಈ ಹಾಡಿಗೆ ನಕುಲ್ ಅಭಯಂಕರ್ ಸಂಗೀತ ಸಂಯೋಜಿಸಿದ್ದು, ವಿಜಯ್ ಪ್ರಕಾಶ್ ಧ್ವನಿಯಾಗಿದ್ದಾರೆ. ಈ ಹಾಡು ಒಟ್ಟಾರೆ ಕಥೆಯ ಸೂಕ್ಷ್ಮ ಬಿಂದುವೊಂದನ್ನು ಪ್ರೇಕ್ಷಕರಿಗೆ ದಾಟಿಸುವಂತಿದೆ.

ಕ್ರಿಸ್‌ಮಿ ಬ್ಯಾನರಿನಡಿಯಲ್ಲಿ ಕೃಷ್ಣ ಮತ್ತು ಮಿಲನಾ ನಾಗರಾಜ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕೃಷ್ಣ, ಮಿಲನಾ ನಾಗರಾಜ್, ಸಂವೃತ, ಅಮೃತಾ ಅಯ್ಯಂಗಾರ್, ದಿಲೀಪ್ ರಾಜ್, ಶ್ವೇತಾ ಪ್ರಸಾದ್, ರಚೆಲ್ ಡೇವಿಡ್, ನಯೇರಾ, ಜಗದೀಶ್, ಅಭಿಲಾಶ್, ಗಿರಿರಾಜ್, ದಳಪತಿ ಮುಂತಾದವರು ನಟಿಸಿರುವ ಈ ಚಿತ್ರಕ್ಕೆ ಶ್ರೀ ಕ್ರೇಜಿ ಮೈಂಡ್ಸ್ ಛಾಯಾಗ್ರಹಣ ಮತ್ತು ಸಂಕಲನ, ನಕುಲ್ ಅಭಯಂಕರ್ ಸಂಗೀತವಿದೆ.

ಅಂದ ಹಾಗೆ, ‘ಲವ್ ‍ಮಾಕ್ಟೇಲ್‍ 3’ ಚಿತ್ರವು ಯುಗಾದಿ ಪ್ರಯುಕ್ತ ಮಾರ್ಚ್ 19ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

‘ಬಾಸ್‍’ ಟೀಸರ್ ಬಿಡುಗಡೆ; ಚಿತ್ರಕ್ಕೆ ದರ್ಶನ್ ಪ್ರಕರಣ ಸ್ಫೂರ್ತಿಯಾ?

Latest Posts

Discover more from KannadaScreens

Subscribe now to keep reading and get access to the full archive.

Continue reading