ಈ ಚಿತ್ರಕ್ಕೆ ಮಹಾಭಾರತ ಸ್ಫೂರ್ತಿಯಂತೆ; ‘ಶಿಖಂಡಿ’ ಮೋಷನ್ ಪೋಸ್ಟರ್ ಬಿಡುಗಡೆ

ಚಂದನವನ, ಸಿನಿ ಸುದ್ದಿ

ಈ ಹಿಂದೆ ‘ಮಾರಕಾಸ್ತ್ರ’ ಚಿತ್ರವನ್ನು ನಿರ್ದೇಶಿಸಿದ್ದ ಗುರುಮೂರ್ತಿ ವಿ, ಈಗ ವಿಭಿನ್ನ ಕಥಾಹಂದರ ಹೊಂದಿರುವ ‘ಶಿಖಂಡಿ’ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರದ ಚಿತ್ರೀಕರಣ ಈಗಾಗಲೇ ಮುಕ್ತಾಯವಾಗಿದ್ದು, ಇತ್ತೀಚೆಗೆ ಚಿತ್ರದ ಮೋಷನ್‍ ಪೋಸ್ಟರ್‍ ಬಿಡುಗಡೆಯಾಗಿದೆ.

ಪೋಲಾ ಪ್ರವೀಣ್ ಕುಮಾರ್ ತಮ್ಮ ಪೋಲಾ ಮೂವೀಸ್ ಮೂಲಕ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇತ್ತೀಚೆಗೆ ಈ ಚಿತ್ರದ ಮೋಷನ್ ಪೋಸ್ಟರ್ ಅನಾವರಣವಾಯಿತು. ನಿರ್ಮಾಪಕ ಸಂಜಯ್ ಗೌಡ ಹಾಗೂ ನಿರ್ದೇಶಕರಾದ ಜಡೇಶ್ ಕೆ. ಹಂಪಿ, ನವೀನ್ ರೆಡ್ಡಿ ‘ಶಿಖಂಡಿ’ ಚಿತ್ರದ ಮೋಷನ್ ಪೋಸ್ಟರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

ಮಹಾಭಾರತದಲ್ಲಿ ಬರುವ ಶಿಖಂಡಿ ಪಾತ್ರವೇ ನಮ್ಮ ಚಿತ್ರದ ಕಥೆಗೆ ಸ್ಪೂರ್ತಿ ಎಂದು ಮಾತನಾಡಿದ ನಿರ್ದೇಶಕ ಗುರುಮೂರ್ತಿ, ‘ಮಹಾಭಾರತದಲ್ಲಿ ಶಿಖಂಡಿ ಪುನರ್ಜನ್ಮ ಪಡೆದು ತನ್ನ ಸೇಡನ್ನು ತೀರಿಸಿಕೊಳ್ಳುವುದನ್ನು ನಾವೆಲ್ಲಾ ಕೇಳಿದ್ದೇವೆ. ಈ ಅಂಶವನ್ನೇ ಪ್ರಧಾನವಾಗಿಟ್ಟುಕೊಂಡು ‘ಶಿಖಂಡಿ’ ಚಿತ್ರದ ಕಥೆ ಹೆಣೆಯಲಾಗಿದೆ. ಸಸ್ಪೆನ್ಸ್, ಥ್ರಿಲ್ಲರ್, ಹಾರಾರ್, ಕಾಮಿಡಿ ಸೇರಿದಂತೆ ಎಲ್ಲಾ ಅಂಶಗಳು ಇರುವ ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರವಿದು. ಕಥೆ ಕೇಳಿದ ತಕ್ಷಣ ಮೆಚ್ಚಿಕೊಂಡ ನಿರ್ಮಾಪಕ ಪೋಲಾ ಪ್ರವೀಣ್ ಕುಮಾರ್ ಅವರು ನಿರ್ಮಾಣಕ್ಕೆ ಮುಂದಾದರು. ಮೇ ವೇಳೆಗೆ ಸಿನಿಮಾ ಬಿಡುಗಡೆ ಮಾಡುವ ಯೋಜನೆ ಇದೆ’ ಎಂದರು.

ಈ ಚಿತ್ರ ನಿರ್ಮಿಸಲು ಬಳ್ಳಾರಿ ಮೂಲದ ಪ್ರವೀಣ್‍ ಕುಮಾರ್‍ ಅವರಿಗೆ ಎರಡು ಕಾರಣಗಳಿವೆಯಂತೆ. ‘ಒಂದು ಕಥೆ. ಮತ್ತೊಂದು ವಿಶೇಷ ಚೇತನರಾಗಿದ್ದರೂ ನಿರ್ದೇಶಕ ಗುರುಮೂರ್ತಿ ಅವರಿಗೆ ಸಿನಿಮಾ ಮೇಲಿರುವ ಪ್ರೀತಿ. ಒಂದೊಳ್ಳೆಯ ಚಿತ್ರ ನಿಮ್ಮ ಮುಂದೆ ತರುತ್ತಿದ್ದೇವೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ’ ಎಂದು ನಿರ್ಮಾಪಕ ಪೋಲಾ ಪ್ರವೀಣ್ ಕುಮಾರ್ ತಿಳಿಸಿದರು.

ಚಿತ್ರದ ನಾಯಕ ಯುವರಾಜ್ ಗೌಡಗೆ ಚಿತ್ರದ ಶೀರ್ಷಿಕೆ ಹೇಳಿದ ತಕ್ಷಣ ಆಶ್ಚರ್ಯವಾಯಿತಂತೆ. ‘ಹಾಗೆಯೇ ಕಥೆ ಕೇಳಿ ಸಂತೋಷವಾಯಿತು. ನಾನು ಮೈಸೂರಿನವನು. ನಾಯಕನಾಗಿ ಮೊದಲ ಚಿತ್ರ. ಸೂರ್ಯ ನನ್ನ ಪಾತ್ರದ ಹೆಸರು’ ಎಂದರು

‘ಶಿಖಂಡಿ’ ಚಿತ್ರದಲ್ಲಿ ಯುವರಾಜ್ ಗೌಡ ಮತ್ತು ಖ್ಯಾತಿ ನಾಯಕ-ನಾಯಕಿಯಾಗಿ ನಟಿಸುತ್ತಿದ್ದು, ಮಿಕ್ಕಂತೆ ನಿಖಿತಾ ಸ್ವಾಮಿ, ನೀತೂ, ರಘು ರಾಮನಕೊಪ್ಪ, ದೀಪಕ್ ಶೆಟ್ಟಿ, ವಿಜಯ್ ಚಂಡೂರ್ ಮುಂತಾದವರು ನಟಿಸಿದ್ದಾರೆ. ಸ್ವಾಮಿ ಛಾಯಾಗ್ರಹಣ, ಮಂಜು ಕವಿ ಸಂಗೀತ ಈ ಚಿತ್ರಕ್ಕಿದೆ.

‘ಆಲ್ಪಾ’ ಚಿತ್ರ ವಿಮರ್ಶೆ – ಪ್ರತೀಕಾರಕ್ಕೆ ಹಲವು ಮುಖಗಳು

Latest Posts

Discover more from KannadaScreens

Subscribe now to keep reading and get access to the full archive.

Continue reading