ಸಂಹಿತಾಗೆ ದೆವ್ವದ ಕಾಟ; ಫೆ.20ಕ್ಕೆ ‘ಮಿಕ್ಸಿಂಗ್‍ ಪ್ರೀತಿ’ ಚಿತ್ರ ಬಿಡುಗಡೆ

ಚಂದನವನ, ಸಿನಿ ಸುದ್ದಿ

‘ಮೆಜೆಸ್ಟಿಕ್‍ 2’, ‘ಆಯುಧ’, ‘ಸ್ವಾಭಿಮಾನಿ’, ‘ಯಾಕೋ ಬೇಜಾರು’, ‘ವಿದೂಷಕ’ ಮುಂತಾದ ಚಿತ್ರಗಳ ಬಿಡುಗಡೆಗೆ ಕಾದಿರುವ ನಟಿ ಮತ್ತು ಮಾಡಲ್‍ ಸಂಹಿತಾ, ಸದ್ದಿಲ್ಲದೆ ಹೊಸದೊಂದು ಚಿತ್ರದೊಂದಿಗೆ ವಾಪಸ್ಸಾಗಿದ್ದಾರೆ. ಕಳೆದ ವರ್ಷ ಸೃಜನ್‍ ಅಭಿನಯದ ಮತ್ತು ನಿರ್ದೇಶನದ ‘ಜಿಎಸ್‍ಟಿ’ ಮತ್ತು ಅದರ ಹಿಂದಿನ ವರ್ಷ ‘ಲಂಗೋಟಿ ಮ್ಯಾನ್’ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಸಂಹಿತಾ, ಇದೀಗ ಹಾರರ್‍ ಚಿತ್ರವೊಂದರ ಮೂಲಕ ವಾಪಸ್ಸಾಗುತ್ತಿದ್ದಾರೆ.

ಎನ್‍.ಪಿ. ಇಸ್ಮಾಯಿಲ್‍ ನಿರ್ದೇಶನದ ‘ಮಿಕ್ಸಿಂಗ್ ಪ್ರೀತಿ’, ಫೆ. 20ರಂದು ಬಿಡುಗಡೆಯಾಗುತ್ತಿದೆ. ಇದೊಂದು ಹಾರರ್‍ ಚಿತ್ರವಾಗಿದ್ದು, ಈ ಚಿತ್ರದಲ್ಲಿ ಸಂಹಿತಾ ವಿನ್ಯಾ ನಾಯಕಿಯಾಗಿ ನಟಿಸಿದ್ದಾರೆ. ಒಂದು ರೆಸಾರ್ಟ್ ನಲ್ಲಿ ನಡೆಯುವ ಹಾರರ್ ಕಥೆ ಇದಾಗಿದ್ದು, ಮೂರು ಜನ ಸ್ನೇಹಿತರು ಆ ರೆಸಾರ್ಟ್‍ಗೆ ಹೋದಾಗ, ಅಲ್ಲಿ ಏನೆಲ್ಲಾ ಅನುಭವಿಸುತ್ತಾರೆ ಮತ್ತು ಹೇಗೆ ಹೊರಗೆ ಬರುತ್ತಾರೆ ಎಂಬುದನ್ನು ಚಿತ್ರದಲ್ಲಿ ಹೇಳಲಾಗಿದೆ.

ಈ ನಡುವೆ ಚಿತ್ರದಲ್ಲಿ ಒಂದು ಪ್ರೇಮಕಥೆಯೂ ಇದೆಯಂತೆ. ಕೇರಳ, ಚೆನ್ನೈ ಹಾಗೂ ಬೆಂಗಳೂರಲ್ಲಿ ಚಿತ್ರೀಕರಣ‌ ನಡೆಸಲಾಗಿದೆ. ರೆಸಾರ್ಟ್ ನಲ್ಲಿ ರಾತ್ರಿ ವೇಳೆ ಶೂಟ್ ಮಾಡುವಾಗ ಸಂಹಿತಾಗೆ ನಿಜವಾದ ಹಾರರ್ ಅನುಭವ ಆಯ್ತಂತೆ.

‘ಮಿಕ್ಸಿಂಗ್ ಪ್ರೀತಿ’ ಚಿತ್ರದಲ್ಲಿ ಜನಪ್ರಿಯ ಮಲಯಾಳಂ ನಟ ಸಿಂಟೊ ಜಾಕೋಬ್ ನಾಯಕನಾಗಿ ನಟಿಸಿದ್ದಾರೆ. ಉಳಿದಂತೆ ಪ್ರಿಯಾ ಪವನ್, ದಿವ್ಯ ಜಸ್ಮಿತಾ ನಟಿಸಿದ್ದಾರೆ. ಈ ಚಿತ್ರಕ್ಕೆ ರಾಜೇಶ್ ಮೋಹನ್ ಮತ್ತು ಗಣೇಶ್ವರನ್ ಅವರ ಸಂಗೀತ, ಸಾಧಿಕ್ ಕಬೀರ್ ಅವರ ಛಾಯಾಗ್ರಹಣವಿದೆ. ಈ ಚಿತ್ರವು ತಮಿಳಲ್ಲಿ ‘ಮಿಕ್ಸಿಂಗ್ ಕಾದಲ್’ ಎಂಬ ಹೆಸರಲ್ಲಿ ಬಿಡುಗಡೆಯಾಗುತ್ತಿದೆ.

ದೇಶ ವಿದೇಶಗಳ 75ಕ್ಕೂ ಹೆಚ್ಚು ಫ್ಯಾಷನ್ ಷೋಗಳಲ್ಲಿ ಶೋಸ್ಟಾಪರ್ ಆಗಿ ಭಾಗವಹಿಸಿರುವ ಸಂಹಿತಾ ವಿನ್ಯಾ, ಕನ್ನಡ ಹಾಗೂ ತಮಿಳು ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದು, ಇದೇ ಮೊದಲ ಬಾರಿಗೆ ಹಾರರ್, ಥ್ರಿಲ್ಲರ್ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ‘ಹಾಲು ತುಪ್ಪ’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಸಂಹಿತಾ ವಿನ್ಯಾ,‌ ‘ಸೀತಮ್ಮ ಬಂದಳು ಸಿರಿಮಲ್ಲಿಗೆ ತೊಟ್ಟು’, ‘ಅಮೃತ ಘಳಿಗೆ’, ‘ವಿಷ್ಣು ಸರ್ಕಲ್’ ಮುಂತಾದ ಕನ್ನಡ, ತೆಲುಗು, ತಮಿಳು ಸೇರಿದಂತೆ 18ಕ್ಕೂ ಹೆಚ್ಚು ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಎರಡನೇ ಕೇಸಿನ ಜೊತೆ ಬಂದ ಸೀತಾರಾಮ್‍; ಫೆ.20ರಂದು ಚಿತ್ರ ಬಿಡುಗಡೆ

Latest Posts

Discover more from KannadaScreens

Subscribe now to keep reading and get access to the full archive.

Continue reading