ಒಂದು ರೂಪಾಯಿಗೆ ಸೀತಾರಾಮ್‍ನೇ ಎರಡೇ ಕೇಸ್‍ ನೋಡಿ …

ಚಂದನವನ, ಸಿನಿ ಸುದ್ದಿ

ವಿಜಯ್‍ ರಾಘವೇಂದ್ರ ಅಭಿನಯದ ‘ಸೆಕೆಂಡ್‍ ಕೇಸ್‍ ಆಫ್‍ ಸೀತಾರಾಮ್‍’ ಚಿತ್ರವು ಫೆಬ್ರವರಿ 20ರಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಪೇಯ್ಡ್ ಪ್ರೀಮಿಯರ್‍ಗಳು ಸೋಮವಾರದಿಂದ ಪ್ರಾರಂಭವಾಗಿದ್ದು, ಕೇವಲ ಒಂದು ರೂಪಾಯಿಗೆ ಚಿತ್ರವನ್ನು ನೋಡಬಹುದು.

ಹೌಡು, ‘ಸೆಕೆಂಡ್‍ ಕೇಸ್‍ ಆಫ್‍ ಸೀತಾರಾಮ್‍’ ಚಿತ್ರವನ್ನು ಆಯ್ದ ನಗರಗಳ, ಆಯ್ದ ಚಿತ್ರಮಂದಿರಗಳಲ್ಲಿ ಕೇವಲ ಒಂದು ರೂಪಾಯಿಗೆ ನೋಡಬಹುದು. ಈಗಾಗಲೇ ಈ ಪೇಯ್ಡ್ ಪ್ರೀಮಿಯರ್‍ ಬುಕ್ಕಿಂಗ್‍ ಶುರುವಾಗಿದ್ದು, ಸೋಮವಾರ ಸಂಜೆ ಬೆಂಗಳೂರಿನ ವಿಕ್ಟರಿ ಸಿನಿಮಾಸ್‍ನಲ್ಲಿ 7.30ಕ್ಕೆ ಪ್ರದರ್ಶನ ನಡೆಯಲಿದೆ. ಮಂಗಳವಾರ (ಫೆಬ್ರವರಿ 17) ಮೈಸೂರಿನ ಡಿಆರ್‍ಸಿ ಸಿನಿಮಾಸ್‍ನಲ್ಲಿ, ಬುಧವಾರ (ಫೆಬ್ರವರಿ 18) ಶಿವಮೊಗ್ಗದ ಭಾರತ್‍ ಸಿನಿಮಾಸ್‍ನಲ್ಲಿ, ಗುರುವಾರ (ಫೆಬ್ರವರಿ 19) ಬೆಂಗಳೂರಿನ ವಿಕ್ಟರಿ, ಮೂವೀ ಟೈಮ್‍ ಮತ್ತು ಮಂಗಳೂರಿನ ಭಾರತ್‍ ಸಿನಿಮಾಸ್‍ನಲ್ಲಿ ರಾತ್ರಿ 7.30ಕ್ಕೆ ಚಿತ್ರದ ಪೇಯ್ಡ್ ಪ್ರೀಮಿಯರ್‍ ಪ್ರದರ್ಶನ ನಡೆಯಲಿದೆ.

ಈಗಾಗಲೇ ಚಿತ್ರದ ಪೇಯ್ಡ್ ಪ್ರೀಮಿಯರ್‍ ಪ್ರದರ್ಶನಗಳ ಬುಕ್ಕಿಂಗ್‍ ಬುಕ್‍ ಮೈ ಶೋನಲ್ಲಿ ಪ್ರಾರಂಭವಾಗಿದ್ದು, ಬಹುತೇಕ ಟಿಕೆಟ್‍ಗಳು ಮುಕ್ತಾಯವಾಗಿದೆ. ಚಿತ್ರದ ಟಿಕೆಟ್‍ ಒಂದು ರೂಪಾಯಿಯಾದರೂ, ಬುಕ್‍ ಮೈ ಶೋನ ಸರ್ವೀಸ್‍ ಚಾರ್ಚ್ ಸೇರಿ ಒಟ್ಟಾರೆ ಟಿಕೆಟ್‍ ಬೆಲೆ 18 ರೂ.ನಷ್ಟಾಗುತ್ತದೆ. ಪಿವಿಆರ್‍, ಸಿನೆಪೊಲಿಸ್‍ ಮುಂತಾದ ಜನಪ್ರಿಯ ಮಲ್ಟಿಪ್ಲೆಕ್ಸ್ಗಳನ್ನು ಹೊರತುಪಡಿಸಿ ಖಾಸಗೀ ಚಿತ್ರಮಂದಿರಗಳಲ್ಲಿ ಈ ಪೇಯ್ಡ್ ಪ್ರದರ್ಶನ ನಡೆಯಲಿದೆ.

ಈ ಹಿಂದೆ ‘ಸೀತಾರಾಮ್‍ ಬಿನಾಯ್‍ – ಕೇಸ್‍ ನಂಬರ್‍ 18’ ಮತ್ತು ‘ಕೇಸ್‍ ಆಫ್‍ ಕೊಂಡಾನ’ ಚಿತ್ರಗಳನ್ನು ಬರೆದು ನಿರ್ದೇಶಿಸಿದ್ದ ದೇವಿ ಪ್ರಸಾದ್‍ ಶೆಟ್ಟಿ, ಈ ಮುಂದುವರೆದ ಭಾಗಕ್ಕೂ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಚಿತ್ರವನ್ನು ಪವನ್‍ ಒಡೆಯರ್‍ ಅರ್ಪಿಸುತ್ತಿದ್ದು, ಇತ್ತೀಚೆಗೆ ಚಿತ್ರದ ಟ್ರೇಲರ್‍ ಬಿಡುಗಡೆಯಾಗಿದೆ.

‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ಚಿತ್ರದಲ್ಲಿ ವಿಜಯ್ ರಾಘವೇಂದ್ರ, ಗೋಪಾಲಕೃಷ್ಣ ದೇಶಪಾಂಡೆ ನಟಿಸಿದ್ದಾರೆ. ಫ್ಲೈಯಿಂಗ್ ಎಲಿಫಂಟ್ ಸ್ಟೋರಿ ಟೆಲ್ಲರ್ಸ್ ಸಂಸ್ಥೆ ಮೂಲಕ ದೇವಿ ಪ್ರಸಾದ್ ಶೆಟ್ಟಿ ಹಾಗೂ ಸಾತ್ವಿಕ್ ಹೆಬ್ಬಾರ್ ಈ ಚಿತ್ರ ನಿರ್ಮಿಸಿದ್ದಾರೆ. ಹೇಮಂತ್ ಆಚಾರ್ಯ ಛಾಯಾಗ್ರಹಣ ಹಾಗೂ ನವನೀತ್‍ ಶ್ಯಾಮ್ ಸಂಗೀತವಿರುವ ಚಿತ್ರ ಫೆ. 20ರಂದು ಬಿಡುಗಡೆಯಾಗುತ್ತಿದೆ.

ಎರಡನೇ ಕೇಸಿನ ಜೊತೆ ಬಂದ ಸೀತಾರಾಮ್‍; ಫೆ.20ರಂದು ಚಿತ್ರ ಬಿಡುಗಡೆ

Latest Posts

Discover more from KannadaScreens

Subscribe now to keep reading and get access to the full archive.

Continue reading