ಲೈಟ್‍ ಬಾಯ್‍ ಕೈಯಲ್ಲಿ ‘ಟಾಕ್ಸಿಕ್‍’ ಚಿತ್ರಕ್ಕೆ ಕ್ಲಾಪ್ ಮಾಡಿಸಿದ ಯಶ್‍

ಚಂದನವನ, ಪ್ಯಾನ್ ಇಂಡಿಯಾ, ಸಿನಿ ಸುದ್ದಿ

ಯಶ್‍ ಅಭಿನಯದ 19ನೇ ಚಿತ್ರ ‘ಟಾಕ್ಸಿಕ್‍’ ಯಾವಾಗ ಪ್ರಾರಂಭ ಎಂದು ಎಲ್ಲರೂ ತಲೆ ಕೆಡಿಸಿಕೊಂಡಿದ್ದರು. ಅದಕ್ಕೆ ಸರಿಯಾಗಿ, ಗುರುವಾರ ಬೆಳಿಗ್ಗೆ ಚಿತ್ರದ ಮುಹೂರ್ತವಾಗಿದ್ದು, ಇಂದಿನಿಂದಲೇ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದೆ.

‘ಟಾಕ್ಸಿಕ್‍’ ಚಿತ್ರದ ಅಧಿಕೃತ ಘೋಷಣೆ ಜನವರಿ 08ರಂದು ಆಗಿತ್ತು. ಈ ಮಧ್ಯೆ, ಚಿತ್ರದ ಚಿತ್ರೀಕರಣ ಸದ್ದಿಲ್ಲದೆ ಶುರುವಾಗಿದೆ ಎಂಬ ಮಾತುಗಳು ಸಹ ಇತ್ತು. ಆದರೆ, ಚಿತ್ರದ ಚಿತ್ರೀಕರಣ ಇಂದಿನಿಂದ ಅಧಿಕೃತವಾಗಿ ಪ್ರಾರಂಭವಾಗಿದೆ.

ಎಚ್‍.ಎಂ.ಟಿ ಫ್ಯಾಕ್ಟರಿಯಲ್ಲಿ ಚಿತ್ರಕ್ಕಾಗಿ ವಿಶೇಷ ಸೆಟ್‍ಗಳನ್ನು ನಿರ್ಮಾಣ ಮಾಡಲಾಗಿದ್ದು, ಅಲ್ಲೇ ಚಿತ್ರದ ಮುಹೂರ್ತ ನಡೆದಿದೆ. ಇಂದು ಬ್ರಾಹ್ಮಿ ಮುಹೂರ್ತದಲ್ಲಿ ಚಿತ್ರದ ಆರಂಭವಾಗಿದೆ. ಸಾಮಾನ್ಯವಾಗಿ, ಗಣ್ಯರನ್ನು ಕರೆಸಿ ಕ್ಯಾಮೆರಾ ಸ್ವಿಚ್ ಆನ್‍ ಮಾಡುವುದು, ಕ್ಲಾಪ್ ಮಾಡಿಸುವುದು ವಾಡಿಕೆ. ಆದರೆ, ಈ ಚಿತ್ರಕ್ಕೆ ಲೈಟ್ ಬಾಯ್‍ ಒಬ್ಬರಿಂದ ಕ್ಲಾಪ್‍ ಮಾಡಿಸಿದ್ದಾರೆ ಯಶ್‍.

‘ಟಾಕ್ಸಿಕ್‍’ ಚಿತ್ರವನ್ನು ಕೆವಿಎನ್‍ ಪ್ರೊಡಕ್ಷನ್ಸ್ ನಿರ್ಮಿಸುತ್ತಿದ್ದು, ಮಲಯಾಳಂ ನಿರ್ದೇಶಕಿ ಗೀತೂ ಮೋಹನ್‍ ದಾಸ್‍ ನಿರ್ದೇಶನ ಮಾಡುತ್ತಿದ್ದಾರೆ. ಇದೊಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂನಲ್ಲಿ ಬಿಡುಗಡೆ ಆಗುತ್ತಿದೆ.

‘ಲಾಫಿಂಗ್ ಬುದ್ಧ’ನ ಜೊತೆಗೆ ದಿಗಂತ್‍, ಆ.30ಕ್ಕೆ ಚಿತ್ರ ಬಿಡುಗಡೆ

Discover more from KannadaScreens

Subscribe now to keep reading and get access to the full archive.

Continue reading