ಚಂದನ್‍ ಶೆಟ್ಟಿ, ನಿವೇದಿತಾ ಗೌಡ ದಾಂಪತ್ಯ ಅಂತ್ಯ

ಕಿರುತೆರೆ, ಚಂದನವನ, ಸಿನಿ ಸುದ್ದಿ

ಇಂಥದ್ದೊಂದು ಸುದ್ದಿಯನ್ನು ಯಾರೂ ನಿರೀಕ್ಷಿಸಿರಲಿಲ್ಲ. ಅದರಲ್ಲೂ ಪರಸ್ಪರ ಪ್ರೀತಿಸಿ ಮದುವೆಯಾದ ಚಂದನ್‍ ಶೆಟ್ಟಿ ಮತ್ತು ನಿವೇದಿತಾ ಗೌಡ ದೂರಾಗಬಹುದು ಎಂದು ಯಾರೂ ಊಹಿಸಿರಲಿಲ್ಲ. ಆದರೆ, ಅದು ನಿಜವಾಗಿದೆ. ಚಂದನ್‍ ಮತ್ತು ನಿವೇದಿತಾ ಗೌಡ ಪರಸ್ಪರ ಒಪ್ಪಿಗೆ ಮೇರೆಗೆ ದೂರಾಗಿದ್ದಾರೆ.

ಚಂದನ್‍ ಶೆಟ್ಟಿ ಮತ್ತು ನಿವೇದಿತಾ ಗೌಡ ಪರಸ್ಪರ ಒಪ್ಪಿಗೆ ಮೇರೆಗೆ ಜೂನ್‍ 6ರಂದು ಶಾಂತಿನಗರದ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಸಂಬಂಧ ಜೂನ್ 7ರಂದು ಮೊದಲ ಹಾಗೂ ಆಗಸ್ಟ್ 31ರಂದು ಎರಡನೇ ವಿಚಾರಣೆಯನ್ನು ನಿಗದಿಪಡಿಸಲಾಗಿತ್ತು. ಆದರೆ, ಮೊದಲ ಮಧ್ಯಸ್ಥಿಕೆ ಸಭೆಯಲ್ಲೃ ಇಬ್ಬರೂ ಜೊತೆಯಾಗಿ ಇರಲು ಒಪ್ಪದ ಹಿನ್ನೆಲೆಯಲ್ಲಿ ಹಾಗೂ ತುರ್ತು ಕಾರಣ ನೀಡಿರುವುದರಿಮದ ಇಬ್ಬರಿಗೂ ವಿಚ್ಛೇದನ ಮಂಜೂರು ಮಾಡಲಾಗಿದೆ.

ಕನ್ನಡದಲ್ಲಿ Rapper ಆಗಿ ಗುರುತಿಸಿಕೊಂಡಿರುವ ಚಂದನ್‍ ಶೆಟ್ಟಿ ಮತ್ತು ನಿವೇದಿತಾ ಗೌಡ ಇಬ್ಬರೂ ‘ಬಿಗ್‍ ಬಾಸ್‍’ನ ಸೀಸನ್‍ ಐದರಲ್ಲಿ ಪರಿಚಿತರಾದರು. ಆ ಕಾರ್ಯಕ್ರಮದಲ್ಲಿ ಚಂದನ್‍ ಗೆದ್ದಿದ್ದರು. ಕಾರ್ಯಕ್ರಮದಲ್ಲಿ ಇಬ್ಬರೂ ಭಾಗವಹಿಸಿದ್ದ ಸಂದರ್ಭದಲ್ಲೇ ಪ್ರೇಮಾಂಕುರವಾಗಿತ್ತು. ಆ ನಂತರ 2019ರಲ್ಲಿ ಮೈಸೂರು ಯುವದಸರಾ ಕಾರ್ಯಕ್ರಮದ ವೇದಿಕೆಯಲ್ಲಿ ಚಂದನ್‍ ಪ್ರೇಮ ನಿವೇದನೆ ಮಾಡಿದ್ದರು. ಇದು ಸಾಕಷ್ಟು ವಿವಾದಗಳಿಗೂ ಕಾರಣವಾಗುವುದರ ಜೊತೆಗೆ ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತವಾಗಿತ್ತು.

ಆ ನಂತರ 2020ರ ಫೆಬ್ರವರಿಯಲ್ಲಿ ಮೈಸೂರಿನಲ್ಲಿ ಚಂದನ್‍ ಮತ್ತು ನಿವೇದಿತಾ ಮದುವೆಯಾಗಿದ್ದರು. ಬಳಿಕೆ ಈ ಜೋಡಿ ಕೆಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದರು. ಇನ್ನು, ಚಂದನ್‍ ಈ ಮಧ್ಯೆ, ಕನ್ನಡ ಚಿತ್ರರಂಗದಲ್ಲಿ ನಾಯಕನಾಗಿ ಕೆಲವು ಚಿತ್ರಗಳಲ್ಲಿ ನಟಿಸಿದರೆ, ‘ಜಿಎಸ್‍ಟಿ’ ಚಿತ್ರದಲ್ಲಿ ನಿವೇದಿತಾ ನಟಿಸಿದ್‍ದರು. ಇಬ್ಬರ ಚಿತ್ರಗಳು ಇನ್ನಷ್ಟೇ ಬಿಡುಗಡೆ ಆಗಬೇಕಿದೆ. ಇಬ್ಬರ ನಡುವೆ ಎಲ್ಲವೂ ಚೆನ್ನಾಗಿರುವಾಗಲೇ, ಈ ದಂಪತಿ ದೂರಾದ ಸುದ್ದಿ ಹೊರಬಂದಿದೆ.

ಈ ಕುರಿತು ಸೋಷಿಯಲ್‍ ಮೀಡಿಯಾದಲ್ಲಿ ಸುದ್ದಿ ಹಂಚಿಕೊಂಡಿರುವ ಅವರಿಬ್ಬರು, ‘ನಾವಿಬ್ಬರೂ ದಾಣಪತ್ಯ ಜೀವನವನ್ನು ಕಾನೂನು ಬದ್ಧವಾಗಿ ಪರಸ್ಫರ ಒಪ್ಪಿಗೆಯಿಮದ ಕೊನೆಗೊಳಿಸಿದ್ದೇವೆ. ನಮ್ಮ ನಿರ್ಧಾರ ಹಾಗೂ ಕಾಸಗಿತನವನ್ನು ಗೌರಿವಿಸುತ್ತಾರೆ ಎಂದು ನಂಬಿದ್ದೇನೆ. ಇಬ್ಬರೂ ದೂರಾಗಿದ್ದರೂ ಪರಸ್ಪತ ಒಬ್ಬರನ್ನೊಬ್ಬರು ಗೌರವಿಸುತ್ತೇವೆ’ ಎಂದಿದ್ದಾರೆ.

ಸೋಮಾರಿ ಸಹೋದರರ ಕಥೆ ‘ರಮೇಶ್‍ ಸುರೇಶ್‍’ …

Discover more from KannadaScreens

Subscribe now to keep reading and get access to the full archive.

Continue reading