‘ಬೊಂಬಾಟ್ ಭೋಜನ’ ಈಗ ಸಾವಿರದ ಸರದಾರ

ಕಿರುತೆರೆ, ಚಂದನವನ, ಸಿನಿ ಸುದ್ದಿ

ಸಿಹಿಕಹಿ ಚಂದ್ರು ಬರೀ ನಟನೆಗಷ್ಟೇ ಜನಪ್ರಿಯರಲ್ಲ, ಅಡುಗೆಗೂ ಬಹಳ ಜನಪ್ರಿಯರು. ಅಡುಗೆ ಮಾಡುವುದರ ಜೊತೆಗೆ, ಸಾಕಷ್ಟು ಅಡುಗೆ ಕಾರ್ಯಕ್ರಮಗಳನ್ನು ಅವರು ನಡೆಸಿಕೊಟ್ಟಿದ್ದಾರೆ ಮತ್ತು ನಡೆಸಿಕೊಡುತ್ತಲೇ ಇದ್ದಾರೆ.

ಇದೀಗ ಅವರು ಸ್ಟಾರ್‍ ಸುವರ್ಣದಲ್ಲಿ ನಡೆಸಿಕೊಡುತ್ತಿರುವ ‘ಬೊಂಬಾಟ್‍ ಭೋಜನ’ ಕಾರ್ಯಕ್ರಮವು ಇದೀಗ 1000 ಸಂಚಿಕೆಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ.

‘ಬೊಂಬಾಟ್ ಭೋಜನ’ದ ಮೂರನೇ ಆವೃತ್ತಿ ಇದಾಗಿದ್ದು, ಈ ಆವೃತ್ತಿಯು ಸಾಕಷ್ಟು ವೈಶಿಷ್ಟ್ಯತೆಗಳಿಂದ ತುಂಬಿದೆ. ನಮ್ಮೂರ ಊಟ, ಮನೆ ಊಟ, ಸವಿ ಊಟ, ಕೈ ರುಚಿ, ಅಂಗೈಯಲ್ಲಿ ಆರೋಗ್ಯ, ಅಂದ ಚೆಂದ ಹಾಗೂ ಅತಿಥಿ ದೇವೋಭವ ಎಂಬ ವಿಭಾಗಗಳನ್ನು ಹೊಂದಿದ್ದು ಸಾಕಷ್ಟು ಜನಪ್ರಿಯವಾಗಿದೆ.

ಹೀಗೆ ಹತ್ತು ಹಲವು ವಿಶೇಷತೆಗಳಿಂದ ಕೂಡಿರುವ ‘ಬೊಂಬಾಟ್ ಭೋಜನ’ ಕಾರ್ಯಕ್ರಮವು 1000 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿದ್ದು, ಸಾವಿರದ ಸಂಚಿಕೆಯಲ್ಲಿ ಕನ್ನಡ ಚಿತ್ರರಂಗದ ‘ಕನಸಿನ ರಾಣಿ’ ಮಾಲಾಶ್ರೀ ಭಾಗಿಯಾಗಲಿದ್ದಾರೆ. ಈ ಸಂಚಿಕೆಯು ಸ್ಟಾರ್ ಸುವರ್ಣದಲ್ಲಿ ಮಂಗಳವಾರ (ಡಿ. 26) ಮಧ್ಯಾಹ್ನ 12 ಗಂಟೆಗೆ ಪ್ರಸಾರವಾಗಲಿದೆ.

ಹೊಸ ವರ್ಷಕ್ಕೆ ಚಂದನ್‍ ಶೆಟ್ಟಿ ಹೊಸ ಹಾಡು …

Discover more from KannadaScreens

Subscribe now to keep reading and get access to the full archive.

Continue reading